Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಜೂನಿಯರ್ ಎನ್‌ಟಿಆರ್ ಅವರ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ‘RRR’ ಸಿನಿಮಾದಲ್ಲಿ ಅಷ್ಟು ಗಟ್ಟಿಮುಟ್ಟಾಗಿ, ಹುಲಿಯನ್ನೇ ಹಿಡಿಯೋ ರೇಂಜ್‌ಗೆ ಫಿಟ್ ಆಗಿ ಕಾಣಿಸಿಕೊಂಡಿದ್ದ ನಮ್ಮ ತಾರಕ್, ಈಗ ಇದ್ದಕ್ಕಿದ್ದಂತೆ ಪೂರ್ತಿ ಸಣ್ಣಗಾಗಿಬಿಟ್ಟಿದ್ದಾರೆ. ಈ ಹೊಸ ಫೋಟೋ ನೋಡಿದ ಫ್ಯಾನ್ಸ್‌ಗೆಲ್ಲಾ ಒಂದು ಕ್ಷಣ ಶಾಕ್ ಆಗಿದೆ.
ಮುಖವೆಲ್ಲಾ ಒಳಗೆ ಹೋದ ಹಾಗೆ, ಕಣ್ಣುಗಳು ದೊಡ್ಡದಾಗಿ ಕಾಣ್ತಿವೆ. ಈ ರೇಂಜ್‌ಗೆ ತೆಳ್ಳಗಾಗಿದ್ದು ನೋಡಿ ಅಭಿಮಾನಿಗಳಿಗೆ ಆಶ್ಚರ್ಯದ ಜೊತೆಗೆ ದೊಡ್ಡ ಕಳವಳವೇ ಶುರುವಾಗಿಬಿಟ್ಟಿದೆ.
ಆದರೆ, ಫ್ಯಾನ್ಸ್ ಆತಂಕ ಪಡುವಂಥದ್ದೇನೂ ಆಗಿಲ್ಲ. ಅಸಲಿ ವಿಚಾರ ಬೇರೇನೇ ಇದೆ. ಹೌದು, ಜೂನಿಯರ್ ಎನ್‌ಟಿಆರ್ ಅವರ ಈ ಹೊಸ ಅವತಾರಕ್ಕೆ ಕಾರಣ ಅವರ ಮುಂದಿನ ಸಿನಿಮಾ.
ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾಗಾಗಿ ಜೂನಿಯರ್ ಎನ್‌ಟಿಆರ್ ಈ ತೀವ್ರ ರೂಪಾಂತರಕ್ಕೆ ಒಳಗಾಗಿದ್ದಾರೆ. ಈ ಸಿನಿಮಾಗೆ ಸದ್ಯಕ್ಕೆ ‘ಡ್ರ್ಯಾಗನ್’ ಅಂತ ಹೆಸರಿಡಲಾಗಿದೆ ಎನ್ನಲಾಗ್ತಿದೆ. ಈ ಚಿತ್ರದಲ್ಲಿ ಭಯಂಕರ ಹೈ-ಆಕ್ಟೇನ್ ಆಕ್ಷನ್ ದೃಶ್ಯಗಳಿವೆಯಂತೆ. ಆ ಪಾತ್ರಕ್ಕೆ ಪಕ್ಕಾ ಫ್ರೆಶ್ ಆಗಿರೋ, ಸಖತ್ ಚುರುಕಾಗಿರೋ ಲುಕ್ ಬೇಕಾಗಿತ್ತಂತೆ. ಅದಕ್ಕಾಗಿಯೇ ಎನ್‌ಟಿಆರ್ ಇಷ್ಟೊಂದು ಕಠಿಣವಾದ ಡಯಟ್ ಮತ್ತು ಫಿಟ್‌ನೆಸ್ ಪಾಲಿಸಿ, ತಮ್ಮ ದೇಹದ ತೂಕವನ್ನೇ ಗಮನಾರ್ಹವಾಗಿ ಇಳಿಸಿಕೊಂಡಿದ್ದಾರೆ.
ಮದುವೆ ಮನೆಯಲ್ಲಿ ರೊಟ್ಟಿಗೆ ತನ್ನ ಎಂಜಲನ್ನೇ ಹಾಕಿ ಬಡಿಸ್ತಿದ್ದ! ವೈರಲ್ ವೀಡಿಯೊ ನೋಡಿ