Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > October Changes ಇಂದಿನಿಂದ UPI, Railway Ticket, ಎನ್‌ಪಿಎಸ್, ಆನ್‌ಲೈನ್ ಗೇಮಿಂಗ್‌, ಸಾಲ ನಿಯಮದಲ್ಲಿ ಬದಲಾವಣೆ
ಕರ್ನಾಟಕದೇಶಪ್ರಮುಖ

October Changes ಇಂದಿನಿಂದ UPI, Railway Ticket, ಎನ್‌ಪಿಎಸ್, ಆನ್‌ಲೈನ್ ಗೇಮಿಂಗ್‌, ಸಾಲ ನಿಯಮದಲ್ಲಿ ಬದಲಾವಣೆ

Share
2 Min Read
SHARE

Subscribe NewsicsKannada/YouTube

newsics.com

ನವದೆಹಲಿ: ಅಕ್ಟೋಬರ್ 1 ರಿಂದ ದೇಶದಲ್ಲಿ ಹಲವು ಹೊಸ ನಿಯಮಗಳು ಜಾರಿಗೆ ಬರಲಿವೆ.

ಯುಪಿಐ ವಹಿವಾಟು, ರೈಲ್ವೆ ಟಿಕೆಟ್ ಬುಕಿಂಗ್, ಎನ್‌ಪಿಎಸ್, ಎಲ್‌ಪಿಜಿ ಬೆಲೆಗಳಿಂದ ಹಿಡಿದು ಆನ್‌ಲೈನ್ ಗೇಮಿಂಗ್‌ವರೆಗೆ ಈ ಬದಲಾವಣೆಗಳು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಲಿವೆ.

ಯುಪಿಐ ವಹಿವಾಟು

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಎಸ್‌ಐ) ಯುಪಿಐನಲ್ಲಿ ಪೀರ್-ಟು-ಪೀರ್ (P2P) ‘ಕಲೆಕ್ಟ್ ರಿಕ್ವೆಸ್ಟ್’ ಅಥವಾ ‘ಪುಲ್ ಟ್ರಾನ್ಸಾಕ್ಷನ್’ ಸೌಲಭ್ಯವನ್ನು ಅಕ್ಟೋಬರ್ 2 ರಿಂದ ಸ್ಥಗಿತಗೊಳಿಸಲಿದೆ. ಫೋನ್‌ಪೇ, ಗೂಗಲ್ ಪೇ, ಪೇಟಿಎಂನಂತಹ ಯುಪಿಐ ವೇದಿಕೆಗಳಲ್ಲಿ ಈ ಬದಲಾವಣೆ ಜಾರಿಯಾಗಲಿದೆ.

ಆನ್‌ಲೈನ್ ವಂಚನೆ ತಡೆಗಟ್ಟಲು ಮತ್ತು ಸುರಕ್ಷತೆ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್‌ಪಿಎಸ್‌ಐ ಸುತ್ತೋಲೆ ತಿಳಿಸಿದೆ.

ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್)
ಖಾಸಗಿ ವಲಯದ ಎನ್‌ಪಿಎಸ್ ಚಂದಾದಾರರು ಇನ್ಮುಂದೆ ತಮ್ಮ ಪಿಂಚಣಿ ನಿಧಿಯ 100% ವರೆಗೆ ಈಕ್ವಿಟಿ ಸಂಬಂಧಿತ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು, ಈ ಹಿಂದಿನ 75%ನಿಂದ 100%ಗೆ ಏರಿಕೆಯಾಗಿದೆ.

ಜತೆಗೆ, ಎನ್‌ಪಿಎಸ್ ಖಾತೆ ತೆರೆಯುವ ಶುಲ್ಕ (ಇ-ಪ್ರಾನ್ ಕಿಟ್‌ಗೆ ₹18, ಫಿಸಿಕಲ್ ಪ್ರಾನ್ ಕಾರ್ಡ್‌ಗೆ ₹40) ಮತ್ತು ನಿರ್ವಹಣೆ ಶುಲ್ಕವೂ ಬದಲಾಗಿದೆ. ಶೂನ್ಯ ಬ್ಯಾಲೆನ್ಸ್ ಖಾತೆಗಳಿಗೆ ವಾರ್ಷಿಕ ನಿರ್ವಹಣೆ ಶುಲ್ಕ ಶೂನ್ಯವಾಗಿರುತ್ತದೆ ಎಂದು ಸೆಪ್ಟೆಂಬರ್ 15ರ ಸುತ್ತೋಲೆ ತಿಳಿಸಿದೆ.

