Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ನವರಾತ್ರಿ ಉಪವಾಸ ಮಾಡುವಾಗ ಈ ತಪ್ಪುಗಳನ್ನು ಮಾಡದಿರಿ
ಲೈಫ್‌ಸ್ಟೈಲ್

ನವರಾತ್ರಿ ಉಪವಾಸ ಮಾಡುವಾಗ ಈ ತಪ್ಪುಗಳನ್ನು ಮಾಡದಿರಿ

Share
2 Min Read
SHARE

Newsics_Kannada 

 Subscribe and watch video

 ನ್ಯೂಸಿಕ್ಸ್ ಕನ್ನಡ

ಬನ್ನಿ ನಮ್ ಸಂಗಡ

newsics.com

ನವರಾತ್ರಿ ದಿನಗಳಲ್ಲಿ ಬಹುತೇಕರು ಉಪವಾಸವನ್ನು ಆಚರಿಸುತ್ತಾರೆ. ವೃತ ಹಿಡಿಯುವುದು ನಮ್ಮ ನಂಬಿಕೆಯ ಸಂಕೇತ ಮಾತ್ರವಲ್ಲ, ದೇಹ ಹಾಗೂ ಮನಸ್ಸನ್ನು ಶುದ್ಧೀಕರಿಸುವ ಮಾರ್ಗವೂ ಆಗಿದೆ. ಆದರೆ ಉಪವಾಸದ ಸಂದರ್ಭದಲ್ಲಿ ನೀವು ಮಾಡುವ ಕೆಲವೊಂದು ತಪ್ಪು ನಿಮ್ಮಲ್ಲಿ ಹೊಟ್ಟೆ ಉಬ್ಬುವುದು, ಆಮ್ಲೀಯತೆ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟುಮಾಡಬಹುದು ಎನ್ನುವುದು ನಿಮಗೆ ಗೊತ್ತಾ?.

 

ಉಪವಾಸ ಇದ್ದಾಗ ನೀರು ಕುಡಿಯುವುನ್ನು ಬಿಡಬಾರದು. ದೇಹಕ್ಕೆ ಆಹಾರ ಇಲ್ಲದ ಕಾರಣ ತೇವಾಂಶ ಕಾಪಾಡಲು ಹಾಗೂ ದೇಹದ ಅಂಗಾಂಶಗಳು ಹೆಚ್ಚು ಚಟುವಟಿಕೆಯಿಂದ ಇರಲು ಹಾಗೂ ನಿರ್ಜಲೀಕರಣವನ್ನ ತಪ್ಪಿಸಲು ನೀರು ಕುಡಿಯಲೇಬೇಕು. ನಮ್ಮ ದೇಹಕ್ಕೆ ನೀರು ಇಲ್ಲ ಎಂದರೆ ಮಲಬದ್ಧತೆ, ಆಮ್ಲೀಯತೆ ಕಾಡುತ್ತದೆ. ಉಪವಾಸ ಇದ್ದರೂ ಕ್ಯಾರೆಟ್​, ಕಲ್ಲಂಗಡಿ, ಸೌತೆಕಾಯಿ, ಬೀಟ್​ರೂಟ್​ ಅಂತವು ಸೇವಿಸಬಹುದು.

 

ಕೆಲವೊಬ್ಬರು ಉಪವಾಸ ಇದ್ದೀವಿ ಎಂದರೆ ಸಾಕು ಮೊದಲು ಅಣಿಯಾಗುವುದೇ ಟೀ, ಕಾಫಿಗೆ. ಗಂಟೆ ಗಂಟೆಗೆ ಟೀ ಅಥವಾ ಕಾಫಿ ಸೇವನೆ ಮಾಡುವುದು. ಇದು ತಪ್ಪು. ಉಪವಾಸ ಇದ್ದಾಗ ಕಾಫಿ, ಟೀ ಕುಡಿಯಲೇಬಾರದು. ಇವುಗಳ ಸೇವನೆಯಿಂದ ಗ್ಯಾಸ್ಟ್ರಿಕ್ ಆಗುತ್ತದೆ. ದೇಹದಲ್ಲಿ ಆಮ್ಲತೆ ಹೆಚ್ಚುತ್ತದೆ. ಆಮ್ಲ ಅಧಿಕವಾದರೆ ಸಾಮಾನ್ಯವಾಗಿ ಎದೆ ಉರಿ ಬರುತ್ತದೆ. ಹೀಗಾಗಿ ಉಪವಾಸ ಇದ್ದಾಗ ಟೀ, ಕಾಫಿಗೆ ಗುಡ್​ಬೈ ಹೇಳಿ. ಇದರ ಬದಲಿಗೆ ಆರೆಂಜ್, ನಿಂಬೆ ಸೇರಿದಂತೆ ಇತರೆ ಹಣ್ಣುಗಳ ಜ್ಯೂಸ್​ ಆಯ್ಕೆ ನಿಮ್ಮದಾಗಿರಲಿ.

