newsics.com
ಬೆಂಗಳೂರು: ಆರ್‌ಸಿಬಿ ಕಪ್ ಗೆದ್ದ ಗಣೇಶ, ದ್ರೌಪದಿಯ ಕರಗ ರೂಪದ ಗಣೇಶ, ಆಪರೇಷನ್ ಸಿಂದೂರ.. ಹೀಗೆ ಹಲವು ರೂಪದಲ್ಲಿ ಈ ಬಾರಿ ವಿಘ್ನ ನಿವಾರಕ ಗಣೇಶ ಕಾಣಿಸಿಕೊಳ್ಳಲಿದ್ದಾನೆ.
ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿಆರ್‌ಸಿಬಿ ತಂಡ ಕಪ್ ಗೆದ್ದು ಬೀಗಿದ್ದನ್ನು ಎಲ್ಲರೂ ಸಂಭ್ರಮಿಸಿದರು. ಇದನ್ನು ಗಣೇಶನ ರೂಪದಲ್ಲೂ ಬಿಂಬಿಸಲಾಗಿದೆ. ಎತ್ತರದ ಗಣೇಶ ಆರ್‌ಸಿಬಿ ಹೆಸರಿನ ಬ್ಯಾಟ್ ಹಿಡಿದು ನಿಂತಿದ್ದರೆ, ಅದರ ಮುಂಭಾಗದಲ್ಲಿ ಗಣೇಶನ ವಾಹನ ಇಲಿಯು ತಲೆಯ ಮೇಲೆ ಆರ್‌ಸಿಬಿ ಕಪ್ ಹೊತ್ತು ಹೊರಡುವ ಸೆಟ್ ಆಕರ್ಷಕವಾಗಿದೆ. ಆರ್‌ಸಿಬಿ ಕಪ್ ಎತ್ತಿಕೊಂಡ ಇಲಿ ತಿರುಗುವಂತೆ ಮಾಡಲು ಮೋಟರ್ ಕೂಡ ಅಳವಡಿಸಲಾಗಿದೆ. ಮತ್ತೊಂದೆಡೆ ಆರ್‌ಸಿಬಿ ಕಪ್ ಎತ್ತಿ ತೋರಿಸುವ ಗಣೇಶ ಕೂಡ ಆಕರ್ಷಕವಾಗಿದೆ.
ಗೌರಿ-ಗಣೇಶ ಹಬ್ಬದ ಪ್ರಯುಕ್ತ ಈ ಬಾರಿ ಗಣೇಶನನ್ನು ಬಗೆ ಬಗೆಯ ರೂಪದಲ್ಲಿ ತಯಾರಿಸಲಾಗಿದೆ. ಸಾಮಾನ್ಯವಾಗಿ ಬಲಮುರಿ ಗಣಪ, ಎಡಮುರಿ ಗಣಪ ಸೇರಿದಂತೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಮೂರ್ತಿಗಳನ್ನು ತಂದು ಪೂಜಿಸುವುದು ಸಾಮಾನ್ಯವಾಗಿತ್ತು. ಈಗಲೂ ಮನೆಗಳಲ್ಲಿ ಗೌರಿ-ಗಣೇಶನನ್ನು ಕೂರಿಸುವವರು ಇಂಥದ್ದೇ ಮೂರ್ತಿಗಳನ್ನು ಕೊಂಡೊಯ್ದು ಕೂರಿಸುತ್ತಾರೆ. ಆದರೆ, ಸಾರ್ವಜನಿಕವಾಗಿ ಕೂರಿಸುವ ಗಣೇಶೋತ್ಸವ ಸಮಿತಿಗಳು ಭಿನ್ನ ಭಿನ್ನ ರೂಪದ ಗಣಪತಿ ಮೂರ್ತಿಗಳನ್ನು ಖರೀದಿಸಿ ಕೊಂಡೊಯ್ಯುವುದು ವಿಶೇಷವಾಗಿದೆ.
Dharmasthala Maskman Chinnayya ಧರ್ಮಸ್ಥಳ ಪ್ರಕರಣ: ಮಾಸ್ಕ್ ಮ್ಯಾನ್ ಸಿ.ಎನ್ ಚಿನ್ನಯ್ಯನ ಫೋಟೋ ರಿವಿಲ್ ಮಾಡಿದ SIT