Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡಬೇಕು ಅಂತ ನಿರ್ಧಾರ ಮಾಡಿದಂತೆ ಇದೆ. ಈ ವಾರ ಕೂಡ ಡಬಲ್ ಎಲಿಮಿನೇಷನ್ ಅಂತ ಪ್ರೋಮೋ ಬಿಟ್ಟು ವೀಕ್ಷಕರಿಗೆ ನಿದ್ದೆ ಕೆಡಿಸಿದ್ದರು. ಅದರಲ್ಲೂ ವೀಕ್ಷಕರ ಫೇವರಿಟ್ ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಇಬ್ಬರೂ ಎಲಿಮಿನೇಟ್ ಆಗಿರೋದನ್ನು ರಿವೀಲ್ ಮಾಡಿದ್ದರು.
ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆಂದು ಭಾವಿಸಲಾದ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಸೀಕ್ರೆಟ್ ರೂಮ್ ಸೇರಿದ್ದಾರೆ. ಅಲ್ಲಿಂದಲೇ ಮನೆಯ ಸದಸ್ಯರ ಮಾತುಗಳನ್ನು ಕೇಳುತ್ತಿದ್ದು, ತಮ್ಮ ಬಗ್ಗೆ ಇತರರ ಅಭಿಪ್ರಾಯಗಳನ್ನು ತಿಳಿದುಕೊಂಡು ರಕ್ಷಿತಾ ಭಾವುಕರಾಗಿದ್ದಾರೆ.
ಸೀಕ್ರೆಟ್ ರೂಮ್ ಸೇರಿದ್ದಕ್ಕೆ ಧ್ರುವಂತ್ ಸಂತೋಷಗೊಂಡಿದ್ದಾರೆ. ಸೀಕ್ರೆಟ್ ರೂಮ್ನಲ್ಲಿ ಹೇಗೆ ಆಟ ಆಡಬೇಕು ಎಂಬುದನ್ನು ರಕ್ಷಿತಾ ಅವರಿಗೆ ಧ್ರುವಂತ್ ವಿವರಿಸಿದ್ದಾರೆ. ಧ್ರುವಂತ್ ಮತ್ತು ರಕ್ಷಿತಾ ಎಲಿಮಿನೇಟ್ ಆಗಿದ್ದಾರೆ ಎಂದು ತಿಳಿದುಕೊಂಡಿರುವ ಸದಸ್ಯರು ಇಬ್ಬರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ರಜತ್, ಚೈತ್ರಾ ಸೇರಿದಂತೆ ಮನೆಯ ಬಹುತೇಕ ಸದಸ್ಯರು ರಕ್ಷಿತಾ ಕುರಿತು ಒಳ್ಳೆಯ ಮಾತುಗಳನ್ನಾಡಿದ್ದಾರೆ. ಇದನ್ನೆಲ್ಲಾ ಕೇಳಿಸಿಕೊಂಡ ರಕ್ಷಿತಾ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಈ ಎಲ್ಲದರ ನಡುವೆ ಸೀಕ್ರೆಟ್ ರೂಮ್ನಲ್ಲಿ ಧ್ರುವಂತ್ ಜೊತೆ ಹೇಗಿರಬೇಕು ಎಂಬ ಚಿಂತೆಯಲ್ಲಿ ರಕ್ಷಿತಾ ಮುಳುಗಿದ್ದಾರೆ.