Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಭೀಕರ ಅಪಘಾತದಲ್ಲಿ ತಾಯಿ, ಮಗ ಸಾವನ್ನಪ್ಪಿರುವ ಘಟನೆ ಬ್ಯಾಟರಾಯನಪುರ ಸಂಚಾರ ಠಾಣೆ ವ್ಯಾಪ್ತಿಯ ಮೈಸೂರು ರಸ್ತೆಯ ಜುಡಿಯೋ ಎದುರು ಘಟನೆ ನಡೆದಿದೆ.
ಬೈಕ್ ನಲ್ಲಿದ್ದ ತಾಯಿ ಅಶ್ವಿನಿ, ಪುತ್ರ ಅಭಿಲಾಶ್ ಮೃತಪಟ್ಟವರು ಎಂದು ಹೇಳಲಾಗಿದೆ. ಮೈಸೂರು ರಸ್ತೆಯಿಂದ ಕೆಆರ್ ಮಾರುಕಟ್ಟೆ ಕಡೆಗೆ ಇಬ್ಬರು ಹೋಗುತ್ತಿದ್ದರು. ಕಾರ್ ಮತ್ತು ಕಂಟೇನರ್ ಮಧ್ಯೆ ಸವಾರ ಬೈಕ್ ಚಲಾಯಿಸಿದ್ದು, ಈ ವೇಳೆ ಕಂಟೇನರ್ ಗೆ ಟಚ್ ಆಗಿ ಕೆಳಗೆ ಬಿದ್ದ ತಾಯಿ, ಮಗನ ತಲೆಗೆ ತೀವ್ರ ಪೆಟ್ಟಾಗಿದೆ.
ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. L