Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಬೆಂಗಳೂರಿನ ಆಡಳಿತದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳಾಗಿವೆ. ಅದರಲ್ಲಿ ಮುಖ್ಯವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ಬದಲಾಗಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಆಗಿರುವುದು ಸಹ ಒಂದಾಗಿದೆ. ವಾರ್ಡ್‌ಗಳ ಸಂಖ್ಯೆ ಹೆಚ್ಚಳ, ವಾರ್ಡ್ ವಿಂಗಡಣೆ ಹಾಗೂ ವಾರ್ಡ್ ಗಡಿ ನಿಗದಿ ಪ್ರಕ್ರಿಯೆಗಳು ಸಹ ನಡೆದಿವೆ.
ಕೆಲವೊಂದು ಪ್ರಮುಖ ವಾರ್ಡ್‌ಗಳ ಹೆಸರು ಬದಲಾವಣೆ ಮತ್ತು ಹೊಸ ವಾರ್ಡ್‌ಗಳ ಸೃಷ್ಟಿಯೂ ಆಗಿದೆ. ಇದೀಗ ಕುಮಾರಸ್ವಾಮಿ ಲೇಔಟ್ ವಾರ್ಡ್‌ಗೆ ಯಾರಬ್ ನಗರ ವಾರ್ಡ್ ಅಂತ ಹೆಸರು ಬದಲಾಯಿಸಲಾಗಿದೆ.
ನಗರಾಭಿವೃದ್ಧಿ ಇಲಾಖೆಯು ಡಿಸೆಂಬರ್ 1 ರಂದು ಅಂತಿಮ ಅಧಿಸೂಚನೆ ಹೊರಡಿಸಿದ ನಂತರ, ವಾರ್ಡ್ ಹೆಸರು ಬದಲಾವಣೆಯ ಕುರಿತು ಇದು ಒಂದು ತಿಂಗಳಲ್ಲಿ ಎರಡನೇ ವಿವಾದವಾಗಿದೆ.
ಕುಮಾರಸ್ವಾಮಿ ಲೇಔಟ್‌ನ ಹೆಸರನ್ನು ‘ಯಾರಬ್ ನಗರ’ ಎಂದು ಬದಲಾಯಿಸಿರುವುದಕ್ಕೆ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಈ ಕ್ರಮವು ಕಾಂಗ್ರೆಸ್ ಸರ್ಕಾರದ *ತುಷ್ಟೀಕರಣ ರಾಜಕಾರಣದ ಭಾಗವಾಗಿದೆ ಎಂದು ಬಿಜೆಪಿ ಆರೋಪಿಸಿದೆ.