Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಲವ್ ಸ್ಟ್ರಾಂಗ್ ಆಗಬೇಕಾ?; 777 ರೂಲ್ ಪಾಲಿಸಿ, ಏನಿದು ನಿಯಮ?
ಪ್ರಮುಖರಿಲೇಷನ್‌ಶಿಪ್

ಲವ್ ಸ್ಟ್ರಾಂಗ್ ಆಗಬೇಕಾ?; 777 ರೂಲ್ ಪಾಲಿಸಿ, ಏನಿದು ನಿಯಮ?

Share
3 Min Read
SHARE

newsics.com

ಇತ್ತೀಚೆಗೆ ಆಳವಾದ ಮತ್ತು ಅರ್ಥಪೂರ್ಣ ಸಂಬಂಧಗಳನ್ನು ಬೆಳೆಸುವುದು ಸವಾಲಾಗಿದೆ. ಪ್ರಸ್ತುತ ಡೇಟಿಂಗ್ ಪ್ರಕ್ರಿಯೆಗಳು ಸಾಕಷ್ಟು ಬದಲಾವಣೆಗಳನ್ನು ಕಂಡಿವೆ. ಈ ಹಿನ್ನೆಲೆಯಲ್ಲಿ, ಡೇಟಿಂಗ್ ಮಾಡುವಾಗ ಕೆಲವು ನಿರ್ದಿಷ್ಟ ನಿಯಮಗಳನ್ನು ಅನುಸರಿಸುವುದು ಸಂಬಂಧ ಗಟ್ಟಿಯಾಗುತ್ತದೆ.

ಸದ್ಯ ‘7-7-7 ನಿಯಮ’ ಎಂಬುದು ಡೇಟಿಂಗ್ ಜಗತ್ತಿನಲ್ಲಿ ಹೊಸ ಸಂಚಲನವನ್ನು ಸೃಷ್ಟಿಸುತ್ತಿದೆ. ಇದು ಕೇವಲ ಒಂದು ಟ್ರೆಂಡ್ ಅಲ್ಲ, ಬದಲಿಗೆ ಹೊಸ ಸಂಬಂಧವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಸಹಾಯ ಮಾಡುವ ಒಂದು ಪ್ರಾಯೋಗಿಕ ಮಾರ್ಗವಾಗಿದೆ. ಬಹುಶಃ ಹೆಚ್ಚಿನ ಜನರಿಗೆ ಇದರ ಬಗ್ಗೆ ತಿಳಿದಿಲ್ಲ. ಈ ನಿಯಮದ ಪ್ರಕಾರ, ಹೊಸ ಸಂಬಂಧವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು, ಮೊದಲ 7 ದಿನಗಳು, ನಂತರ 7 ವಾರಗಳು ಮತ್ತು ನಂತರ 7 ತಿಂಗಳುಗಳವರೆಗೆ ಸಂಬಂಧವನ್ನು ಅರ್ಥ ಮಾಡಿಕೊಳ್ಳಬೇಕು.