 

ಕೆಲವರು ಉಪವಾಸದ ಸಮಯದಲ್ಲಿ ಹಣ್ಣುಗಳನ್ನು ತಿನ್ನುವುದು ಉತ್ತಮ ಎಂದು ನಂಬುತ್ತಾರೆ. ಇದು ನಿಜ, ಆದರೆ ಸಿಟ್ರಸ್ ಹಣ್ಣುಗಳ ಸೇವನೆಯನ್ನು ಮಿತಿಗೊಳಿಸಿ. ನಿಮಗೆ ಈಗಾಗಲೇ ಆಮ್ಲೀಯತೆ ಇದ್ದರೆ, ಕಿತ್ತಳೆ, ನಿಂಬೆ ಅಥವಾ ಕಾಲೋಚಿತ ಹಣ್ಣುಗಳಂತಹ ಸಿಟ್ರಸ್ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದನ್ನು ತಪ್ಪಿಸಿ. ಬದಲಾಗಿ ನೀವು ಬಾಳೆಹಣ್ಣು, ಪಪ್ಪಾಯಿ ಅಥವಾ ಸೇಬನ್ನು ತಿನ್ನಬಹುದು.

 

ಉಪವಾಸ ಎಂದರೆ ನೀವು ಬಕ್‌ವೀಟ್ ಪೂರಿ, ಪಕೋಡ ಮತ್ತು ಆಲೂಗಡ್ಡೆ ಚಿಪ್ಸ್‌ನಿಂದ ನಿಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳಬೇಕು ಎಂದಲ್ಲ. ಈ ಆಹಾರಗಳನ್ನು ಎಣ್ಣೆಯಲ್ಲಿ ಹುರಿಯುವುದರಿಂದ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತವೆ.

 

ಇದು ಹೊಟ್ಟೆಯಲ್ಲಿ ಅನಿಲ ಮತ್ತು ಆಮ್ಲೀಯತೆಗೆ ಕಾರಣವಾಗಬಹುದು. ಬೇಯಿಸಿದ, ಹುರಿದ ಅಥವಾ ಕಡಿಮೆ ಎಣ್ಣೆಯುಕ್ತ ಆಹಾರಗಳಾದ ಸಬ್ಬಕ್ಕಿ ಖಿಚಡಿ, ಮೊಸರಿನೊಂದಿಗೆ ಆಲೂಗಡ್ಡೆ ಅಥವಾ ಹಣ್ಣುಗಳನ್ನು ತಿನ್ನಲು ಪ್ರಯತ್ನಿಸಿ.

TAGGED:#careful #mistake #fasting #Navratri #health
Share This Article
Facebook Twitter Copy Link Print
Previous Article ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ಭದ್ರಾ ಕಾಲುವೆಗೆ ತಳ್ಳಿ ಹತ್ಯೆಗೈದ ಪ್ರಿಯಕರ
Next Article ಸ್ಮಗ್ಲಿಂಗ್ ಕೇಸ್ : ಖ್ಯಾತ ನಟ ದುಲ್ಕರ್ ಸಲ್ಮಾನ್ ಗೆ ಸಮನ್ಸ್ ಜಾರಿ.!

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read
ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read
ಪ್ರಮುಖಲೈಫ್‌ಸ್ಟೈಲ್

Numerology ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?