newsics.com
ಮಡಿಕೇರಿ: ಸರ್ಕಾರದ ಅಧಿಕಾರಿಯೊಬ್ಬರು ಕಾರಿನಲ್ಲೇ ಹೃದಯಾಘಾತಕ್ಕೊಳಗಾಗಿ ಸಾವಿಗೀಡಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮೂಲತಃ ಬೆಂಗಳೂರಿನವರಾಗಿದ್ದು, ಈಗ ಕೊಡಗಿನ ತಿತಿಮತಿಯಲ್ಲಿ ಕುಟುಂಬಸಹಿತ ವಾಸವಿದ್ದ ಮನಮೋಹನ್ (46) ಸಾವಿಗೀಡಾದವರು.
ಶುಕ್ರವಾರ ಸಂಜೆ 4ಗಂಟೆ ಸುಮಾರಿಗೆ ತಿತಿಮತಿಯಿಂದ ಪಿರಿಯಾಪಟ್ಟಣಕ್ಕೆ ತಮ್ಮ ಆಲ್ಟೋ ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದಾಗ ಬೂದಿತಿಟ್ಟು ಬಳಿ ಈ ದುರ್ಘಟನೆ ನಡೆದಿದೆ.
ಈ ಹಿಂದೆ ಕೊಡಗಿನ ಪೊನ್ನಪ್ಪಸಂತೆ, ನಿಟ್ಟೂರು, ಬಾಳಲೆ, ಸೋಮವಾರಪೇಟೆ, ಸಿದ್ದಾಪುರ ಪಂಚಾಯತ್’ಗಳಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಮನಮೋಹನ್ ಅವರು ಕಳೆದ ಒಂದೂವರೆ ತಿಂಗಳಿನಿಂದ ಪೊನ್ನಂಪೇಟೆ ತಾಲೂಕು ಪಂಚಾಯಿತಿಯಲ್ಲಿ ಪ್ರಭಾರ ಯೋಜನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
Viral ಗಂಡ ತನ್ನ ಅನುಮತಿ ಇಲ್ಲದೆ ಫೋನ್ ಚೆಕ್ ಮಾಡಿದ ಎಂದು ಸಿಟ್ಟಿಗೆದ್ದ ಪತ್ನಿ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