7-7-7 ನಿಯಮ ಎಂದರೇನು?
7-7-7 ನಿಯಮವು ಹೊಸ ಸಂಬಂಧದಲ್ಲಿ ಮೂರು ನಿರ್ದಿಷ್ಟ ಹಂತಗಳಲ್ಲಿ ಗಮನ ಹರಿಸುವಂತೆ ಸೂಚಿಸುತ್ತದೆ. ಪ್ರತಿಯೊಂದು ‘7’ ಒಂದು ನಿರ್ದಿಷ್ಟ ಸಮಯದ ಅವಧಿಯನ್ನು ಮತ್ತು ಆ ಅವಧಿಯಲ್ಲಿ ಏನು ಮಾಡಬೇಕು ಎಂಬುದನ್ನು ಪ್ರತಿನಿಧಿಸುತ್ತದೆ.
ಲವ್‌ ಅಥವಾ ಸಂಬಂಧ ಪ್ರಾರಂಭವಾದ ಮೊದಲ 7 ದಿನಗಳು ಅತ್ಯಂತ ನಿರ್ಣಾಯಕ. ಈ ಸಮಯದಲ್ಲಿ, ನಿಮ್ಮ ಸಂಗಾತಿಯ ಮಾತು, ವರ್ತನೆ (ನಡವಳಿಕೆ) ಮತ್ತು ಬಾಡಿ ಲಾಂಗ್ವೇಜ್ (ದೇಹ ಭಾಷೆ) ಅನ್ನು ಗಮನಿಸಬೇಕು. ಅವರು ಹೇಗೆ ಮಾತನಾಡುತ್ತಾರೆ, ಜನರೊಂದಿಗೆ ಹೇಗೆ ವರ್ತಿಸುತ್ತಾರೆ, ಒತ್ತಡದ ಸಂದರ್ಭಗಳಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾರೆ ಮತ್ತು ಅವರ ಸಾಮಾನ್ಯ ಮನೋಭಾವ ಹೇಗಿರುತ್ತದೆ ಎಂಬುದನ್ನು ಗಮನಿಸಿ. ಉದಾಹರಣೆಗೆ, ಅವರು ಸಮಯಕ್ಕೆ ಸರಿಯಾಗಿ ಬರುತ್ತಾರೆಯೇ, ಇತರರ ಬಗ್ಗೆ ಹೇಗೆ ಮಾತನಾಡುತ್ತಾರೆ, ಸಾರ್ವಜನಿಕ ಸ್ಥಳಗಳಲ್ಲಿ ಅವರ ವರ್ತನೆ ಹೇಗಿರುತ್ತದೆ ಎಂಬುದನ್ನು ಗಮನಿಸಿ. ಇದು ಪರಸ್ಪರರ ಪ್ರಾಥಮಿಕ ಹೊಂದಾಣಿಕೆಯನ್ನು ಅಳೆಯುವ ಹಂತವಾಗಿದೆ.

ಮೊದಲ 7 ದಿನಗಳ ನಂತರ, ಮುಂದಿನ 7 ವಾರಗಳು ಪರಸ್ಪರರನ್ನು ಸ್ವಲ್ಪಮಟ್ಟಿಗೆ ತಿಳಿದುಕೊಳ್ಳಲು ಮೀಸಲಾಗಿರಬೇಕು. ಈ ಸಮಯದಲ್ಲಿ ನೀವು ಸಂಗಾತಿಯ ಹವ್ಯಾಸಗಳು, ಆಸಕ್ತಿಗಳು, ಮೌಲ್ಯಗಳು, ಜೀವನದ ಗುರಿಗಳು, ಮತ್ತು ಹಿಂದಿನ ಅನುಭವಗಳ ಬಗ್ಗೆ ತಿಳಿದುಕೊಳ್ಳಲು ಟ್ರೈ ಮಾಡಿ. ವಿವಿಧ ಚಟುವಟಿಕೆಗಳಲ್ಲಿ ಒಟ್ಟಾಗಿ ಪಾಲ್ಗೊಳ್ಳಿ. ಈ ಸಮಯದಲ್ಲಿ ನೀವು ಪರಸ್ಪರರ ಹೊಂದಾಣಿಕೆಯನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿ. ಇದರಿಂದ ನೀವು ಅವರೊಂದೊಗೆ ಮುಂದುವರೆಯಲು ಯೋಗ್ಯವೇ? ಎಂದು ನಿರ್ಧರಿಸಬಹುದು. ಈ ಹಂತವು ಸಂಬಂಧದ ಅಡಿಪಾಯವನ್ನು ಬಲಪಡಿಸುತ್ತದೆ.

ನಿಮ್ಮ ಸಂಬಂಧವು 7 ತಿಂಗಳು ತಲುಪಿದ ನಂತರ, ನೀವು ಇನ್ನಷ್ಟು ಆಳವಾದ ಸಂಪರ್ಕವನ್ನು ಬೆಳೆಸಿಕೊಂಡಿರುತ್ತೀರಿ. ಈ ಹಂತದಲ್ಲಿ ನೀವು ಒಟ್ಟಾಗಿ ಒಂದು ಸುಂದರವಾದ ಸ್ಥಳಕ್ಕೆ ಹೋಗಬಹುದು. ಇದು ನಿಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಹೊಸ ಪರಿಸರದಲ್ಲಿ, ಒತ್ತಡವಿಲ್ಲದ ಸಂದರ್ಭಗಳಲ್ಲಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ರಜೆ ಅಥವಾ ಪ್ರವಾಸವು ಸಂಬಂಧದಲ್ಲಿ ಹೊಸ ಉತ್ಸಾಹವನ್ನು ತರುತ್ತದೆ. ಇಬ್ಬರು ಒಟ್ಟಿಗೆ ಹೆಚ್ಚು ಸಮಯವನ್ನು ಕಳೆಯಲು ಅವಕಾಶ ನೀಡುತ್ತದೆ. ಭವಿಷ್ಯದ ಬಗ್ಗೆ ಯೋಚಿಸಲು ಅವಕಾಶ ಸಿಗುತ್ತದೆ. ಈ ಹಂತದಲ್ಲಿ, ನಿಮ್ಮ ಸಂಬಂಧವು ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತದೆ.

