Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಕೆಲ ದಿನಗಳಿಂದ ಚಿನ್ನದ ದರ ಏರಿಕೆಯಾಗುತ್ತಲೇ ಇದೆ. ತುಸುವೇ ಇಳಿದು ಒಮ್ಮಿಂದೊಮ್ಮೆಲೆ ಭಾರಿ ಏರಿಕೆ ಆಗುವ ಚಿನ್ನದ ದರದಿಂದ ಜನಸಾಮಾನ್ಯರ ಚಿನ್ನ ಕೊಳ್ಳುವ ಆಸೆಗೆ ತಣ್ಣೀರೆರಚಿದಂತಾಗಿದೆ. ಬಹುತೇಕರು ಚಿನ್ನವನ್ನು ಆಭರಣಕ್ಕಿಂತ ಹೆಚ್ಚು ಆಸ್ತಿ ಎಂದು ಪರಿಗಣಿಸಿರುವುದರಿಂದ ಚಿನ್ನದ ಮೇಲೆ ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿದ್ದು, ಇದು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಚಿನ್ನದ ಬೆಲೆ ಬಹುತೇಕ ಭಾರತೀಯ ಷೇರು ಮಾರುಕಟ್ಟೆ ಮೇಲೆ ಅವಲಂಬಿತವಾಗಿದೆ. ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ ಹೋಗುತ್ತದೆ. ಹಾಗಿದ್ದರೆ ಇಂದಿನ ಚಿನ್ನಾಭರಣಗಳ ದರ ವಿವಿಧ ನಗರಗಳಲ್ಲಿ ಹೇಗಿದೆ ಅಂತ ನೋಡೋಣ.
24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 12,868 ರೂಪಾಯಿಗೆ ತಲುಪಿದೆ. ಇಂದು ಗ್ರಾಂ ಒಂದಕ್ಕೆ ಬೆಲೆ ಬರೋಬ್ಬರಿ 328 ರೂಪಾಯಿ ಹೆಚ್ಚಳ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ 300 ರೂಪಾಯಿ ಏರಿಕೆ ಆಗಿದ್ದು, 11,795 ರುಪಾಯಿಗೆ ಏರಿಕೆ ಆಗಿದೆ.
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯು 3280 ರೂಪಾಯಿ ಹೆಚ್ಚಳ ಆಗಿ, 1,28,680 ರುಪಾಯಿ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 3000 ರೂ ಏರಿಕೆ ಆಗಿ, 1,17,950 ರೂಪಾಯಿಗೆ ಏರಿಕೆ ಕಂಡಿದೆ.ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 12,868 ರೂ ಇದೆ
ಬೆಳ್ಳಿ ಬೆಲೆಯೂ ದಾಖಲೆ ಪ್ರಮಾಣದಲ್ಲಿ ಹೆಚ್ಚಳ
ಬೆಳ್ಳಿ ಬೆಲೆ ಗ್ರಾಂ ಗೆ 8 ರೂಪಾಯಿ 60 ಪೈಸೆ ಹೆಚ್ಚಳ ಆಗಿದ್ದು, ಕೆ ಜಿ ಬೆಲೆ 8,600 ರೂಪಾಯಿಗೆ ಏರಿಕೆ ಆಗಿದೆ.