Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪ: ಖಾಸಗಿ ಕಂಪನಿಯಿಂದ ಕೇಂದ್ರ ಸರ್ಕಾರಕ್ಕೆ ಪತ್ರ, ಅನುಮತಿ‌ ಸಿಗತ್ತಾ?
ಕರ್ನಾಟಕದೇಶಪ್ರಮುಖ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪ: ಖಾಸಗಿ ಕಂಪನಿಯಿಂದ ಕೇಂದ್ರ ಸರ್ಕಾರಕ್ಕೆ ಪತ್ರ, ಅನುಮತಿ‌ ಸಿಗತ್ತಾ?

Share
2 Min Read
SHARE

newsics.com

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆಯ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶದ ಸುಮಾರು 10,100 ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇರುವುದು ಪತ್ತೆಯಾಗಿದೆ.

ಈ ಕುರಿತಂತೆ ಬೆಂಗಳೂರಿನ ಖಾಸಗಿ ಕಂಪನಿಯೊಂದು, ಕೇಂದ್ರ ಅರಣ್ಯ ಇಲಾಖೆಗೆ ಪತ್ರ ಬರೆದಿದೆ.

ತಾನು ಗುರುತಿಸಿರುವ ಪ್ರದೇಶದಲ್ಲಿ ಚಿನ್ನವಿರುವುದು ದೃಢಪಟ್ಟಿದೆ. ಆದರೆ, ಆ ಪ್ರದೇಶದ ಒಂದು ಟನ್ ಮಣ್ಣಿನಲ್ಲಿ ಎಷ್ಟು ಗ್ರಾಂ ಚಿನ್ನ ಬರಬಹುದು ಎಂಬುದನ್ನು ಮನವರಿಕೆ ಮಾಡಿಕೊಳ್ಳಲು ಅಲ್ಲಿ ಕೆಲವು ಪರೀಕ್ಷೆಗಳನ್ನು ನಡೆಸುವ ಅವಶ್ಯಕತೆಯಿದೆ. ಅದಕ್ಕಾಗಿ, ಆ 10,100 ಎಕರೆಯಲ್ಲಿ ಕನಿಷ್ಟ 1,000 ಕಡೆಗಳಲ್ಲಿ ಡ್ರಿಲ್ಲಿಂಗ್ ಅಥವಾ ಬೋರ್ ವೆಲ್ ಕೊರೆಯಬೇಕಿದ್ದು ಅದಕ್ಕಾಗಿ ಅವಕಾಶ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿದೆ.

ಇದಕ್ಕೆ ಕೇಂದ್ರ ಸರ್ಕಾರ ಸಮ್ಮತಿಸಿದರೆ, ಕೋಲಾರದ ಕೆಜಿಎಫ್, ರಾಯಚೂರಿನ ಹಟ್ಟಿ ಚಿನ್ನದ ಗಣಿಯ ನಂತರ ರಾಜ್ಯದಲ್ಲಿ ಮತ್ತೊಂದು ದೊಡ್ಡ ಚಿನ್ನದ ಗಣಿಗಾರಿಕೆ ಅರಂಭವಾದಂತಾಗುತ್ತದೆ.
ತಾನು ಗುರುತಿಸಿರುವ 10,100 ಎಕರೆ ಜಾಗದಲ್ಲಿ 5,600 ಎಕರೆ ಜಾಗವು ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಆ ಇಡೀ 10,100 ಎಕರೆಯಲ್ಲಿ ಚಿನ್ನದ ನಿಕ್ಷೇಪ ಇರುವ ಬಗ್ಗೆ ಮೇಲ್ನೋಟಕ್ಕೆ ಹಲವಾರು ಆಧಾರಗಳು ಸಿಕ್ಕಿದ್ದು, ಅದನ್ನು ನಿಖರವಾಗಿ ತಿಳಿಯಲು ತಮಗೆ ಡ್ರಿಲ್ಲಿಂಗ್ ಗೆ ಅವಕಾಶ ಕಲ್ಪಿಸಬೇಕು ಎಂದು ಕಂಪನಿ ಕೋರಿದೆ.
ಬೆಂಗಳೂರು ಮೂಲದ ಔರಮ್ ಜಿಯೋ ಎಕ್ಸ್ ಪ್ಲೋರೇಷನ್ ಪ್ರೈವೇಟ್ ಲಿಮಿಟೆಡ್ ಕಂಪನಿ ಈ ಸಂಬಂಧ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ.

