Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮೃಗಾಲಯದಲ್ಲಿ ಯುವಕನೋರ್ವ ಹುಚ್ಚಾಟ ಮೆರೆದು ತನ್ನ ಪ್ರಾಣ ಕಳೆದುಕೊಂಡಿರುವ ಘಟನೆ ಬ್ರೆಜಿಲ್ನ ಅರುಡಾ ಕ್ಯಾಮರಾ ಮೃಗಾಲಯದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ, ಯುವಕನೊಬ್ಬ ಸಿಂಹವನ್ನು ಹತ್ತಿರದಿಂದ ನೋಡಲು ಪ್ರಯತ್ನಿಸಿದನು. ಹುಚ್ಚಾಟ ಮೆರೆದು ಯುವಕ ಮರ ಹತ್ತಿ ಸೀದಾ ಸಿಂಹ ಇರುವ ಬ್ಯಾರಕ್ ಗೆ ಇಳಿದನು. ಇದನ್ನು ನೋಡಿದ ಕೂಡಲೇ ಸಿಂಹ ಓಡಿ ಹೋಗಿ ಆತನನ್ನ ಎಳೆದುಕೊಂಡು ಪೊದೆಯ ಬಳಿ ಹೋಗಿ ತಿಂದು ಬಿಸಾಡಿತು.. ಪ್ರವಾಸಿಗರನ್ನು ತಮ್ಮ ಮೊಬೈಲ್ ನಲ್ಲಿ ವೀಡಿಯೋ ಸೆರೆಹಿಡಿದಿದ್ದಾರೆ.
ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವುದು ಮಾರಕ ಪರಿಣಾಮಗಳಿಗೆ ಕಾರಣವಾಗಬಹುದು. ಕಾಡು ಪ್ರಾಣಿಗಳ ಹತ್ತಿರ ಹೋಗಲು ಪ್ರಯತ್ನಿಸಬಾರದು ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.