ಬೆಂಗಳೂರು: ಪ್ರಿಯತಮನಿಂದ ಮೋಸ ಹೋಗಿ ಲೈಂಗಿಕ ಕಿರುಕುಳಕ್ಕೆ ನೊಂದು ನಟಿ ಆಶಿಕಾ ರಂಗನಾಥ್ ಅವರ ಮಾವನ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹಾಸನ ಮೂಲದ ಅಚಲ (22) ಆತ್ಮಹತ್ಯೆಗೆ ಶರಣಾಗಿರುವ ಯುವತಿ.
ಅಚಲ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ಕೆಲಸ ಹುಡುಕುತ್ತಿದ್ದರು. ಹಾಸನದ ಸಂಬಂಧಿಯೇ ಆಗಿರುವ ಮಯಾಂಕ್ ಎಂಬಾತ ಅಚಲಾಳನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಮಯಾಂಕ್ ತಾಯಿ ಹಾಗೂ ಅಚಲಾಳ ಕುಟುಂಬ ಕೂಡ ಮದುವೆಗೆ ಒಪ್ಪಿದ್ದರು. ಕೆಲ ದಿನಗಳ ಬಳಿಕ ಮಯಾಂಕ್ ಸರಿಯಿಲ್ಲ, ಆತ ಕೆಟ್ಟ ಚಟಗಳಿಗಿಗೆ ದಾಸನಾಗಿದ್ದಾನೆ ಎಂಬುದು ಗೊತ್ತಾಗಿದೆ. ಅಲ್ಲದೇ ಹಲವು ಹುಡುಗಿಯರ ಸಹವಾಸವಿದೆ ಎಂಬುದು ತಿಳಿದು ಅಚಲಾ ಆಘಾತಕ್ಕೊಳಗಾಗಿದ್ದಳು. ವಿಷಯ ತಿಳಿದು ತೀವ್ರವಾಗಿ ನೊಂದಿದ್ದ ಅಚಲಾ ಹಾಸನಿಂದ ಬೆಂಗಳೂರಿಗೆ ಬಂದು ಕೆಲಸ ಹುಡುಕುತ್ತಿದ್ದರು.
ಕೆಲ ದಿನಗಳ ಹಿಂದಷ್ಟೆ ಹುಟ್ಟುಹಬ್ಬವನ್ನು ಆಚರಿಸಿದ್ದ ಅಚಲಾಳಿಗೆ ಮಯಾಂಕ್ ಬೆಂಗಳೂರಿಗೂ ಬಂದು ಕಿರುಕುಳ ನೀಡಿದ್ದ ಎನ್ನಲಾಗಿದೆ. ಲೈಂಗಿಕ ಕಿರುಕುಳ, ಹಿಂಸೆ ಕೂಡ ನೀಡನಂತೆ ಇದರಿಂದ ತೀವ್ರವಾಗಿ ಮನನೊಂದಿದ್ದ ಅಚಲಾ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.