ಕೇಂದ್ರ ಖನಿಜ ಇಲಾಖೆ ನಿಕ್ಷೇಪಗಳಿಗಾಗಿ ಭೂಮಿಯ ಪರೀಕ್ಷೆ ನಡೆಸಲು ಹಾಗೂ ಅಗತ್ಯವಿದ್ದ ಕಡೆ ಸಣ್ಣ ಪ್ರಮಾಣದ ಉತ್ಖನನ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ತರೀಕೆರೆಯ ಸುಮಾರು 10,100 ಎಕರೆ ಭೂಭಾಗದಲ್ಲಿ ಚಿನ್ನದ ನಿಕ್ಷೇಪವಿದೆ. ಆ ಬಗ್ಗೆ ಮತ್ತಷ್ಟು ನಿಖರವಾಗಿ ಸಂಶೋಧನೆಯನ್ನು ನಡೆಸುವ ಅವಶ್ಯಕತೆಯಿದೆ. ಆ 10,100 ಎಕರೆ ಭೂಭಾಗದಲ್ಲಿ 5,600 ಎಕರೆ ಭೂಮಿಯು ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶಕ್ಕೆ ಸೇರುತ್ತದೆ. ಉಳಿದ ಭೂಮಿಯಲ್ಲಿ 3,600 ಎಕರೆ ಪಪ್ರದೇಶವು ಕೃಷಿ ಭೂಮಿ. ಈ ಭೂಮಿಯು ಕಲ್ಲು ಬಂಡೆಗಳನ್ನು ಹೊಂದಿರುವುದರಿಂದ ಇಲ್ಲಿ ಸರಿಯಾಗಿ ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಈ ಪ್ರದೇಶಗಳಲ್ಲಿ ಡ್ರಿಲ್ಲಿಂಗ್ ನಡೆಸಬೇಕಿದೆ. ಆ ಹಿನ್ನೆಲೆಯಲ್ಲಿ ನಮಗೆ 10,000 ಎಕರೆ ಪ್ರದೇಶಗಳಲ್ಲಿ ಡ್ರಿಲ್ಲಿಂಗ್ ನಡೆಸಲು ಅವಕಾಶ ನೀಡಬೇಕು ಎಂದು ಪತ್ರದಲ್ಲಿ ಕಂಪನಿಯು ವಿವರಿಸಿದೆ.
ಈ ಹಿಂದೆ ಇದೇ ಕಂಪನಿ ಕರ್ನಾಟಕದ ಸಿಂಗನಮನೆ, ತಂಬಡಿಹಳ್ಳಿ, ಗೋಣಿಬಿಡ್ಡು ಹಾಗೂ ಹೊನ್ನುಹಟ್ಟಿಗಳಲ್ಲಿ ಚಿನ್ನದ ನಿಕ್ಷೇಪ ಇರುವ ಬಗ್ಗೆ ಗುರುತು ಮಾಡಿತ್ತು. ಅಲ್ಲಿನ ಪ್ರತಿ ಟನ್ ಮಣ್ಣಿನಲ್ಲಿ 19ರಿಂದ 80 ಗ್ರಾಂ. ಚಿನ್ನ ಸಿಗುತ್ತದೆ ಎಂದು ಹೇಳಿತ್ತು. ಅವೆಲ್ಲವೂ ದೃಢಪಟ್ಟಿವೆ ಎಂದು ಈಗ ಸರ್ಕಾರಕ್ಕೆ ಬರೆದಿರುವ ಪತ್ರದ ಜತೆಗೆ ಕಂಪನಿಯು ಸಲ್ಲಿಸಿರುವ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ, ಈಗ ತರೀಕೆರೆಯಲ್ಲಿ ತನಗೆ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಟ್ಟರೆ 10,100 ಎಕರೆ ಭೂಭಾಗದಲ್ಲಿ 1,000 ಕಡೆ ಬೋರ್ ವೆಲ್‌ಗಳನ್ನು ಹಾಕಬೇಕಾಗುತ್ತದೆ ಎಂದು ಸರ್ಕಾರಕ್ಕೆ ಪತ್ರದ ಮುಖೇನ ಔರಮ್ ಕಂಪನಿ ತಿಳಿಸಿದೆ.
ತರೀಕೆರೆ ಪ್ರಾಂತ್ಯದ ಅರಣ್ಯ ಭಾಗವು, ಪಶ್ಚಿಮ ಘಟ್ಟಗಳಿಗೆ ಸೇರಿದ್ದಾಗಿದ್ದು ಅಲ್ಲಿ ಚಿರತೆಗಳು, ಕರಡಿಗಳು ಹಾಗೂ ಹಲವು ಅಪರೂಪದ ಜೀವಿಗಳ ಆಶ್ರಯ ತಾಣವಾಗಿದೆ. ಹೀಗಾಗಿ, ಕಂಪನಿ ಸಲ್ಲಿಸಿರುವ ಮನವಿಗೆ ಕೇಂದ್ರ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Gold Rate Today Bangalore: ಚಿನ್ನ, ಬೆಳ್ಳಿ ಬೆಲೆಗಳು ಇಳಿಕೆ; ಇಂದಿನ ದರಪಟ್ಟಿ ಇಲ್ಲಿದೆ

Health news ಕ್ಯಾನ್ಸರ್ ರೋಗಿಗಳಲ್ಲಿ ಹೊಸ ಭರವಸೆ ಹುಟ್ಟಿಸಿದ ರಷ್ಯಾ ಲಸಿಕೆ: ಕ್ಲಿನಿಕಲ್ ಪ್ರಯೋಗದಲ್ಲೇ ಯಶಸ್ವಿ

TAGGED:Gold deposits in Chikkamagaluru district: Will a private company get a letter from the central government and permission?
Share This Article
Facebook Twitter Copy Link Print
Previous Article ಲವ್ ಸ್ಟ್ರಾಂಗ್ ಆಗಬೇಕಾ?; 777 ರೂಲ್ ಪಾಲಿಸಿ, ಏನಿದು ನಿಯಮ?
Next Article Social media ban effect ಹಿಂಸಾರೂಪ ತಾಳಿದ ಜೆನ್ ಝಡ್ ಹೋರಾಟ: 14 ಮಂದಿ ಸಾವು,‌ ನೂರಾರು ಮಂದಿಗೆ ಗಾಯ, ಕರ್ಫ್ಯೂ ಜಾರಿ

Popular Posts

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?