newsics.com
ಬಾಲಿವುಡ್ ನಟಿ ರಾಖಿ ಸಾವಂತ್ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ಮುನ್ನೆಲೆಗೆ ಬಂದಿದ್ದು, ಭಾರೀ ಚರ್ಚೆ ಹುಟ್ಟುಹಾಕಿದೆ.
ಖ್ಯಾತ ಕಿರುತೆರೆ ನಟಿಯೆದುರೇ ಆಕೆಯ ಗಂಡನ ಬಳಿ ವೀರ್ಯಾಣು ಕೇಳಿದ್ದರು. ರಾಖಿ ಸಾವಂತ್ ಮನವಿ ಕೇಳಿ ನಟಿ ಮತ್ತು ಆಕೆಯ ಗಂಡ ಶಾಕ್ ಆಗಿದ್ದರು.

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 14ರಲ್ಲಿ ರಾಖಿ ಸಾವಂತ್ ಸ್ಪರ್ಧಿಯಾಗಿ ಎಂಟ್ರಿಯಾಗಿದ್ದರು. ಈ ಸೀಸನ್ನಲ್ಲಿ ಕಿರುತೆರೆ ನಟಿಯೊಬ್ಬರು ಪತಿಯೊಂದಿಗೆ ಬಿಗ್ಬಾಸ್ಗೆ ಬಂದಿದ್ದರು.
ಬಿಗ್ಬಾಸ್ಗೂ ಬರುವ ಮುನ್ನ ಜೋಡಿಯಲ್ಲಿ ಮನಸ್ತಾಪ ಉಂಟಾಗಿ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು.
ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಬಿಗ್ಬಾಸ್ ಶೋಗೆ ಕರೆಸಲಾಗಿತ್ತು.
ಕಿರುತೆರೆ ನಟಿ ರುಬಿನಾ ದಿಲಾಯಕ್ ಮತ್ತು ನಟ ಅಭಿನವ್ ಶುಕ್ಲಾ ದಂಪತಿಯಾಗಿದ್ದು, ಬಿಗ್ಬಾಸ್ ಸೀಸನ್ 14ರಲ್ಲಿ ಕಾಣಿಸಿಕೊಂಡಿದ್ದರು.

ರುಬಿನಾ ದಿಲಾಯಾಕ್ ಅವರೇ ಶೋನ ವಿನ್ನರ್ ಅಗಿದ್ದರು. ಇದೇ ಸೀಸನ್ನಲ್ಲಿಯೇ ರಾಖಿ ಸಾವಂತ್ ಸಹ ಸ್ಪರ್ಧಿಯಾಗಿದ್ದರು.
ಅಭಿನವ್ ಶುಕ್ಲಾ ಮೇಲೆ ತಾನು ಆಕರ್ಷಿತಳಾಗಿದ್ದೇನೆ ಎಂದು ರಾಖಿ ಸಾವಂತ್ ಹಲವು ಬಾರಿ ಹೇಳಿಕೊಂಡಿದ್ದರು.
ನನಗೆ ಅಭಿನವ್ ಶುಕ್ಲಾ ಅಂತಹ ಮಕ್ಕಳು ಬೇಕೆಂದು ಹೇಳಿಕೊಂಡಿದ್ದ ರಾಖಿ ಸಾವಂತ್, ಶೋನಲ್ಲಿ ವೀರ್ಯ ದಾನ ಮಾಡುವಂತೆ ಕೇಳಿಕೊಂಡಿದ್ದರು. ಹಲವು ಸಂದರ್ಶನಗಳಲ್ಲಿ ಎಗ್ ಫ್ರೀಜ್ ಮಾಡಿರುವುದಾಗಿ ತಿಳಿಸಿದ್ದಾರೆ.

ನಾನಾ ಕಾರಣಗಳಿಂದ ದೂರವಾಗಲು ನಿರ್ಧರಿಸಿದ್ದ ರುಬಿನಾ ಮತ್ತು ಅಭಿನವ್ ಶುಕ್ಲಾ ಅವರನ್ನು ಬಿಗ್ಬಾಸ್ ಒಂದು ಮಾಡಿತ್ತು. ಶೋನಿಂದ ಹೊರಬಂದ ಬಳಿಕ ಜತೆಯಾಗಿರಲು ನಿರ್ಧರಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಸದ್ಯ ರುಬಿನಾ- ಅಭಿನವ್ ಶುಕ್ಲಾ ದಂಪತಿ ಅವಳಿ ಮಕ್ಕಳ ಪೋಷಕರಾಗಿದ್ದು, ಈಗ ಮತ್ತೆ ರಾಖಿ ಸಾವಂತ್ ಹೇಳಿಕೆ ಚರ್ಚೆ ಹುಟ್ಟುಹಾಕಿದೆ.
ಹಾಡಹಗಲೇ 11 ವರ್ಷದ ಬಾಲಕಿಗೆ ವೃದ್ಧನಿಂದ ಲೈಂಗಿಕ ಕಿರುಕುಳ : ವೈರಲ್ ವಿಡಿಯೋ ನೋಡಿ
Bigg Boss Kannada ಆಫರ್ ರಿಜೆಕ್ಟ್ ಮಾಡಿದ ಕನ್ನಡದ ಸೆಲೆಬ್ರಿಟಿಗಳಿವರು!
ನಟ ದರ್ಶನ್ಗೆ ರಿಲೀಫ್: ಬೇರೆ ಜೈಲ್ಗೆ ಶಿಫ್ಟ್ ಇಲ್ಲ, ಹಾಸಿಗೆ, ದಿಂಬು ಸಿಕ್ತು, ವಾಕಿಂಗ್ಗೂ ಅವಕಾಶ