Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸಾಕಷ್ಟು ಹರೆಯದ ಹುಡುಗಿಯರು ಈಗಾಗಲೆ ಮದುವೆಯಾಗಿ ಮಕ್ಕಳಿರುವ ಸಂಸಾರಸ್ಥ ಪರಪುರುಷರನ್ನು ಇಷ್ಟಪಟ್ಟು, ಅವರ ಸಂಸಾರವನ್ನು ಹಳಿತಪ್ಪಿಸಿ, ತಮ್ಮ ಜೀವನವನ್ನೂ ಹಾಳುಮಾಡಿಕೊಂಡಿರುವ ಉದಾಹರಣೆಗಳು ಬೇಕಾದಷ್ಟಿವೆ.
ಇನ್ನು, ಪರಪುರುಷರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡು ಅವರೊಂದಿಗೆ ಮದುವೆ ಮಾಡಿಕೊಂಡು ಸಂಸಾರ ಮಾಡುತ್ತಿದ್ದಾರೆ. ಇಂತಹ ಸಂಬಂಧಗಳು ಈಗ ಹೆಚ್ಚುತ್ತಿರಬಹುದು. ಆದರೆ, ಮೊದಲಿನಿಂದಲೂ ಇತ್ತು, ಈಗಲೂ ಇದೆ. ಆದರೆ, ಇತ್ತೀಚೆಗೆ ಅವು ಮೀಡಿಯಾಗಳ ಮೂಲಕ ಹೆಚ್ಚು ಪ್ರಚಾರ ಪಡೆಯುತ್ತಿವೆ ಅಷ್ಟೇ.
ಹಾಗಿದ್ದರೆ ಯಾಕೆ ಹೀಗೆ? ಈ ಪ್ರಶ್ನೆಗೆ ಉತ್ತರ ಕೂಡ ಎರಡು ದಾರಿಯಲ್ಲಿ ಇದೆ. ಒಂದು ಮನಶಾಸ್ತ್ರಜ್ಞರು ಹೇಳೋದು, ಇನ್ನೊಂದು ಸಮೀಕ್ಷೆಗಳ ವರದಿ. ಸಮೀಕ್ಷೆಗಳು ಹೇಳುವ ಪ್ರಕಾರ, ಇತ್ತೀಚೆಗೆ ಸಮಾಜ ಅವಿಭಕ್ತ ಕುಟುಂಬಗಳಿಂದ ದೂರ ಸರಿಯುತ್ತಿದ್ದು, ಜನರು ಸ್ವತಂತ್ರ ಬದುಕನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ನನಗೆ ಬೇಕಾದಂತೆ ಇರುತ್ತೇನೆ, ನನಗೆ ಇಷ್ಟವಾದವರೊಂದಿಗೆ ಇರುತ್ತೇನೆ ಎಂಬ ಭಾವನೆ ಹೆಚ್ಚುತ್ತಿರುವುದು. ಜತೆಗೆ, ವಿದೇಶಿ ಸಂಸ್ಕೃತಿಯ ವ್ಯಾಮೋಹ ಹಾಗೂ ಸ್ವದೇಶಿ ಸಂಸ್ಕೃತಿಯ ಬಗೆಗಿನ ತಾತ್ಸಾರ ಇದಕ್ಕೆ ಕಾರಣ ಎನ್ನುತ್ತಿವೆ. ಈ ಮೊದಲು ಕೂಡ ಇಂತಹ ಸಂಬಂಧಗಳು ಇದ್ದವಲ್ಲ ಎಂದರೆ, ಅದಕ್ಕೆ ಕಾರಣ, ಕೆಲವರಿಗೆ ಹುಟ್ಟಿನಿಂದಲೇ ಬಂದ ಇನ್‌ಸ್ಟಿಂಕ್ಟ್, ಹಾಗೂ ಕೆಲವರಿಗೆ ಕುಟುಂಬ ಹಾಗೂ ಸಮಾಜದ ಮಾರ್ಗದರ್ಶನದ ಕೊರತೆ ಕಾರಣ ಎನ್ನುತ್ತಿವೆ ಸಮೀಕ್ಷೆಗಳು. ಆದರೆ, ಮನಃಶಾಸ್ತ್ರಜ್ಞರು ಹೇಳೋದೇ ಬೇರೆ.
