Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹ ಲಕ್ಷ್ಮೀ ಹಣವನ್ನು ಜನರು ನಾನಾ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತಿರುವುದು ವರದಿಯಾಗುತ್ತಿವೆ. ಕೆಲವರು ಹಣ ಕೂಡಿಟ್ಟು, ಫ್ರಿಡ್ಜ್, ಮಗನಿಗೆ ಗಾಡಿ, ಫ್ಯಾನ್ಸಿ ಅಂಗಡಿ, ಗ್ರಂಥಾಲಯ ತೆರೆದ ನಾನಾ ಕಾರ್ಯಗಳು ಮುನ್ನೆಲೆಗೆ ಬಂದಿದ್ದವು. ಈಗ ಅದೇ ರೀತಿಯಲ್ಲಿ ಬೆಂಗಳೂರು ದಕ್ಷಿಣದ ರಾಮನಗರದಲ್ಲಿ ಗೃಹ ಲಕ್ಷ್ಮೀ ಹಣದಿಂದ ಮಹಿಳೆಯೊಬ್ಬರು ವಾಷಿಂಗ್ ಮೆಷಿನ್ ಖರೀದಿಸಿದ್ದಾರೆ. ಫಲಾನುಭವಿ ವಾಷಿಂಗ್ ಮೆಷಿನ್ ಖರೀದಿಸಿ, ಆಯುಧ ಪೂಜೆಯಂದು ಪೂಜಿಸುತ್ತಿರುವ ವಿಡಿಯೋವನ್ನು ಸಿಎಂ ಸಿದ್ದರಾಮಯ್ಯನವರೇ ಹಂಚಿಕೊಂಡಿದ್ದಾರೆ
ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟುಕೊಂಡು ರಾಮನಗರದ ಮಹಿಳೆಯೊಬ್ಬರು ವಾಷಿಂಗ್ ಮೆಷಿನ್ ಖರೀದಿಸಿದ್ದು, ಇದೀಗ ಭಾರೀ ಗಮನ ಸೆಳೆದಿದ್ದಳು.
ಏಳು ತಿಂಗಳ ಗೃಹಲಕ್ಷ್ಮೀ ಹಣದಿಂದ ವಾಷಿಂಗ್ ಮಷಿನ್ ಖರೀದಿಸಿದ್ದ ಬಿ.ಕೆ.ತುಳಸಿ ಎಂಬ ಮಹಿಳೆ ವಿಡಿಯೋವನ್ನು ಹಂಚಿಕೊಂಡಿದ್ದರು. ಇದೀಗ ಈ ವಿಡಿಯೋವನ್ನು ಸಿಎಂ ಸಿದ್ದರಾಮಯ್ಯ ಹಂಚಿಕೊಂಡಿದ್ದು, ನನ್ನ ಹಬ್ಬದ ಸಂಭ್ರಮವನ್ನು ಇಮ್ಮಡಿಯಾಗಿದೆ ಎಂದ ಸಿಎಂ ‘ರಾಮನಗರದ ಗ್ಯಾರಂಟಿ ಯೋಜನೆಯ ಫಲಾನುಭವಿ ಮಹಿಳೆ ಬಿ.ಕೆ.ತುಳಸಿ ಅವರು ಕಳೆದ ಏಳು ತಿಂಗಳ ಗೃಹಲಕ್ಷ್ಮಿ ಹಣ ಕೂಡಿಟ್ಟು ಮಹಾನವಮಿಯ ದಿನ ಹೊಸ ವಾಷಿಂಗ್ ಮೆಷಿನ್ ಖರೀದಿಸಿ, ಪೂಜಿಸುತ್ತಿರುವ ವೀಡಿಯೋ ನನ್ನ ಹಬ್ಬದ ಸಂಭ್ರಮವನ್ನು ಇಮ್ಮಡಿಯಾಗಿಸಿತು.