Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಆರಂಭ ಆದ ದಿನದಿಂದಲೂ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಡುವೆ ಕಿತ್ತಾಟ ನಡೆಯುತ್ತಲೇ ಇರುತ್ತೆ. ಒಂದಲ್ಲ ಒಂದು ಕಾರಣಕ್ಕೆ ಇಬ್ಬರೂ ಜಗಳ ಆಡೋದು ಕಾಮನ್ ಆಗಿದೆ. ಹೀಗಿರುವಾಗಲೇ ಗಿಲ್ಲಿ ಅವರು ಅಶ್ವಿನಿ ಬಳಿ ಕ್ಷಮೆ ಕೇಳಿದ್ದಾರೆ. ಇದು ಸಾಕಷ್ಟು ಅಚ್ಚರಿ ಮೂಡಿಸಿದೆ.
ಕ್ಯಾಪ್ಟನ್ಸಿ ರೇಸ್ನಲ್ಲಿ ಅಭಿಷೇಕ್ ಹಾಗೂ ಅಶ್ವಿನಿ ಗೌಡ ಇದ್ದರು. ಇಬ್ಬರೂ ಸರದಿಯಲ್ಲಿ ಬಂದು ಕೂರಬೇಕು. ಹೀಗೆ ಕೂತಾಗ ಮನಸ್ಸಿನಲ್ಲೇ ಲೆಕ್ಕ ಹಾಕಿ 12 ನಿಮಿಷ ಆದ ಬಳಿಕ ಗಂಟೆ ಬಾರಿಸಬೇಕು. 12 ನಿಮಿಷಕ್ಕೆ ಯಾರು ಹತ್ತಿರವಿದ್ದಾರೋ ಅವರು ವಿನ್ ಆದಂತೆ. ಈ ಸಂದರ್ಭದಲ್ಲಿ ಅಶ್ವಿನಿ ಅವರ ಲೆಕ್ಕಾಚಾರ ತಪ್ಪಿಸಲು ಅವಕಾಶ ಇತ್ತು. ಗಿಲ್ಲಿ ಅವರು ಹೋಗಿ ಅಶ್ವಿನಿ ಅವರನ್ನು ಟೀಕೆ ಮಾಡಲು ಆರಂಭಿಸಿದರು. ಅಲ್ಲಿ ಆಡಿದ ಮಾತುಗಳಲ್ಲಿ ಕೆಲವು ಮಿತಿಮೀರಿತ್ತು. ಇದು ಅಶ್ವಿನಿ ಗೌಡ ಅವರಿಗೆ ಬೇಸರ ಮೂಡಿಸಿದೆ.
ಇದಾದ ಬಳಿಕ ಅಶ್ವಿನಿ ಗೌಡ ಅವರು ರೂಂನಲ್ಲಿ ಮಲಗಿ ಅತ್ತಿದ್ದಾರೆ. ಈ ವಿಚಾರದಲ್ಲಿ ಜಾನ್ವಿ ಅವರು ಗಿಲ್ಲಿ ಜೊತೆ ಮಾತನಾಡಿದರು. ಅಶ್ವಿನಿ ಗೌಡ ಸಾಕಷ್ಟು ಬೇಸರ ಮಾಡಿಕೊಂಡಿದ್ದಾರೆ ಎಂದು ಗಿಲ್ಲಿಗೆ ಹೇಳಿದರು. ‘ಆಟವನ್ನು ಆಟವಾಗಿ ತೆಗೆದುಕೊಳ್ಳಬೇಕು. ಅದಕ್ಕೆ ಈ ರೀತಿ ಮಾಡೋದು ಸರಿಯಲ್ಲ, ಛೇ’ ಎಂದರು ಗಿಲ್ಲಿ. ಅವರಿಗೆ ತಪ್ಪಿತಸ್ಥ ಭಾವನೆ ಕಾಡಿದೆ. ಆ ಬಳಿಕ ಅಶ್ವಿನಿ ಅವರು ಇದ್ದಲ್ಲೇ ತೆರಳಿ ಕ್ಷಮೆ ಕೇಳಿದ್ದಾರೆ.ಈ ಕ್ಷಮಾಪಣೆ ರಘು ಅವರಿಗೆ ಅಚ್ಚರಿ ಮೂಡಿಸಿದೆ.
https://www.newsics.com/2025/11/22/who-is-wing-commander-namansh-sal-the-pilot-of-the-crashed-tejas/