newsics.com
ದೇಹದ ಸ್ವಚ್ಛತೆ ಕಾಯ್ದುಕೊಳ್ಳುವುದು, ನಮ್ಮೆಲ್ಲರ ಕರ್ತವ್ಯ ಈ ವಿಷ್ಯದಲ್ಲಿ ಎರಡು ಮಾತಿಲ್ಲ. ನಾವು ಯಾವುದೇ ಪರಿಮಳಯುಕ್ತ ಸೆಂಟ್, ಡಿಯೋಡ್ರೆಂಟ್ ಇತ್ಯಾದಿಗಳನ್ನು, ಮೈಗೆ ಹಾಕಿಕೊಂಡರೂ ಕೂಡ, ಸರಿಯಾದ ಸಮಯಕ್ಕೆ ಸ್ನಾನ ಮಾಡಿಕೊಳ್ಳುವುದು ದೇಹದ ನಿಜವಾದ ಸ್ವಚ್ಛತೆ ಎಂದು ಹೇಳಬಹುದು. ಏಕೆಂದರೆ ಮೈ ಬೆವರಿನ ವಾಸನೆ ನಿಜವಾಗಲು ದೂರವಾಗುವುದು ಈ ರೀತಿ ಮಾತ್ರ.
ಸ್ನಾನ ಮಾಡುವುದರಿಂದ ಯಾವುದೇ ಅಪಾಯವಿಲ್ಲ ನಿಜ. ಆದರೆ ಸ್ನಾನ ಮಾಡಲು ಬಳಕೆ ಮಾಡುವ ಬಿಸಿಬಿಸಿ ನೀರು, ಪರಿಮಳಯುಕ್ತ ಹಲವಾರು ಬಗೆಯ ಸೋಪುಗಳು, ತಲೆಕೂದಲಿಗೆ ಹಾಕುವ ರಾಸಾಯನಿಕಯುಕ್ತ ಶಾಂಪೂ, ಇವೆಲ್ಲಾ ನಮ್ಮ ಆರೋಗ್ಯಕ್ಕೆ ಹಾಗೂ ತ್ವಚೆಗೆ ಹಾನಿ ಮಾಡಿಬಿಡುತ್ತವೆ. ಬನ್ನಿ ಇಂದಿನ ಲೇಖನದಲ್ಲಿ ಸ್ವಾನ ಮಾಡುವಾಗ ನೀವು ಮಾಡಬಾರದ ತಪ್ಪುಗಳು ಯಾವುದು ಎಂಬುದನ್ನು ನೊಡೋಣ.
ಬಿಸಿ ನೀರಿನ ಸ್ನಾನ
ಬಿಸಿ ನೀರಿನ ಸ್ನಾನ ಮಾಡುವುದರಿಂದ ದೇಹದಲ್ಲಿನ ಸ್ನಾಯಗಳಿಗೆ ಆರಾಮ ಸಿಗಬಹುದು. ಆದರೆ ಚರ್ಮದಲ್ಲಿನ ನೈಸರ್ಗಿಕ ಎಣ್ಣೆಯು ಬಿಸಿ ನೀರಿನಿಂದಾಗಿ ಕಳೆದುಹೋಗುವುದು. ಬಿಸಿ ನೀರಿನ ಸ್ನಾನದಿಂದ ಚರ್ಮವು ಒಣಗಿದಂತೆ ಆಗಬಹುದು. ತುಂಬಾ ತಂಪಾದ ಹವಾಮಾನವಿರುವ ಪ್ರದೇಶದಲ್ಲಿ ವಾಸಿಸುತ್ತಾ ಇದ್ದರೆ ಆಗ ಅತಿ ಬಿಸಿ ನೀರಿನ ಬದಲಿಗೆ ಉಗುರು ಬೆಚ್ಚಗಿನ ನೀರನ್ನು ಬಳಸಿ.
ಸ್ನಾನಗೃಹದಲ್ಲಿ ಖಾಲಿ ಬಕೆಟ್ ಬಿಡಬೇಡಿ. ಹಾಗೆ ಬಿಟ್ಟರೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಸ್ನಾನದ ನಂತರ ಬಕೆಟ್ ಅನ್ನು ಅಲ್ಲಿಯೇ ಬಿಡಬೇಕಾದರೆ, ಅದನ್ನು ತಿರುಗಿಸಿ. ಖಾಲಿ ಬಕೆಟ್ ಇಟ್ಟರೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ ಎಂದು ಹೇಳಲಾಗುತ್ತದೆ.
