Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕ್ಲಬ್ ಮಾಲೀಕರನ್ನು ಖಾಸಗಿಯಾಗಿ ಭೇಟಿಯಾಗಲು ನಿರಾಕರಿಸಿದ್ದಕ್ಕೆ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದಿದೆ.
ನೈಟ್‌ಕ್ಲಬ್ ಮಾಲೀಕ ಮತ್ತು ಸಿಬ್ಬಂದಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅವರ ಪತಿಯ ಮೇಲೆ ಕ್ರೂರ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಖಾಸಗಿ ಭೇಟಿಗೆ ನಿರಾಕರಿಸಿದ್ದಕ್ಕಾಗಿ ಈ ಕ್ರೂರ ಕೃತ್ಯ ನಡೆದಿದ್ದು, ಸಮಾಜದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಪತಿಯ ಎರಡು ಕಾಲು ಮುರಿದಿದ್ದು, ಕಾರನ್ನು ಸಹ ಧ್ವಂಸಗೊಳಿಸಲಾಗಿದೆ ಎಂದು ಸಂತ್ರಸ್ತೆ ದೂರಿದ್ದಾರೆ.
ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ನೈಟ್‌ಕ್ಲಬ್‌ನ ಮಾಲೀಕನನ್ನು ಖಾಸಗಿಯಾಗಿ ಭೇಟಿಯಾಗಲು ನಿರಾಕರಿಸಿದ್ದಕ್ಕೆ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಪತಿಗೆ ಹಿಂಸೆ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ದೂರಿನಲ್ಲಿ ತಿಳಿಸಿದಂತೆ, ಮಹಿಳೆ ವಾಶ್ ರೂಮ್‌ಗೆ ತೆರಳಿದಾಗ ಮಾಲೀಕ ಭಾರತ್ ಟ್ಯಾಂಕ್, ಮ್ಯಾನೇಜರ್ ದೀಪಕ್ ಮತ್ತು ಬೌನ್ಸರ್‌ಗಳು ಸುತ್ತುವರೆದು ಅಸಭ್ಯವಾಗಿ ವರ್ತಿಸಿದರು. ಲೈಂಗಿಕ ದೌರ್ಜನ್ಯ ಎಸಗಿ ಕಿರುಕುಳ ನೀಡಿದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಸಹಾಯಕ್ಕಾಗಿ ಕೂಗಿಕೊಂಡಾಗ ಪತಿ ನವೇದ್ ಬಂದು ವಿರೋಧಿಸಿದ್ದು, ಆರೋಪಿಗಳು ಅವರ ಮೇಲೆ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದರು. ಹಲ್ಲೆಯ ತೀವ್ರತೆಗೆ ಪತಿಯ ಎರಡು ಕಾಲು ಮುರಿದಿದ್ದು, ದಂಪತಿಯ ಕಾರನ್ನು ಸಹ ಧ್ವಂಸಗೊಳಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.