Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಮೀರತ್ : ನೆಲದ ಮೇಲೆ ಬಿದ್ದಿದ್ದ ಯುವಕನ ಎದೆಗೆ ಒಂದರ ನಂತರ ಒಂದರಂತೆ ಮೂರು ಗುಂಡುಗಳನ್ನು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಈ ಭಯಾನಕ ಘಟನೆಯ ವಿಡಿಯೋ ಈಗ ಬಹಿರಂಗಗೊಂಡಿದೆ. ಕೊಲೆಯಾದ ಯುವಕ ಆದಿಲ್. ತ್ರಿಕೋನ ಪ್ರೇಮ ಸಂಬಂಧದಿಂದಾಗಿ ಲೋಹಿಯಾನಗರದಲ್ಲಿ ಆದಿಲ್ ಹತ್ಯೆಗೀಡಾಗಿದ್ದಾನೆ. ಆರೋಪಿಗಳು ಒಂದರ ನಂತರ ಒಂದರಂತೆ ಮೂರು ಗುಂಡುಗಳನ್ನು ಆದಿಲ್‌ನ ಎದೆಗೆ ಹಾರಿಸಿದ್ದಾರೆ. 12 ಸೆಕೆಂಡುಗಳ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕೊಲೆಗಾರರೇ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆ ಎಂದು ವರದಿಯಾಗಿದೆ.
ಗುಂಡು ಹಾರಿಸಿದ ವ್ಯಕ್ತಿಯನ್ನು ಜುಲ್ಕಮರ್ ಎಂದು ಗುರುತಿಸಲಾಗಿದ್ದು, ವಿಡಿಯೋಗ್ರಾಫರ್ ಹಮ್ಜಾ ಎಂದು ಗುರುತಿಸಲಾಗಿದೆ. ಇದುವರೆಗಿನ ಪೊಲೀಸ್ ತನಿಖೆಯಲ್ಲಿ ಅಬ್ರಾರ್ ಕೊಲೆ ಪ್ರಕರಣದಲ್ಲಿ ಮಾಹಿತಿದಾರನಾಗಲು ಒಪ್ಪಂದ ಪಡೆದ ನಂತರ ಆದಿಲ್ ನನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.