Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ತೆಲುಗು ʻಬಿಗ್ ಬಾಸ್ ಸೀಸನ್ 9’ ಕಾರ್ಯಕ್ರಮವು ಈಗ ತನ್ನ ಅಂತಿಮ ಹಂತಕ್ಕೆ ಬಂದು ನಿಂತಿದೆ. ಟಾಲಿವುಡ್ ನಟ ನಾಗಾರ್ಜುನ ಅವರು ಹೋಸ್ಟ್ ಮಾಡುತ್ತಿರುವ ಈ ಜನಪ್ರಿಯ ರಿಯಾಲಿಟಿ ಶೋ ಸೆಪ್ಟೆಂಬರ್ 7ರಂದು ಆರಂಭವಾಗಿ, ಈಗ 14ನೇ ವಾರಕ್ಕೆ ಕಾಲಿಟ್ಟಿದೆ. ಅಂತೂ ಗ್ರ್ಯಾಂಡ್ ಫಿನಾಲೆಗೆ ತೆಲುಗು ʻಬಿಗ್ ಬಾಸ್ ಸೀಸನ್ 9ʼ ಸಿದ್ದವಾಗಿದೆ. ವಿಶೇಷ ಅಂತಂದರೆ, ಕನ್ನಡದ ನಟಿಯರು ಸಂಜನಾ ಗಲ್ರಾನಿ ಮತ್ತು ತನುಜಾ ಫೈನಲ್‌ಗೆ ತಲುಪಿದ್ದಾರೆ.
ಇನ್ನೂ ಕನ್ನಡದ ನಟಿ ತನುಜಾ ಪುಟ್ಟಸ್ವಾಮಿ ತೆಲುಗು ಕಿರುತೆರೆಯಲ್ಲಿ ದೊಡ್ಡ ಜನಪ್ರಿಯತೆ ಗಳಿಸಿದ್ದಾರೆ. ಕನ್ನಡದ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ತನುಜಾ ಪುಟ್ಟಸ್ವಾಮಿ, ʻಮುದ್ದ ಮಂದಾರಂʼ ಮತ್ತು ʻಅಗ್ನಿಪರೀಕ್ಷೆʼ ಧಾರಾವಾಗಿಗಳಲ್ಲಿ ನಟಿಸಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ವಿಶೇಷ ಅಂತಂದರೆ, ಫ್ಯಾಮಿಲಿ ವೀಕ್ ರೌಂಡ್‌ನಲ್ಲಿ ತನುಜಾ ಅವರು ತಮ್ಮ ತಂಗಿ ಜೊತೆಗೆ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಮನಗೆದ್ದಿದ್ದಾರೆ. ಅಂತಿಮವಾಗಿ ಸಂಜನಾ ಗಲ್ರಾನಿ ಮತ್ತು ತನುಜಾ ಪುಟ್ಟಸ್ವಾಮಿ ತೆಲುಗು ʻಬಿಗ್ ಬಾಸ್ 9’ರ ಫೈನಲ್ಸ್‌ಗೆ ಕಾಲಿಟ್ಟಿದ್ದಾರೆ.
ತೀವ್ರ ಸ್ಪರ್ಧೆ ಮತ್ತು ಎಲಿಮಿನೇಷನ್‌ಗಳ ನಂತರ ಟಾಪ್ 5 ಸ್ಪರ್ಧಿಗಳು ಫೈನಲ್ಸ್‌ಗೆ ಕಾಲಿಟ್ಟಿದ್ದಾರೆ. ತನುಜಾ ಪುಟ್ಟಸ್ವಾಮಿ, ಡೀಮನ್ ಪವನ್, ಕಲ್ಯಾಣ್ ಪಡಾಲ, ಇಮ್ಮಾನ್ಯುಯೆಲ್, ಸಂಜನಾ ಫೈನಲ್ಸ್‌ಗೆ ಕಾಲಿಟ್ಟಿದ್ದಾರೆ. ಕಳೆದ ವಾರದ ಎಲಿಮಿನೇಷನ್‌ನಲ್ಲಿ ಸುಮನ್ ಶೆಟ್ಟಿ ಮತ್ತು ಭರಣಿ ಶಂಕರ್ ಹೊರಬಿದ್ದಿದ್ದಾರೆ.
ಈ ಸೀಸನ್ ಉದ್ದಕ್ಕೂ ಡ್ರಾಮಾ ಮತ್ತು ಹಲವು ಟ್ವಿಸ್ಟ್‌ಗಳಿಂದ ತುಂಬಿದ್ದು, ಫಿನಾಲೆಯಲ್ಲಿ ಯಾರು ಟ್ರೋಫಿ ಎತ್ತಿ ಹಿಡಿಯುತ್ತಾರೆ ಎಂಬ ಕುತೂಹಲ ಉತ್ತುಂಗದಲ್ಲಿದೆ. ವರದಿಗಳ ಪ್ರಕಾರ, ʻಬಿಗ್ ಬಾಸ್ ತೆಲುಗು 9ʼರ ಗ್ರ್ಯಾಂಡ್ ಫಿನಾಲೆ ಡಿಸೆಂಬರ್ 21ರಂದು (ಭಾನುವಾರ) ನಡೆಯಲಿದೆ.
ವಿಜೇತರಿಗೆ ರೂ.50 ಲಕ್ಷ ನಗದು ಬಹುಮಾನ ಹಾಗೂ ʻಬಿಗ್ ಬಾಸ್ʼ ಟ್ರೋಫಿ ಸಿಗಲಿದೆ. ವೀಕ್ಷಕರ ಮತದಾನದ ಆಧಾರದ ಮೇಲೆ ಯಾರು ವಿನ್ನರ್ ಅನ್ನೋದು ಡಿಸೈಡ್ ಆಗಲಿದೆ.
ರಜೆ ಸಿಗದ್ದಕ್ಕೆ ಆನ್ಲೈನ್ನಲ್ಲೇ ನಿಶ್ಚಿತಾರ್ಥ; ಕೆನಡಾದಿಂದ ವಿಡಿಯೋ ಕಾಲ್ ಮೂಲಕ ಎಂಗೇಜ್ಮೆಂಟ್!