Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ತಮಿಳು ಸಿನಿಮಾ ನಿರ್ಮಾಪಕ ಮತ್ತು ಚೆನ್ನೈನ ಎವಿಎಂ ಸ್ಟುಡಿಯೋಸ್ನ ಮಾಲೀಕ ಎಂ ಸರವಣನ್ (86ವ) ಅವರು ಡಿಸೆಂಬರ್ 4, ಗುರುವಾರ ವಯೋಸಹಜ ಅನಾರೋಗ್ಯದಿಂದ ನಿಧಾನರಾಗಿದ್ದಾರೆ.
ಎವಿಎಂ, ಭಾರತದ ಅತ್ಯಂತ ಹಳೆಯ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಒಂದು. ನಟಸಾರ್ವಭೌಮ ಡಾ ರಾಜ್ಕುಮಾರ್ ಅವರು ನಾಯಕನಾಗಿ ನಟಿಸಿದ ಮೊಟ್ಟ ಮೊದಲ ಸಿನಿಮಾ ಬೇಡರ ಕಣ್ಣಪ್ಪ ಸಿನಿಮಾ ನಿರ್ಮಾಣ ಮಾಡಿದ್ದು ಸಹ ಇದೇ ಎವಿಎಂ ನಿರ್ಮಾಣ ಸಂಸ್ಥೆ. ಇದೀಗ ಈ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಪಕರಾಗಿ ಹಲವಾರು ಸಿನಿಮಾಗಳನ್ನು ನಿರ್ಮಿಸಿ, ತಮಿಳು ಮಾತ್ರವಲ್ಲದೆ ದಕ್ಷಿಣ ಭಾರತದ ಲೆಜೆಂಡರಿ ನಿರ್ಮಾಪಕ ಎನಿಸಿಕೊಂಡಿದ್ದ ಎವಿಎಂ ಸರವಣನ್.
ಸರವಣನ್ ಅವರು, ರಜನೀಕಾಂತ್ ನಟನೆಯ ‘ಶಿವಾಜಿ’, ರಾಣಾ ದಗ್ಗುಬಾಟಿ ನಟನೆಯ ‘ಲೀಡರ್’, ಸೂರ್ಯ ನಟನೆಯ ‘ಅಯನ್’, ಪ್ರಭುದೇವ, ಕಾಜೊಲ್ ನಟನೆಯ ‘ಮಿನ್ಸರ ಕನವು’, ದಳಪತಿ ವಿಜಯ್ ನಟನೆಯ ‘ವೇಟ್ಟೈಕಾರನ್’, ಅಜಿತ್ ನಟನೆಯ ‘ತಿರುಪತಿ’, ವಿಕ್ರಂ ನಟನೆಯ ‘ಜೆಮಿನಿ’, ವಿಜಯ್ಕಾಂತ್ ನಟನೆಯ ‘ಶಕ್ತಿವೇಲ್ ಐಪಿಎಸ್’, ರಜನೀಕಾಂತ್ ನಟನೆಯ ‘ಯಜಮಾನ’, ಕಮಲ್ ಹಾಸನ್ ನಟನೆಯ ‘ಸಕಲಕಲಾವಲ್ಲಭನ್’, ಶಿವಾಜಿ ಗಣೇಶನ್ ನಟನೆಯ ಹಲವಾರು ಸಿನಿಮಾಗಳನ್ನು ಸರವಣ ನಿರ್ಮಾಣ ಮಾಡಿದ್ದರು.