Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ವಿದ್ಯಾರ್ಥಿಗಳ ವಿದೇಶ ಪ್ರಯಾಣಕ್ಕೆ ಸಂಬಂಧಿಸಿದ ಮುಂಗಡ ಹಣದ ವಿಚಾರದಲ್ಲಿ ಅಕ್ರಮವೆಸಗಿ, 1.9 ಕೋಟಿ ರೂಪಾಯಿಗಳನ್ನು ಲೂಟಿ ಮಾಡಿದ ಆರೋಪದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಮೂವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಮಹಿಳೆಯರು ಸೇರಿ ಮೂವರು ಆರೋಪಿಗಳನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ)ಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಈ ಆರೋಪಿಗಳು, ದಾಖಲೆಗಳನ್ನು ನಕಲು ಮಾಡಿ ವಿದ್ಯಾರ್ಥಿಗಳ ಅಕೌಂಟ್‌ಗಳನ್ನು ಹ್ಯಾಕ್ ಮಾಡಿ ಹಣವನ್ನು ಕುಟುಂಬಸ್ಥರ ಖಾತೆಗಳಿಗೆ ವರ್ಗಾಯಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಆರೋಪಿಗಳಲ್ಲಿ ದೀಪಿಕಾ ಮತ್ತು ಸೌಂದರ್ಯ ಎಂಬ ಇಬ್ಬರು ಮಹಿಳೆಯರು ಐಐಎಸ್‌ಸಿಯಲ್ಲಿ ತಾತ್ಕಾಲಿಕ ಸಹಾಯಕ ಕಾರ್ಯದರ್ಶಿಗಳಾಗಿ ಕೆಲಸ ಮಾಡುತ್ತಿದ್ದರು. ವಿದ್ಯಾರ್ಥಿಗಳ ವಿದೇಶ ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಕಲಿ ಮಾಡಿ, ಅವುಗಳ ಮೂಲಕ ಮುಂಗಡ ಹಣವನ್ನು ಲಪಟಾಯಿಸುತ್ತಿದ್ದರು. ವಿದ್ಯಾರ್ಥಿಗಳ ಅಕೌಂಟ್‌ಗಳನ್ನು ಎಡಿಟ್ ಮಾಡಿ, ಹಣವನ್ನು ತಮ್ಮ ಕುಟುಂಬಸ್ಥರ ಖಾತೆಗಳಿಗೆ ವರ್ಗಾಯಿಸುವ ಮೂಲಕ ಈ ಲೂಟಿ ಮಾಡುತ್ತಿದ್ದರು. ಈ ರೀತಿಯ ಅಕ್ರಮದಿಂದಾಗಿ ಒಟ್ಟು 1.9 ಕೋಟಿ ರೂಪಾಯಿಗಳನ್ನು ಲೂಟಿ ಮಾಡಲಾಗಿದೆ.
ದೀಪಿಕಾ ಮತ್ತು ಸೌಂದರ್ಯರ ವಿರುದ್ಧ ಆಗಲೇ ಪ್ರಕರಣ ದಾಖಲಾಗಿತ್ತು. ಆರಂಭದಲ್ಲಿ ಸದಾಶಿವನಗರ ಪೊಲೀಸರು ಈ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ವಿಚಾರಣೆಯಲ್ಲಿ ಆರೋಪಿಗಳು ತಮ್ಮ ಸ್ನೇಹಿತನೊಬ್ಬ ಸಚಿನ್ ರಾವ್ ಈ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾನೆ ಎಂದು ಬಾಯ್ಬಿಟ್ಟಿದ್ದಾರೆ. ಈ ಮಾಹಿತಿಯ ಆಧಾರದಲ್ಲಿ ಪೊಲೀಸರು ಸಚಿನ್ ರಾವ್‌ನನ್ನು ಬಂಧಿಸಿದ್ದಾರೆ. ಈಗ ಮೂವರು ಆರೋಪಿಗಳು ಪೊಲೀಸ್ ವಶದಲ್ಲಿದ್ದು, ತೀವ್ರ ವಿಚಾರಣೆ ನಡೆಯುತ್ತಿದೆ.
ಬಂಧಿತರಿಂದ 70-80 ಲಕ್ಷ ರೂಪಾಯಿ ಬೆಲೆಬಾಳುವ ಎರಡು ಮನೆಗಳ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಜತೆ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 11 ಲಕ್ಷ ರೂ.ಗಳ ನಗದು ಮತ್ತು 10 ಲಕ್ಷ ರೂ. ಮೌಲ್ಯದ ಕಾರನ್ನೂ ವಶಕ್ಕೆ ಪಡೆದಿದ್ದಾರೆ. ಈ ಸಂಪತ್ತುಗಳು ಅಕ್ರಮ ಹಣದಿಂದ ಗಳಿಸಿದ್ದು ಎಂದು ಪೊಲೀಸರು ಶಂಕಿಸಿದ್ದಾರೆ.
Illicit affair ಅಕ್ರಮ ಸಂಬಂಧ ಪ್ರಶ್ನಿಸಿದ ಪತಿಯ ಮರ್ಮಾಂಗ ಹಿಸುಕಿ ಕೊಂದ ಪತ್ನಿ, ಮಕ್ಕಳು ಅನಾಥ