Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಜಾಮ್ನಗರ: ಗರ್ಭಿಣಿ ಪತ್ನಿಯಿಂದ ದೂರವಾಗಿದ್ದ ಪತಿ ತನ್ನ ಹೆಂಡತಿಯ ಲಿವ್-ಇನ್ ಸಂಗಾತಿಯಲ್ಲಿ ಇರಿದು ಕೊಲೆಮಾಡಿರುವ ಘಟನೆ ಗುಜರಾತ್ನ ಜಾಮ್ನಗರದಲ್ಲಿ ನಡೆದಿದೆ.
ಕೊಲೆಯಾದ ಕೂಡಲೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿ, ಆತನ ಪತ್ನಿ ಹಾಗೂ ಆಕೆಯ ಸಂಗಾತಿಯ ನಡುವಿನ ದೀರ್ಘಕಾಲದ ಸಂಘರ್ಷವೇ ಕಾರಣ ಎಂದು ಹೇಳಲಾಗುತ್ತಿದೆ.
ಸೋನಾಲ್ಬೆನ್ ಎಂಬುವವರು ಈ ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನ್ನ ಮೇಲೆ ಪತಿ ಪದೇ ಪದೇ ಹಲ್ಲೆ ನಡೆಸುತ್ತಿದ್ದ, ಬೆದರಿಕೆ ಹಾಕುತ್ತಿದ್ದ ಹೀಗಾಗಿಯೇ ಪತಿ ದಿಲೀಪ್ನಿಂದ ದೂರವಾಗಿರುವುದಾಗಿ ತಿಳಿಸಿದ್ದಾರೆ. ಪತಿಯನ್ನು ಬೇರ್ಪಟ್ಟು ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದರು. ತಾನು ಗರ್ಭಿಣಿಯಾದಾಗಿನಿಂದ ಪತಿ ದಿಲೀಪ್ ಈ ಮಗು ತನ್ನದಲ್ಲ ಎಂದು ಹೇಳುತ್ತಲೇ ಇರುತ್ತಿದ್ದರು. ಇದರಿಂದಾಗಿ ಅವರಿಂದ ಬೇರ್ಪಟ್ಟು ಜಿತೇಂದ್ರ ಚಾವ್ಡಾ ಜತೆ ವಾಸಿಸುತ್ತಿದ್ದೆ ಎಂದು ಆಕೆ ಹೇಳಿದ್ದಾಳೆ.
ಸೋನಾಲ್ಬೆನ್ ತನ್ನ ಸಂಗಾತಿ ಜತೆ ನಡೆದುಕೊಂಡು ಹೋಗುತ್ತಿರುವಾಗ ದಿಲೀಪ್ ಅವರನ್ನು ತಡೆದು ಜಗಳವಾಡಿದ್ದಾನೆ. ಚಾಕು ತೆಗೆದು ನಾಲ್ಕೈದು ಬಾರಿ ಜಿತೇಂದ್ರಗೆ ಇರಿದಿದ್ದಾರೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆಂದು ಆಕೆ ತಿಳಿಸಿದ್ದಾರೆ. ಕೂಡಲೇ ಜಿತೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ನೀಡುವಷ್ಟರಲ್ಲಿ ಕೊನೆಯುಸಿರೆಳೆದಿದ್ದ.