newsics.com
ಹಿಂದೂ ಧರ್ಮದ ಮನೆಗಳಲ್ಲಿ ಪೂಜಾ ಸ್ಥಳಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಏಕೆಂದರೆ ವಾಸ್ತು ಶಾಸ್ತ್ರದ ಪ್ರಕಾರ ಪೂಜಾ ಕೋಣೆ ಯನ್ನು ವಿನ್ಯಾಸಗೊಳಿಸುವುದರಿಂದ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
- ಅಲ್ಲದೆ ಪ್ರತಿನಿತ್ಯ ದೇವರ ಆರಾಧನೆಯನ್ನು ಮಾಡುವುದರಿಂದ ಜೀವನದಲ್ಲಿ ಸಂತೋಷವನ್ನು, ಸಮೃದ್ಧಿಯನ್ನು ಮತ್ತು ಸಕಾರಾತ್ಮಕತೆಯನ್ನು ಪಡೆದುಕೊಳ್ಳುವ ನಂಬಿಕೆ ಇದೆ. ಹಾಗೆಯೇ ದೇವರ ಕೋಣೆ ಎಂದರೆ ಮನೆಯ ದೇವತೆ ನೆಲೆಸುವ ಸ್ಥಳ. ಮನೆಯಲ್ಲಿ ಧನಾತ್ಮಕ ಶಕ್ತಿಯು ಪರಿಚಲನೆಗೊಳ್ಳುವ ಸ್ಥಳ, ಆದ್ದರಿಂದ, ವಾಸ್ತು ಪ್ರಕಾರ, ದೇವರ ಮನೆ ಯಾವಾಗಲೂ ಈಶಾನ್ಯ ಅಥವಾ ಪೂರ್ವದಲ್ಲಿರಬೇಕು. ವಾಸ್ತು ಪ್ರಕಾರ ಇದು ಅತ್ಯುತ್ತಮ ಸ್ಥಳವೆಂದು ಪರಿಗಣಿಸಲಾಗಿದೆ. ಪೂಜಾ ಸ್ಥಳವು ಎಂದಿಗೂ ನೈಋತ್ಯದಲ್ಲಿ ಇರಬಾರದು. ಒಂದು ವೇಳೆ ಈ ದಿಕ್ಕಿನಲ್ಲಿದ್ದರೆ ನಮ್ಮ ಕೆಲಸದಲ್ಲಿ ಅಡೆತಡೆಗಳು ಉಂಟಾಗುತ್ತವೆ
ನಿಮ್ಮ ಕುಟುಂಬದ ಯಾವುದೇ ಸದಸ್ಯರು ಸೂತಕವನ್ನು ಹೊಂದಿದ್ದರೆ, ಪೂಜೆಯ ವಿಗ್ರಹವನ್ನು ಮುಟ್ಟುವುದನ್ನು ತಪ್ಪಿಸಬೇಕು. ಸೂತಕದ ಸಮಯದಲ್ಲಿ ದೇವರ ವಿಗ್ರಹವನ್ನು ಸ್ಪರ್ಶಿಸುವುದರಿಂದ ಪೂಜೆಯ ಪಾವಿತ್ರ್ಯತೆ ಹಾಳಾಗಬಹುದು ಮತ್ತು ನಿಮ್ಮ ಭಕ್ತಿಯನ್ನು ಕಡಿಮೆ ಮಾಡಬಹುದು. ಈ ಪರಿಸ್ಥಿತಿಯಲ್ಲಿ, ಇತರ ಧಾರ್ಮಿಕ ಚಟುವಟಿಕೆಗಳನ್ನು ಮನೆಯಲ್ಲಿ ನಡೆಸಬಹುದು, ಆದರೆ ವಿಗ್ರಹವನ್ನು ಮುಟ್ಟಬೇಡಿ.
ಗಣೇಶನನ್ನು ಪೂಜಿಸುವಾಗ ತುಳಸಿಯನ್ನು ಬಳಸಬಾರದು. ಗಣಪತಿಯು ತುಳಸಿಯನ್ನು ಇಷ್ಟಪಡುವುದಿಲ್ಲ ಮತ್ತು ನೀವು ತುಳಸಿಯನ್ನು ಗಣೇಶನಿಗೆ ಅರ್ಪಿಸಿದರೆ ಅದು ಅವನ ಕೃಪೆಯನ್ನು ನೀವು ಕಳೆದುಕೊಳ್ಳುವಂತೆ ಮಾಡುತ್ತದೆ ಎನ್ನುವ ನಂಬಿಕೆಯಿದೆ. ಈ ಕಾರಣದಿಂದಾಗಿ, ಪೂಜೆಯ ಫಲಿತಾಂಶಗಳು ನಕಾರಾತ್ಮಕವಾಗಬಹುದು.