ರೈಲ್ವೆ ಟಿಕೆಟ್ ಬುಕಿಂಗ್

ಅಕ್ಟೋಬರ್ 1 ರಿಂದ ಭಾರತೀಯ ರೈಲ್ವೆಯು ಕಾಯ್ದಿರಿಸುವ ಜನರಲ್ ಟಿಕೆಟ್‌ಗಳ ಬುಕಿಂಗ್‌ಗೆ ಆಧಾರ್ ದೃಢೀಕೃತ ಬಳಕೆದಾರರಿಗೆ ಆದ್ಯತೆ ನೀಡಲಿದೆ. ರಿಸರ್ವೇಷನ್ ತೆರೆದ ಮೊದಲ 15 ನಿಮಿಷಗಳಲ್ಲಿ ಕೇವಲ ಆಧಾರ್ ದೃಢೀಕರಣಗೊಂಡವರು IRCTC ವೆಬ್‌ಸೈಟ್ ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡಬಹುದು. ಇದು ದುರ್ಬಳಕೆ ತಡೆಗಟ್ಟಲು ಮತ್ತು ಸಾಮಾನ್ಯ ಜನರಿಗೆ ಲಾಭವಾಗಲು ಜಾರಿಗೊಂಡಿದೆ.

ಎಲ್‌ಪಿಜಿ ಸಿಲಿಂಡರ್ ಬೆಲೆ

ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಪ್ರತಿ ತಿಂಗಳು ಪರಿಶೀಲಿಸಲಾಗುತ್ತದೆ. ಅಕ್ಟೋಬರ್ 1 ರಿಂದ ಬೆಲೆ ಏರಿಕೆ ಆಗಬಹುದು, ಇಳಿಕೆ ಆಗಬಹುದು ಅಥವಾ ಯಥಾಸ್ಥಿತಿ ಕಾಯ್ದುಕೊಳ್ಳಬಹುದು, ಇದು ಮನೆಯ ಬಜೆಟ್‌ನ ಮೇಲೆ ಪರಿಣಾಮ ಬೀರಲಿದೆ.

ಆನ್‌ಲೈನ್ ಗೇಮಿಂಗ್

ಆನ್‌ಲೈನ್ ಗೇಮಿಂಗ್‌ಗೆ ಹೊಸ ನಿಯಮಗಳು ಜಾರಿಗೆ ಬರಲಿವೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ರಿಯಲ್-ಮನಿ ಗೇಮಿಂಗ್‌ಗೆ ಅವಕಾಶವಿರುತ್ತದೆ. ಪಾರದರ್ಶಕತೆ, ಸುರಕ್ಷತೆ ಮತ್ತು ಆಟಗಾರರ ರಕ್ಷಣೆಗೆ ಒತ್ತು ನೀಡಲಾಗಿದೆ ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಬ್ಯಾಂಕ್ ರಜೆಗಳು
ಅಕ್ಟೋಬರ್‌ನಲ್ಲಿ ದಸರಾ, ದೀಪಾವಳಿ, ಛತ್ ಪೂಜೆ ಸೇರಿ 21 ದಿನ ಬ್ಯಾಂಕ್ ರಜೆಗಳಿವೆ. ಜನರು ಬ್ಯಾಂಕಿಂಗ್ ಕೆಲಸಗಳನ್ನು ಮೊದಲೇ ಫ್ಲ್ಯಾನ್ ಮಾಡುವುದು ಒಳ್ಳೆಯರು. ಅಲ್ಲೆ ಆರ್‌ಬಿಐ 0.25% ಬಡ್ಡಿದರ ಕಡಿತಗೊಳಿಸುವ ನಿರೀಕ್ಷೆಗಳು ಸಾಲದ ಬಡ್ಡಿದರಗಳ ಮೇಲೆ ಪ್ರಭಾವ ಬೀರಬಹುದು.

Big twist in Bigg Boss ಈ ಬಾರಿಯ ಬಿಗ್‌ ಬಾಸ್‌ನಲ್ಲಿ ಭಾರೀ ಟ್ವಿಸ್ಟ್! ಬೆಚ್ಚಿಬಿದ್ದ ಸ್ಪರ್ಧಿಗಳು

TAGGED:Changes in UPINPSonline gaming from todayRailway Ticket
Share This Article
Facebook Twitter Copy Link Print
Previous Article Actress Kamalashree passes away ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಹಿರಿಯ ನಟಿ ಕಮಲಶ್ರೀ ನಿಧನ
Next Article ದಸರಾ ಹಬ್ಬದ ಹೊತ್ತಲ್ಲೇ ದೇಶದ ಜನತೆಗೆ ಬಿಗ್ ಶಾಕ್: ಗ್ಯಾಸ್ ಸಿಲಿಂಡರ್ ದರ ಏರಿಕೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?