Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ವ್ಹಿಲಿಂಗ್ ಥ್ರಿಲ್ ಗಾಗಿ ಬುಲೆಟ್ (ರಾಯಲ್ ಎನ್ ಫೀಲ್ಡ್) ಬೈಕ್ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಸೈಕೋ ಖದೀಮನನ್ನು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಸೈಕೋ ಕಳ್ಳ ರಾಜು ಎನ್ನುವಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮಾರು 1 ಕೋಟಿ 25 ಲಕ್ಷ ಮೌಲ್ಯದ ಒಟ್ಟು 42 ರಾಯಲ್ ಎನ್ ಫೀಲ್ಡ್ ಬೈಕ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸೈಕೋ ಕಳ್ಳ ವ್ಹಿಲಿಂಗ್ ಮಾಡಿ ಪೆಟ್ರೋಲ್ ಖಾಲಿಯಾದ ಬಳಿಕ ಬೈಕ್ ನ ಬಿಟ್ಟು ಹೋಗುತ್ತಿದ್ದ.
ಮೂರು ಬೈಕ್ ಕಳ್ಳತನ ಪ್ರಕರಣ ಸಂಬಂಧ ತನಿಖೆಗೆ ಇಳಿದಿದ್ದ ಆಡುಗೋಡಿ ಪೊಲೀಸರಿಗೆ ಈ ಸೈಕೋ ಕಳ್ಳ ಸಿಕ್ಕಿಬಿದ್ದಿದ್ದಾನೆ.