ದೇವಿಯನ್ನು ಪೂಜಿಸುವಾಗ ದುರ್ವಾವನ್ನು ಅರ್ಪಿಸುವುದು ಸೂಕ್ತವಲ್ಲ. ದೂರ್ವಾವನ್ನು ದೇವಿಗೆ ಅರ್ಪಿಸುವುದು ಎಂದರೆ ನೀವು ಆಕೆಗೆ ಅವಮಾನ ಮಾಡುತ್ತಿದ್ದೀರಿ ಎಂದು ಪರಿಗಣಿಸಲಾಗಿದೆ. ಇದರಿಂದ ನಿಮ್ಮ ಭಕ್ತಿಗೆ ಹಾನಿಯುಂಟಾಗಬಹುದು ಮತ್ತು ದೇವಿಯ ಆಶೀರ್ವಾದವನ್ನು ಪಡೆಯಲು ಕಷ್ಟವಾಗಬಹುದು. ಇದರಿಂದ ದೇವಿ ನಿಮ್ಮ ಮೇಲೆ ಕೋಪಗೊಳ್ಳಬಹುದು. ಯಾವುದೇ ದೇವಿಯನ್ನು ಪೂಜಿಸುವಾಗ ನೀವು ದುರ್ವಾವನ್ನು ಅರ್ಪಿಸಬೇಡಿ.
ಪೂಜೆ ಮಾಡುವ ಸ್ಥಳದಲ್ಲಿ ಪೂಜೆ ಸಾಮಗ್ರಿಯನ್ನು ಎಂದಿಗೂ ಮುರಿಯಬಾರದು. ಅಥವಾ ಮುರಿದ ಪೂಜೆ ಸಾಮಾಗ್ರಿಗಳನ್ನು ದೇವರ ಕೋಣೆಯಲ್ಲಿ ಇಟ್ಟುಕೊಳ್ಳಬಾರದು.
ಸ್ನಾನ ಮಾಡದೆ ಪೂಜಾಸ್ಥಳಕ್ಕೆ ಹೋಗಬಾರದು. ಇದರೊಂದಿಗೆ, ಬೆಳಿಗ್ಗೆ ಮತ್ತು ಸಂಜೆ ಮರೆಯದೇ ದೇವರ ಕೋಣೆಯಲ್ಲಿ ದೀಪಗಳನ್ನು ಬೆಳಗಿಸಬೇಕು. ದೇವರನ್ನು ಪೂಜಿಸುವಾಗ ಗಂಟೆಯನ್ನು ಭಾರಿಸಬೇಕು ಹಾಗೂ ಶಂಖವನ್ನು ಊದಬೇಕು. ಸ್ನಾನ ಮಾಡದೆ ದೇವರ ಕೋಣೆಗೆ ಹೋಗುವುದನ್ನು ಅಶುದ್ಧವೆಂದು ಪರಿಗಣಿಸಲಾಗುತ್ತದೆ.
ಒಂದೇ ದೇವರ ಕೋಣೆಯಲ್ಲಿ ಮೂರು ಗಣೇಶನ ವಿಗ್ರಹಗಳನ್ನು ಇಡುವುದು ಅಶುಭವೆಂದು ಪರಿಗಣಿಸಲ್ಪಡುವ ಕಾರಣ ಪೂಜಾ ಮನೆಯಲ್ಲಿ ಒಂದು ಗಣೇಶನ ಮೂರ್ತಿಯನ್ನು ಮಾತ್ರ ಸ್ಥಾಪಿಸಿ. ದೇವರ ಕೋಣೆಯಲ್ಲಿ ನಾವು 3 ಗಣೇಶನ ವಿಗ್ರಹವನ್ನು ಇಡುವುದರಿಂದ ಇದು ಪೂಜೆಯಲ್ಲಿ ಅಡಚಣೆಗಳನ್ನು ಉಂಟುಮಾಡುತ್ತದೆ ಮತ್ತು ದೇವರ ಆಶೀರ್ವಾದವನ್ನು ಪಡೆಯಲು ಅಡ್ಡಿಪಡಿಸುತ್ತದೆ