ಸ್ನಾನಗೃಹವು ಕೊಳಕಾಗಿದ್ದರೆ, ಅದು ಅಶುಭ ಫಲಿತಾಂಶಗಳನ್ನು ತರುತ್ತದೆ. ಸ್ನಾನಗೃಹ ಯಾವಾಗಲೂ ಸ್ವಚ್ಛವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ, ಅವರು ನಕಾರಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ವಿದ್ವಾಂಸರು ಎಚ್ಚರಿಸುತ್ತಾರೆ.
ಚರ್ಮವನ್ನು ಮೈಯುಜ್ಜುವ ಬ್ರಶ್ ನಿಂದ ಉಜ್ಜಿಕೊಂಡರೆ ಸತ್ತ ಚರ್ಮದ ಕೋಶಗಳು ಎದ್ದು ಹೋಗುವುದು. ಇದು ಒಳ್ಳೆಯ ಅಭ್ಯಾಸ. ಆದರೆ ಹಳೆದ ಬ್ರಶ್ ಗಳಲ್ಲಿ ಬ್ಯಾಕ್ಟೀರಿಯಾವು ಶೇಖರಣೆಯಾಗಿರುತ್ತದೆ. ಇದು ನಿಮ್ಮ ಚರ್ಮಕ್ಕೆ ಹಾನಿಕರ. ಇದರಿಂದ ಬ್ರಶ್ ಅನ್ನು ತಿಂಗಳಿಗೊಮ್ಮೆ ಬದಲಾಯಿಸುತ್ತಾ ಇರಿ. ಬ್ಯಾಕ್ಟೀರಿಯಾವಿರುವ ಬ್ರಶ್‌ನಿಂದ ಮೈಯುಜ್ಜಿಕೊಂಡರೆ ತುರಿಕೆ ಕಾಣಿಸಿಕೊಳ್ಳಬಹುದು. ಬ್ರಶ್ ಬದಲಾಗಿ ಬಟ್ಟೆಯನ್ನು ಬಳಸಿದರೆ ಒಳ್ಳೆಯದು.
ಸ್ನಾನ ಮಾಡಿದ ನಂತರ ನೀವು ಮಾಡಬಾರದ ತಪ್ಪುಗಳ ಬಗ್ಗೆ… ವಾಸ್ತು ಪ್ರಕಾರ, ಸ್ನಾನ ಮಾಡುವಾಗ ನೀವು ಸ್ಯಾಂಡಲ್ ಧರಿಸಬಾರದು. ಸ್ನಾನ ಮಾಡುವಾಗ ಸ್ಯಾಂಡಲ್ ತೆಗೆದು ನಂತರವೇ ಸ್ನಾನ ಮಾಡಬೇಕು ಎಂದು ಹೇಳುತ್ತಾರೆ. ಸ್ನಾನ ಮಾಡುವಾಗ ಚಪ್ಪಲಿ ಧರಿಸುವುದು ಅಶುಭ ಫಲಿತಾಂಶಗಳನ್ನು ತರುತ್ತದೆ ಎಂದು ಹೇಳಲಾಗುತ್ತದೆ.
ಅನೇಕ ಜನರು ಸ್ನಾನ ಮಾಡುವಾಗ ನೀರಿನಲ್ಲಿ ಸೋಪಿನ ಕಲ್ಮಶವನ್ನು ಅನುಭವಿಸುತ್ತಾರೆ. ನೀವು ಆ ನೀರನ್ನು ಸ್ನಾನಗೃಹದಲ್ಲಿ ಬಿಟ್ಟರೆ, ರಾಹು ಮತ್ತು ಕೇತುವಿನ ಋಣಾತ್ಮಕ ಪರಿಣಾಮಗಳು ಕುಟುಂಬದ ಮೇಲೆ ಪರಿಣಾಮ ಬೀರುತ್ತವೆ. ದುರಾದೃಷ್ಟದ ಜೊತೆಗೆ, ದುಷ್ಟ ಕಣ್ಣು ಕೂಡ ನಿಮ್ಮ ಮೇಲೆ ಬೀಳುತ್ತದೆ. ಇದರಿಂದಾಗಿ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.