newsics.com
ಕೆ.ಆರ್. ನಗರ ಅತ್ಯಾಚಾರ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ.ಇಂದು ಪರಪ್ಪನ ಅಗ್ರಹಾರದಲ್ಲಿ ಸಜಾಬಂಧಿಯಾಗಿ ಜೀವನ ಕಳೆಯುತ್ತಿದ್ದಾರೆ.
ಇದೀಗ ಜೈಲಿನಲ್ಲಿ ಅವರಿಗೆ ಭರ್ಜರಿ ಕೆಲಸ ಆಫರ್ಗಳು ಕೂಡ ಬರುತ್ತಿವೆ. ಅವರ ವಿದ್ಯಾಭ್ಯಾಸಕ್ಕೆ ತಕ್ಕನಾದ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಜೈಲಾಧಿಕಾರಿಗಳು ತಿಳಿಸಿದ್ದು, ಇದೀಗ ಅದರಲ್ಲಿ ಎರಡು ಕೆಲಸವನ್ನು ಪ್ರಜ್ವಲ್ ರೇವಣ್ಣ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿ ಈ ಕೂಲಿ ಕೆಲಸ ಮಾಡಿದ್ದಕ್ಕೆ ಕೂಲಿ ಹಣವನ್ನು ನೀಡಲಾಗುತ್ತೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಜೈಲಿನಲ್ಲಿ ಈಗ ತಾನು ಕೃಷಿ ಕೆಲಸ ಮಾಡುತ್ತೇನೆ. ಜೊತೆಗೆ ಅಡ್ಮಿನಿಸ್ಟ್ರೇಟೀವ್ ಕೆಲಸಗಳನ್ನು ಮಾಡುತ್ತೇನೆ ಎಂದು ಜೈಲು ಅಧಿಕಾರಿಗಳಿಗೆ ಹೇಳಿದ್ದಾರೆ. ಹೀಗಾಗಿ ಈಗ ಪ್ರಜ್ವಲ್ , ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೃಷಿ ಕೂಲಿ ಕೆಲಸಗಾರ. ಜೊತೆಗೆ ಅಡ್ಮಿನಿಸ್ಟ್ರೇಟಿವ್ ಕೆಲಸಗಳ ಕೂಲಿ ಕೆಲಸಗಾರ.
ಪ್ರಜ್ವಲ್ ಗೆ ಜೈಲಿನಲ್ಲಿ ಮಾಡಿದ ಕೆಲಸಕ್ಕೆ ದಿನಕ್ಕೆ 540 ರೂಪಾಯಿ ಕೂಲಿ ಸಿಗಲಿದೆ. ಒಂದು ವರ್ಷ ಆದ ನಂತರ ದಿನಕ್ಕೆ 615 ರೂಪಾಯಿ ಕೂಲಿ ನಿಗದಿಯಾಗಲಿದೆ.