Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಐಟಿ ಸಿಟಿ ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ದಿನಕ್ಕೊಂದು ಪೋಸ್ಟ್ ವೈರಲ್ ಆಗುತ್ತಿರುತ್ತದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಭಾರೀ ವೈರಲ್ ಆಗಿದೆ.
ಟಿಕ್ಕಿಗಳು ಚರಂಡಿಯಲ್ಲಿ ಬೈಕ್ ಓಡಿಸಿಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದು ಬೆಂಗಳೂರು ನಗರದ ಪಣತ್ತೂರು ರಸ್ತೆ. ಈ ರಸ್ತೆ ಎಷ್ಟು ಹದಗೆಟ್ಟಿದೆ ಎಂದರೆ ಟೆಕ್ಕಿಗಳು ಪ್ರತಿದಿನ ಜೀವ ಕೈಯಲ್ಲಿ ಹಿಡಿದುಕೊಂಡು ಇಂತಹ ರಸ್ತೆಯಲ್ಲಿ ಸಂಚಾರವನ್ನು ನಡೆಸಬೇಕು. ಐಟಿ ಉದ್ಯಮಕ್ಕೆ ಸರ್ಕಾರ ನೀಡುತ್ತಿರುವ ಸೌಲಭ್ಯ ಎಷ್ಟು ಕೆಟ್ಟದಾಗಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಈ ವಿಡಿಯೋವನ್ನು ಟೆಕ್ಕಿಯೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬೆಂಗಳೂರು ಪಣತ್ತೂರು ಪ್ರದೇಶದಲ್ಲಿ ರಸ್ತೆಯ ಸ್ಥಿತಿ ಇದು. ಈ ಕಾರಣದಿಂದ ಐಟಿ ಉದ್ಯೋಗಿಗಳು ಕಚೇರಿಗೆ ಹೋಗಲು ಸಾಹಸ ಪಡೆಬೇಕಿದೆ. ರಸ್ತೆ ಅತಿ ಕೆಟ್ಟ ಸ್ಥಿತಿಯಲ್ಲಿ ಇದ್ದು, ಅವರು ಚರಂಡಿಯಲ್ಲಿ ಸಂಚಾರ ಮಾಡುತ್ತಿದ್ದಾರೆ. ದಯವಿಟ್ಟು ಸರ್ಕಾರ ಮೇಲೆ ತಕ್ಷಣ ಕ್ರಮ ಕೈಗೊಳ್ಳಿ ಅಥವಾ ಕನಿಷ್ಠ ಸುಲಭವಾಗಿ ಸಂಚಾರ ಮಾಡಲು ಏನಾದರೂ ವ್ಯವಸ್ಥೆ ಮಾಡಿ.
https://x.com/CivicOp_india/status/1986451490345787917?ref_src=twsrc%5Etfw%7Ctwcamp%5Etweetembed%7Ctwterm%5E1986451490345787917%7Ctwgr%5E40d29e3eab5c7ee1a6e92a6286e288d4a6c67673%7Ctwcon%5Es1_c10&ref_url=https%3A%2F%2Fapi-news.dailyhunt.in%2F