newsics.com
ಗಂಡ ಹಾಗೂ ಮೂವರು ಮಕ್ಕಳನ್ನು ಬಿಟ್ಟು ಲವರ್ ಜೊತೆ ಓಡಿ ಹೋಗಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಸಮೀಪದ ಬಸವನಪುರ ಗ್ರಾಮದಲ್ಲಿ ನಡೆದಿದೆ
11 ವರ್ಷಗಳ ಹಿಂದೆ ಪ್ರೀತಿಸಿ ಮಂಜುನಾಥ್ ಎನ್ನುವಾತನನ್ನು ಲೀಲಾವತಿ ಎನ್ನುವಾಕೆ ಮದುವೆಯಾಗಿದ್ದಳು. ಮೂರು ಮಕ್ಕಳು ಸಹ ಇದ್ದವು. ಆದರೂ ಮೂರು ಮಕ್ಕಳ ತಾಯಿ ಲೀಲಾವತಿ ಮತ್ತೋರ್ವನ ಜೊತೆ ಓಡಿಹೋಗಿದ್ದಾಳೆ. ಪತಿ ಮಂಜುನಾಥ್ ಹಾಗೂ ಮೂರು ಮಕ್ಕಳು ಕಣ್ಣೀರಿಡುತ್ತಿದ್ದಾರೆ.
ಮೂವರು ಮಕ್ಕಳು, ಗಂಡನನ್ನು ಬಿಟ್ಟು ಪ್ರಿಯಕರ ಸಂತೋಷ್ ನೊಂದಿಗೆ ಮನೆ ಬಿಟ್ಟು ಓಡಿಹೋದ ಲೀಲಾವತಿ ಆಂಟಿ ಕಥೆ ಒಂದೊಂದಲ್ಲ. ಈ ಲೀಲಾವತಿಗೆ ಈಗ ಇರುವ ಗಂಡನಿಗಿಂತಲೂ ಮೊದಲೇ ಮತ್ತೊಬ್ಬನೊಂದಿಗೆ ಮದುವೆಯಾಗಿತ್ತು ಎಂದು ಗಂಡ ಆರೋಪಿಸಿದ್ದಾನೆ. ಈಗ ನನ್ನನ್ನು ಬಿಟ್ಟು ಮತ್ತೊಬ್ಬನ ಹಿಂದೆ ಹೋಗಿದ್ದಾಳೆ ಎಂದು ಗೋಳಾಡಿದ್ದಾನೆ
ಈ ಸಂಬಂಧ ಪತಿ ಮಂಜುನಾಥ್ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ. ನಂತರ ಪೊಲೀಸ್ ಠಾಣೆಗೆ ಲೀಲಾವತಿ ಪ್ರಿಯಕರನ ಜೊತೆ ಬಂದು ನನಗೆ ನನ್ನ ಗಂಡ , ಮಕ್ಕಳು ಬೇಡ. ಪ್ರಿಯಕರ ಬೇಕು ಎಂದಿದ್ದಾಳೆ. ಇತ್ತ ಅಮ್ಮ ಬೇಕು ಮಕ್ಕಳು ಹಠ ಹಿಡಿದು ಅಳುತ್ತಿದ್ದರೆ, ಇನ್ನೊಂದು ಕಡೆ ಹೆಂಡತಿ ಬೇಕು ಅಂತ ಗಂಡ ಗೋಗರೆಯುತ್ತಿದ್ದಾರೆ.