ಮನಃಶಾಸ್ತ್ರಜ್ಞರ ಪ್ರಕಾರ- ‘ಸಾಕಷ್ಟು ಟೀನ್ ಏಜ್ ಹುಡುಗಿಯರು, ಮದುವೆ ವಯಸ್ಸಿಗೆ ಬಂದಿರುವ ಹುಡುಗಿಯರು ಅಂಕಲ್‌ಗಳ ಪ್ರೇಮಪಾಶಕ್ಕೆ ಸಿಲುಕಲು ಮುಖ್ಯ ಕಾರಣ ಅವರಲ್ಲಿರುವ ಅದೊಂದು ಭಾವನೆ ಅಂತಾರೆ. ಅದು- ಈಗಾಗಲೇ ಮದುವೆಯಾಗಿ ಯಶಸ್ವಿಯಾಗಿ ಸಂಸಾರ ಮಾಡುತ್ತಿರೋ ಅಂಕಲ್‌ಗಳು ಅಂದರೆ ಅವರು ನಿಜವಾದ ಗಂಡಸರು ಎಂಬ ಎಡಬಿಡಂಗಿ ಹೇಳಿಕೆಗಳು ಇಂತಹ ಸಂಬಂಧ ಸಮಾಜದಲ್ಲಿ ಮೂಡಲು ಮುಖ್ಯ ಕಾರಣ’ ಎನ್ನುತ್ತಾರೆ.
ಅಚ್ಚರಿ ಎಂದರೆ, ಮದುವೆಯಾಗಿ ಸಂಸಾರ ಮಾಡುತ್ತಿರುವ ಪುರುಷರು ಗ್ಯಾರಂಟಿ ಗಂಡಸರು ಎಂಬುದು ಅವರ ನಂಬಿಕೆಯಾದರೆ, ಮದುವೆ ಆಗದವರು ಗಂಡಸರಲ್ಲ ಎಂದು ಅವರು ನಿರ್ಧರಿಸುವುದು ಎಷ್ಟು ಸರಿ? ಹಾಗಂತ ಅವರಿಗೆ ಹೇಳಿದ್ದು ಯಾರು? ಇವೆಲ್ಲಾ ಕೇವಲ ಊಹಾಪೋಹಗಳು ಹಾಗೂ ತಪ್ಪು ತಿಳಿವಳಿಕೆಗಳು ಅಷ್ಟೇ. ಇಂತಹ ತಪ್ಪು ತಿಳಿವಳಿಕೆಗಳಿಂದ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದು ಅಷ್ಟೇ ಅಲ್ಲ, ಸಾಕಷ್ಟು ಸಂಸಾರಗಳನ್ನು ಹಾಳು ಮಾಡುತ್ತಾರೆ ಇಂತಹ ಹುಡುಗಿಯರು ಎನ್ನುತ್ತದೆ ಸಮೀಕ್ಷೆ. ಜತೆಗೆ, ಬಾಲ್ಯದಿಂದಲೇ ಸರಿಯಾದ ಜೀವನಪಾಠ ಇಂತಹ ಹುಡುಗಿಯರಿಗೆ ಸಿಕ್ಕಿರುವುದಿಲ್ಲ ಎನ್ನುತ್ತವೆ ಹಲವು ಸಮೀಕ್ಷೆಗಳ ವರದಿ.
ಅಂಕಲ್‌ಗಳಿಗೆ ಬೀಳುವ, ಮಧ್ಯವಯಸ್ಕರು ಹಾಗೂ ಆ ಏಜನ್ನೂ ದಾಟಿದ ಪರಪುರುಷರ ಮೇಲೆ ಕಣ್ಣುಹಾಕಿ ತಮ್ಮವರನ್ನಾಗಿ ಮಾಡಿಕೊಳ್ಳುವ ಕೆಲವು ಹುಡುಗಿಯರ ಕೆಲಸ ಅನೈತಿಕ ಹಾಗೂ ಸಮಾಜದ ಸ್ವಾಸ್ಥ ಕೆಡಿಸುವ ಕಾಯಕ ಅನ್ನೋದು ಸಮಾಜದ ನಂಬಿಕೆ. ಆದರೆ, ಇದಕ್ಕೆ ಸದ್ಯಕ್ಕೆ ಯಾವುದೇ ಕಡಿವಾಣ ಇಲ್ಲ. ಸಮೀಕ್ಷೆಗಳು ಹಾಗೂ ಮನಃಶಾಸ್ತ್ರಜ್ಞರು ಕಾರಣವನ್ನು ಹುಡುಕಿ ಹುಡುಕಿ ಹೇಳುತ್ತಿದ್ದಾರೆಯೇ ವಿನಃ ಅದನ್ನು ತಪ್ಪಿಸುವ ಅವರ ಗುರಿಯಿನ್ನೂ ಕೆಲಸ ಶುರುಮಾಡಿಲ್ಲ. ಹೀಗಾಗಿ ಸಮಾಜದಲ್ಲಿ ಅಂತಹ ಸಂಬಂಧಗಳು ನಡೆಯುತ್ತಲೇ ಇವೆ, ಅದರ ಪರಿಣಾಮಗಳೂ ಕೂಡ ಸಮಾಜದವನ್ನು ಬಾಧಿಸುತ್ತಲೇ ಇವೆ.
Trump orders nuclear missile test ರಷ್ಯಾ ಟೆಸ್ಟ್ ಬೆನ್ನಲ್ಲೇ ಪರಮಾಣು ಕ್ಷಿಪಣಿ ಪರೀಕ್ಷೆಗೆ ಟ್ರಂಪ್ ಸೂಚನೆ