Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಶಿವಮೊಗ್ಗ ನಗರದ ಕ್ಲಾರ್ಕ್ ಪೇಟೆಯ ಆಜಾದ್ ನಗರದ ಎರಡನೇ ತಿರುವಿನಲ್ಲಿ ಘಟನೆ ಜಾತಿಗಣತಿ ಹೆಸರಿನಲ್ಲಿ ಬಂದ ದಂಪತಿ, ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಆಜಾದ್ ನಗರ ನಿವಾಸಿ ಮಹಿಳೆ ದಿಲ್ ಶಾದ್ ಎಂಬುವರ ಮೇಲೆ ಹಲ್ಲೆ ನಡೆದಿದೆ.
ಹಲ್ಲೆ ನಡೆಸಿದ ದಂಪತಿ ಹೆಸರು ತಸ್ಲಿಮಾ ಹಾಗೂ ಅಸ್ಲಾಂ ಎನ್ನಲಾಗಿದೆ. ಮನೆಯಲ್ಲಿ ಪುರುಷರು ಇಲ್ಲದ ವೇಳೆ ಜಾತಿ ಗಣತಿ ಹೆಸರಿನಲ್ಲಿ ಮನೆಗೆ ಆಗಮಿಸಿದ ದಂಪತಿ, ಮನೆಯಲ್ಲಿದ್ದ ದಿಲ್ ಶಾದ್ ಜೊತೆ ವಿಚಾರಿಸಿದ್ದಾರೆ. ಆಧಾರ್ ಕಾರ್ಡ್ ತೋರಿಸುವಂತೆ ಹೇಳಿದ ಮಹಿಳೆ ತಸ್ಲೀಮಾ, ಆಧಾರ್ ಕಾರ್ಡ್ ತರಲು ಮನೆಯ ಒಳಗೆ ಹೋದ ದಿಲ್ ಶಾದ್ ಮೇಲೆ ಹಲ್ಲೆ ಮಾಡಿದ್ದಾರೆ.
ಮಹಿಳೆಯ ತಲೆಗೆ ರಾಡ್‌ನಿಂದ ಬಲವಾಗಿ ಹೊಡೆದಿದ್ದಾರೆ. ಮನೆಯಲ್ಲಿದ್ದ ಆ ಮಹಿಳೆ ಸದ್ಯ ಗಾಯಗೊಂಡು ಆಸ್ಪತ್ರೆ ಸೇರಿದ್ದರೆ, ದರೋಡೆಗೆ ಯತ್ನಿಸಿದ ಖತರ್ನಾಕ್ ದಂಪತಿ ಸ್ಥಳೀಯರು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ.