Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಪಕ್ಕದ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಅಪಾರ ಪ್ರಮಾಣದ ನೀರು ಭೀಮಾನದಿಗೆ ಹರಿಬಿಡಲಾಗುತ್ತಿದ್ದು, ಭೀಮಾ ಪ್ರವಾಹಕ್ಕೆ ಸಿಲುಕಿದ ಜಿಲ್ಲೆಯ ಆಲಮೇಲ ತಾಲೂಕಿನ ಶಂಬೇವಾಡ ಗ್ರಾಮದ ಮೂವರು ಗರ್ಭಿಣಿ, ಒಂದು ಮಗು ಸೇರಿ 10 ಜನರನ್ನು ರಕ್ಷಿಸಲಾಗಿದೆ.
ಭೀಮಾನದಿ ಹರಿವು ಹೆಚ್ಚಳವಾಗಿದ್ದರಿಂದ ಜಿಲ್ಲೆಯ ಸಿಂದಗಿ, ಆಲಮೇಲ ಭಾಗದಲ್ಲಿ ಪ್ರವಾಹ ಉಂಟಾಗಿದೆ. ಇಲ್ಲಿನ ತಾವರಖೇಡ ಗ್ರಾಮ ಜಲಾವೃತಗೊಂಡಿದಕ್ಕೆ ಬೆಳಗ್ಗೆ 8 ಜನರನ್ನು ರಕ್ಷಣೆ ಮಾಡಲಾಗಿತ್ತು, ಇನ್ನು ಶಂಬೇವಾಡ ಗ್ರಾಮಕ್ಕೆ ಭೀಮಾ ಪ್ರವಾಹ ಉಂಟಾದ ಹಿನ್ನೆಲೆ ಮತ್ತೆ 10 ಜನರನ್ನು ರಕ್ಷಣೆ ಮಾಡಲಾಗಿದೆ.
ಸಿಂದಗಿ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಜಿಲ್ಲಾಡಳಿತ ಈ ಕುರಿತು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ನೀರಿನಲ್ಲಿ ಸಿಲುಕಿದ ಜನರನ್ನು ಬೋಟ್ ಮೂಲಕ ರಕ್ಷಣೆ ಮಾಡಲಾಗುತ್ತಿದೆ. 20ಕ್ಕೂ ಹೆಚ್ಚು ಕುಟುಂಬಸ್ಥರು ಮನೆಗಳನ್ನು ತೊರೆದು ಬೇರೆಡೆಗೆ ಸ್ಥಳಾಂತಗೊಂಡಿದ್ದಾರೆ. ಇನ್ನೂ ಭೀಮೆಯ ಪ್ರವಾಹ ತಗ್ಗುತ್ತಿಲ್ಲ. ಹೀಗಾಗಿ ಅಗ್ನಿಶಾಮಕ ಸಿಬ್ಬಂದಿಯ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.