Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಜೂನಿಯರ್ ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಸಿನಿಮಾ ಘೋಷಣೆ ಆಗಿ ಸಾಕಷ್ಟು ಸಮಯ ಕಳೆದಿದೆ. ಆದರೆ, ಈ ಸಿನಿಮಾದ ಶೂಟಿಂಗ್ ಫೂಟೇಜ್ ಬಗ್ಗೆ NTR ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂಬ ವದಂತಿಗಳು ಹರಡಿವೆ..
ಈಗ ಕೆಲ ಹಂತದ ಶೂಟಿಂಗ್ ಪೂರ್ಣಗೊಂಡಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಸಿನಿಮಾ ಬಗ್ಗೆ ಶಾಕಿಂಗ್ ವಿಚಾರ ಒಂದು ಹೊರ ಬಿದ್ದಿದೆ. ಶೂಟ್ನ ಫೂಟೇಜ್ ನೋಡಿರೋ ಜೂನಿಯರ್ ಎನ್‌ಟಿಆರ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಎಂದು ವರದಿ ಆಗಿದೆ.
2019ರಲ್ಲಿ ನೀಲ್ ಹಾಗೂ ಎನ್‌ಟಿಆರ್ ಭೇಟಿ ಮಾಡಿ, ಕಥೆ ಹೇಳಿದರು. ಅಂದಿನಿಂದಲೂ ಈ ಸಿನಿಮಾ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇದ್ದವು. ಈ ಚಿತ್ರಕ್ಕೆ ‘ಡ್ರ್ಯಾಗನ್’ ಎಂಬ ಟೈಟಲ್ ಇಡಲಾಗಿದೆ ಎನ್ನಲಾಗುತ್ತಿದೆ. ಏಪ್ರಿಲ್ನಲ್ಲಿ ಸಿನಿಮಾದ ಶೂಟ್ ಆರಂಭ ಆಗಿದೆ.
ಪ್ರಶಾಂತ್ ನೀಲ್ ಅವರು ಸಿನಿಮಾ ಕೆಲಸಗಳಲ್ಲಿ ತಮ್ಮದೇ ಆದ ಸ್ಟೈಲ್ ಹೊಂದಿದ್ದಾರೆ. ಅದೇ ಸ್ಟೈಲ್ನಲ್ಲಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆದರೆ, ಸಿನಿಮಾದ ಕೆಲಸ ನೋಡಿದ ಜೂನಿಯರ್ ಎನ್‌ಟಿಆರ್ ಅವರು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಬರುವಂತೆ ಸೂಚನೆ ನೀಡಿದ್ದಾರೆ. ಈ ಕ್ಲ್ಯಾಶ್ ಯಾವ ಹಂತಕ್ಕೆ ಹೋಗುತ್ತದೆ ಎಂಬ ಚರ್ಚೆಗಳೂ ನಡೆದಿವೆ.
ಇನ್ನೂ ಕೆಲವು ಫ್ಯಾನ್ಸ್ಗಳು ಈ ಬಗ್ಗೆ ಸ್ಪಷ್ಟನೆ ನೀಡುವ ಕೆಲಸ ಮಾಡುತ್ತಿದ್ದಾರೆ. ಇದೆಲ್ಲ ಸುಳ್ಳು, ಇದನ್ನು ನಂಬ ಬೇಡಿ ಎಂದು ಕೋರಿಕೊಂಡಿದ್ದಾರೆ. ಈ ಬಗ್ಗೆ ತಂಡದ ಕಡೆಯಿಂದ ಅಧಿಕೃತ ಘೋಷಣೆ ಆಗಬೇಕಿದೆ. ಮೈತ್ರಿ ಮೂವೀ ಮೇಕರ್ಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ.