Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮದುವೆಯ ಸಮಾರಂಭದಲ್ಲಿ ಅನೇಕ ಕಾರಣಗಳಿಂದ ಜಗಳ ನಡೆದು ಮದುವೆ ಮನೆ ರಣರಂಗವಾದ ಪ್ರಕರಣಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಮದುವೆ ಸಮಾರಂಭದಲ್ಲಿ ರಸಗುಲ್ಲಾ ವಿಚಾರಕ್ಕೆ ಜಗಳ ನಡೆದಿದೆ.
ಬಿಹಾರದ ಬೋಧ್ ಗಯಾದ ಹೋಟೆಲ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ರಸಗುಲ್ಲಾ ಕಡಿಮೆಯಾಯ್ತೆಂದು ವರನ ಕಡೆಯವರು ಕುರ್ಚಿಗಳನ್ನು ಮುರಿದು ರಾದ್ದಾಂತ ಮಾಡಿದ್ದಾರೆ.
ಈ ಘಟನೆಯ ನಂತರ ಮದುವೆಯನ್ನೇ ರದ್ದುಗೊಳಿಸಲಾಯಿತು. ವಧುವಿನ ಕುಟುಂಬವು ಅದೇ ಹೋಟೆಲ್‌ನಲ್ಲಿ ತಂಗಿತ್ತು. ಆರಂಭಿಕ ಆಚರಣೆಗಳನ್ನು ಮಾಡಿದ ನಂತರ, ವಧು-ವರರು ಸಪ್ತಪದಿ ತುಳಿಯಲೆಂದು ಮಂಟಪಕ್ಕೆ ಹೋಗುತ್ತಿದ್ದರು. ಆಗ ಈ ಘಟನೆ ನಡೆದಿದೆ.ವಧುವಿನ ಕುಟುಂಬವು ವರನ ಕುಟುಂಬದ ವಿರುದ್ಧ ವರದಕ್ಷಿಣೆ ಪ್ರಕರಣವನ್ನು ದಾಖಲಿಸಿದೆ.