Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ದಕ್ಷಿಣ ಭಾರತದ ಅತಿ ಬೇಡಿಕೆಯ ನಟಿಯರಲ್ಲಿ ಒಬ್ಬರಾದ ನಯನತಾರಾ ತಮ್ಮ ಪತಿಯೊಂದಿಗೆ ಕರ್ನಾಟಕದ ಪ್ರಸಿದ್ಧ ಸರ್ಪ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಅವರು ಈ ಪವಿತ್ರ ಆಲಯದಲ್ಲಿ ಸರ್ಪಸಂಸ್ಕಾರ ಪೂಜೆಯನ್ನೂ ನೆರವೇರಿಸಿದ್ದಾರೆ.
ಈ ಹಿಂದೆ ಅನೇಕ ಸಿನಿಮಾ ನಟ-ನಟಿಯರು ಸಹ ಕುಕ್ಕೆ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ, ಸರ್ಪ ಶಾಂತಿ, ರಾಹು-ಕೇತು ಪೂಜೆ ಮಾಡುವ ಮೂಲಕ ತಮ್ಮ ಜೀವನವನ್ನು ಪಾವನಗೊಳಿಸಿಕೊಂಡಿದ್ದಾರೆ.
ಬಹಳಷ್ಟು ದಂಪತಿಗಳು ವಿವಾಹವಾಗಿ ಸಾಕಷ್ಟು ವರ್ಷ ಕಳೆದರೂ ಸಂತಾನ ಫಲ ದೊರೆಯದವರು ಈ ಕ್ಷೇತ್ರದಲ್ಲಿ ವಿಶೇಷ ಪೂಜೆ ಮಾಡಿಸುವ ಮೂಲಕ ಸಂತಾನ ಪಡೆದುಕೊಂಡಿದ್ದಾರೆ.
ಭಾರತದ ಕೆಲವೇ ಕೆಲವು ಮಹಿಮಾನ್ವಿತ ಸರ್ಪ ಕ್ಷೇತ್ರಗಳಲ್ಲಿ ನಮ್ಮ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನರುವ ಈ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವು ಒಂದಾಗಿದೆ.
ಈ ದೇವಾಲಯವು ವಿಶೇಷವಾಗಿ ಕಾರ್ತಿಕೇಯ, ಮುರುಗನ್, ಷಣ್ಮುಖ, ಸುಬ್ರಹ್ಮಣ್ಯ ಸ್ವಾಮಿ ಎಂದು ಕರೆಯಲ್ಪಡುವ ಶಿವನ ಮಗನಿಗೆ ಸಮರ್ಪಿತವಾಗಿದೆ.
ಈ ದೇವಸ್ಥಾನದಲ್ಲಿ ಕಾರ್ತಿಕೇಯನನ್ನು ‘ಸರ್ಪ ರೂಪ’ದಲ್ಲಿ ಆರಾಧಿಸಲಾಗುತ್ತದೆ. ಈ ಕ್ಷೇತ್ರವು ವಿಶೇಷವಾಗಿ ಸರ್ಪ ದೋಷ ನಿವಾರಣೆಗಾಗಿ ಪ್ರಸಿದ್ಧಿ ಹೊಂದಿದೆ. ಜನರು ಇಲ್ಲಿ ಸರ್ಪ ಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಾ ಬಲಿ ಸೇರಿದಂತೆ ಇನ್ನು ವಿವಿಧ ಪೂಜೆಗಳನ್ನು ಮಾಡಿಸುವ ಮೂಲಕ ನಾಗದೋಷದಿಂದ ಮುಕ್ತರಾಗುತ್ತಾರೆ.
ಪ್ರವೇಶ ಸಮಯ:
ಶನಿವಾರ: ಬೆಳಗ್ಗೆ 3:30 ರಿಂದ 1:30 ರವರೆಗೆ, ಮಧ್ಯಾಹ್ನ 3:30 ರಿಂದ ರಾತ್ರಿ 8:30 ರವರೆಗೆ.
ಭಾನುವಾರ: ಬೆಳಗ್ಗೆ 3:30 ರಿಂದ 1:30 ರವರೆಗೆ, ಮಧ್ಯಾಹ್ನ 3:30 ರಿಂದ ರಾತ್ರಿ 8:30 ರವರೆಗೆ.
ಸೋಮವಾರ: ಬೆಳಗ್ಗೆ 3:30 ರಿಂದ 1:30 ರವರೆಗೆ, ಮಧ್ಯಾಹ್ನ 3:30 ರಿಂದ ರಾತ್ರಿ 8:30 ರವರೆಗೆ.
ಮಂಗಳವಾರ: ಬೆಳಗ್ಗೆ 3:30 ರಿಂದ 1:30 ರವರೆಗೆ, ಮಧ್ಯಾಹ್ನ 3:30 ರಿಂದ ರಾತ್ರಿ 8:30 ರವರೆಗೆ.
ಬುಧವಾರ: ಬೆಳಗ್ಗೆ 3:30 ರಿಂದ 1:30 ರವರೆಗೆ, ಮಧ್ಯಾಹ್ನ 3:30 ರಿಂದ ರಾತ್ರಿ 8:30 ರವರೆಗೆ.
ಗುರುವಾರ: ಬೆಳಗ್ಗೆ 3:30 ರಿಂದ 1:30 ರವರೆಗೆ, ಮಧ್ಯಾಹ್ನ 3:30 ರಿಂದ ರಾತ್ರಿ 8:30 ರವರೆಗೆ.
ಶುಕ್ರವಾರ: ಬೆಳಗ್ಗೆ 3:30 ರಿಂದ 1:30 ರವರೆಗೆ, ಮಧ್ಯಾಹ್ನ 3:30 ರಿಂದ ರಾತ್ರಿ 8:30 ರವರೆಗೆ.
ಶನಿವಾರ: ಬೆಳಗ್ಗೆ 3:30 ರಿಂದ 1:30 ರವರೆಗೆ, ಮಧ್ಯಾಹ್ನ 3:30 ರಿಂದ ರಾತ್ರಿ 8:30 ರವರೆಗೆ.
TTD Ghee ತಿರುಪತಿ ನಕಲಿ ತುಪ್ಪ ಪ್ರಕರಣ: ಸುಬ್ಬಾರೆಡ್ಡಿ ಆಪ್ತರಿಂದ ಲಂಚ, 4.69 ಕೋಟಿ ವಶಕ್ಕೆ ಪಡೆದ ಎಸ್ಐಟಿ
ಜ.26ರಂದು ಭಾರೀ ದಾಳಿಗೆ ಸಂಚು ರೂಪಿಸಿದ್ದ ಉಗ್ರರು: ಕಾರು ಸ್ಫೋಟ ತನಿಖೆ ವೇಳೆ ಬಹಿರಂಗ