Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್ ಒಂದರ ನಿವಾಸಿಗಳಿಗೆ ಅದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಓರ್ವ ಖಾಸಗಿ ವ್ಯಕ್ತಿಯಿಂದ ಮಾಟ-ಮಂತ್ರದ ಭೀತಿ ಹಾಗೂ ದೈಹಿಕ ಕಿರುಕುಳದ ನಿರಂತರ ಕಾಟ ಎದುರಾಗಿದೆ.
ಈ ವ್ಯಕ್ತಿಯ ರೌಡಿಸಂಗೆ ಹೆದರಿ 16 ಫ್ಲ್ಯಾಟ್‌ಗಳ ನಿವಾಸಿಗಳು ಮನೆಯಿಂದ ಹೊರಬರಲು ಕೂಡ ಭಯಪಡುತ್ತಿದ್ದಾರೆ. ಈ ಆಘಾತಕಾರಿ ಘಟನೆ ಬಿಟಿಎಂ ಲೇಔಟ್ ಫಸ್ಟ್ ಸ್ಟೇಜ್‌ನಲ್ಲಿರುವ ರಾಯಲ್ ಮೆನರ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಕಳೆದ ಜನವರಿ ತಿಂಗಳಿಂದ ಇಲ್ಲಿನ ನಿವಾಸಿಗಳು ನಿರಂತರವಾಗಿ ಈ ವ್ಯಕ್ತಿಯಿಂದ ಟಾರ್ಚರ್ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ.
ಅಪಾರ್ಟ್‌ಮೆಂಟ್‌ನ 16 ಫ್ಲ್ಯಾಟ್‌ಗಳಲ್ಲಿ ಒಂದು ಫ್ಲ್ಯಾಟ್‌ನಲ್ಲಿ ವಾಸವಾಗಿರುವ ಈ ಖಾಸಗಿ ವ್ಯಕ್ತಿ, ಇಡೀ ಅಪಾರ್ಟ್‌ಮೆಂಟ್ ಆಡಳಿತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾನೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಆತಂಕಕಾರಿ ವಿಷಯವೆಂದರೆ, ಆತ ನಿವಾಸಿಗಳ ಮನೆ ಬಾಗಿಲುಗಳಿಗೆ ಆಗಾಗ್ಗೆ ಮಾಟ-ಮಂತ್ರ ಮಾಡಿಸಿರುವಂತಹ ವಸ್ತುಗಳನ್ನು ಕಟ್ಟಿ ಹೋಗುತ್ತಿದ್ದಾನೆ.
ಇದರಿಂದಾಗಿ ಅಪಾರ್ಟ್‌ಮೆಂಟ್ ನಿವಾಸಿಗಳ ನೆಮ್ಮದಿ ಸಂಪೂರ್ಣವಾಗಿ ಹಾಳಾಗಿದೆ. ಈ ಮಾಟ-ಮಂತ್ರದ ಭಯದ ಜೊತೆಗೆ, ಈ ವ್ಯಕ್ತಿ ಅಪಾರ್ಟ್‌ಮೆಂಟ್‌ನ ಇತರ ನಿವಾಸಿಗಳಿಗೆ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದು, ‘ತಕ್ಷಣ ಫ್ಲ್ಯಾಟ್‌ಗಳನ್ನು ಖಾಲಿ ಮಾಡಿ ಹೋಗಿ’ಎಂದು ಒತ್ತಾಯಿಸುತ್ತಿದ್ದಾನೆ ಎನ್ನಲಾಗಿದೆ. ಈ ಬೆದರಿಕೆ ಮತ್ತು ಕಿರುಕುಳದಿಂದ ಬೇಸತ್ತ ಕುಟುಂಬಗಳು ಮಾನಸಿಕವಾಗಿ ತೀವ್ರ ಆಘಾತಕ್ಕೆ ಒಳಗಾಗಿವೆ.
ಖಾಸಗಿ ವ್ಯಕ್ತಿಯ ನಿರಂತರ ಟಾರ್ಚರ್ ಮತ್ತು ಮಾಟ-ಮಂತ್ರದ ಕಾಟದಿಂದ ಬೇಸತ್ತ ರಾಯಲ್ ಮೆನರ್ ಅಪಾರ್ಟ್‌ಮೆಂಟ್‌ನ ನಿವಾಸಿಗಳು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಯಾವುದೇ ಪರಿಣಾಮ ಬೀರದ ಕಾರಣ, ಅಂತಿಮವಾಗಿ ಪೊಲೀಸ್ ಮಹಾನಿರ್ದೇಶಕರ (DGP) ಕಚೇರಿಗೆ ದೂರು ನೀಡಿದ್ದಾರೆ.
ಸ್ತ್ರೀರೋಗ ತಜ್ಞೆ ಡಾ.ಜಯಶ್ರೀ ಹೊಮ್ಮರಡಿ, ಪುತ್ರ ಆಕಾಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