newsics.com
ಮಂಡ್ಯ: ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಮೇಲೆ ನಡೆದ ಕಲ್ಲು ತೂರಾಟ ಪ್ರತಿಭಟಿಸಿ ಉದ್ರಿಕ್ತ ಹಿಂದೂಗಳು ಸೋಮವಾರ ನಡೆಸಿದ ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆದಿದ್ದು, ಈ ಸಂಬಂಧ 25 ಜನರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಲಾಠಿ ಚಾರ್ಜ್ ಸಂದರ್ಭದ ಒಂದು ವಿಡಿಯೋ ದೇಶದಾದ್ಯಂತ ವೈರಲ್ ಆಗಿದೆ.
ಕಳೆದ ವರ್ಷ ಗಣೇಶ ಮೆರವಣಿಗೆ ಹಿಂಸಾಚಾರದ ಬಗ್ಗೆ ನಡೆಸಿದ್ದ ಪ್ರತಿಭಟನೆ ವೇಳೆ ಪೊಲೀಸರು ಗಣೇಶನನ್ನೇ ಬಂಧಿಸಿ ಪೊಲೀಸ್ ವಾಹನದಲ್ಲಿ ಕೂರಿಸಿದ್ದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇದೀಗ ಮದ್ದೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಯುವತಿಯೊಬ್ಬಳನ್ನು ಪೊಲೀಸರು ಅಟ್ಟಾಡಿಸಿಕೊಂಡು ಲಾಠಿ ಬೀಸಿದ್ದಾರೆ. ಆಕೆ ನೋವು ತಾಳಲಾರದೆ ರಸ್ತೆಯಲ್ಲೇ ಕುಸಿದು ಕುಳಿತು ಜೋರಾಗಿ ಅಳುತ್ತಿದ್ದಾಳೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಮತ್ತು ಸಾರ್ವನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಓರ್ವ ಮಹಿಳೆಯ ಮೇಲೆ ಪುರುಷ ಪೊಲೀಸ್ ಅಧಿಕಾರಿಗಳು ಹೊಡೆಯುವಂತಿಲ್ಲ. ಆದರೆ ಇಲ್ಲಿ ಪೊಲೀಸರು ಒಬ್ಬ ಮಹಿಳೆ ಎನ್ನುವುದನ್ನೂ ಗಮನಿಸದೆ ಅಮಾನುಷವಾಗಿ ನಡೆದುಕೊಂಡಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
https://twitter.com/i/status/1964955143134437464
ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪ: ಖಾಸಗಿ ಕಂಪನಿಯಿಂದ ಕೇಂದ್ರ ಸರ್ಕಾರಕ್ಕೆ ಪತ್ರ, ಅನುಮತಿ ಸಿಗತ್ತಾ?
BPL cards 8 ಲಕ್ಷ ಬಿಪಿಎಲ್ ಕಾರ್ಡ್ ರದ್ದತಿಗೆ ರಾಜ್ಯ ಸರ್ಕಾರ ನಿರ್ಧಾರ
ನಟಿ ನವ್ಯಾ ನಾಯರ್‌ಗೆ 1.14 ಲಕ್ಷ ರೂ. ದಂಡ, ಕಾರಣ ತಿಳಿದರೆ ಅಚ್ಚರಿ ನಿಶ್ಚಿತ! ವಿಡಿಯೋ ನೋಡಿ