7-7-7 ನಿಯಮ ಏಕೆ ಮುಖ್ಯ? ಡೇಟಿಂಗ್‌ನಲ್ಲಿ ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತಪ್ಪು. ಭಾವನಾತ್ಮಕವಾಗಿ ಅವಸರ ಮಾಡುವುದು ಭವಿಷ್ಯದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಬಹುದು. ಸುಳ್ಳು ಭರವಸೆಗಳು ಮತ್ತು ತಪ್ಪು ತಿಳುವಳಿಕೆಗಳು ಸಂಬಂಧಗಳನ್ನು ಹಾಳುಮಾಡುತ್ತವೆ. 7-7-7 ನಿಯಮವು ನಿಮಗೆ ಎಚ್ಚರಿಕೆಯಿಂದ ಯೋಚಿಸಲು, ಪರಸ್ಪರರನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಮತ್ತು ಆತುರದ ತಪ್ಪುಗಳನ್ನು ಮಾಡುವುದನ್ನು ತಪ್ಪಿಸಲು ಅವಕಾಶ ನೀಡುತ್ತದೆ. ಇದು ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡಲು ಸಹಕಾರಿ. ಬಲವಾದ, ದೀರ್ಘಕಾಲೀನ ಸಂಬಂಧವನ್ನು ಹೊಂದಲು ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ, ಪ್ರತಿಯೊಂದು ಸಂಬಂಧವು ವಿಭಿನ್ನವಾಗಿರುತ್ತದೆ. ಆಧುನಿಕ ಡೇಟಿಂಗ್ ಜಗತ್ತಿನಲ್ಲಿ, 7-7-7 ನಿಯಮವು ಪ್ರೀತಿಯನ್ನು ಹುಡುಕುವವರಿಗೆ ಒಂದು ಅಮೂಲ್ಯ ಮಾರ್ಗದರ್ಶಿ ಎನ್ನಬಹುದು.

BPL cards 8 ಲಕ್ಷ ಬಿಪಿಎಲ್ ಕಾರ್ಡ್ ರದ್ದತಿಗೆ ರಾಜ್ಯ ಸರ್ಕಾರ ನಿರ್ಧಾರ

TAGGED:Want to make love strong?; 777 rule policywhat is the rule?
Share This Article
Facebook Twitter Copy Link Print
Previous Article BPL cards 8 ಲಕ್ಷ ಬಿಪಿಎಲ್ ಕಾರ್ಡ್ ರದ್ದತಿಗೆ ರಾಜ್ಯ ಸರ್ಕಾರ ನಿರ್ಧಾರ
Next Article ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪ: ಖಾಸಗಿ ಕಂಪನಿಯಿಂದ ಕೇಂದ್ರ ಸರ್ಕಾರಕ್ಕೆ ಪತ್ರ, ಅನುಮತಿ‌ ಸಿಗತ್ತಾ?

Popular Posts

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read

ಪ್ರಿಯ ಮಿತ್ರ ನರೇಂದ್ರ, ಜೈ ಹಿಂದ್; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್

1 Min Read

You Might Also Like

ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read
ಪ್ರಮುಖಮನರಂಜನೆ

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

1 Min Read
ಪ್ರಮುಖಕರ್ನಾಟಕ

9 ವರ್ಷಗಳ ಕಾನೂನು ಹೋರಾಟಕ್ಕೆ ತೆರೆ; ಚೈತ್ರಾ ಕುಂದಾಪುರ ಭಾವುಕ ಪೋಸ್ಟ್

1 Min Read
ಪ್ರಮುಖಮನರಂಜನೆ

Nivedita Gowda: ಗರಿ ಬಿಚ್ಚಿ ಕುಣಿದ ನಿವೇದಿತಾ ಗೌಡ- ಕಿಶನ್! ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?