newsics.com
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಮಾಸ್ಕ್ ಮ್ಯಾನ್ ಆರೋಪ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ. ನಿನ್ನೆ ಇಡೀ ದಿನ ವಿಚಾರಣೆ ನಡೆಸಿದ ಎಸ್ಐಟಿ ಅಧಿಕಾರಿಗಳು ಇಂದು ಬಂಧಿಸಿದ್ದಾರೆ.
ಎಸ್ಐಟಿ ಅಧಿಕಾರಿಗಳು ನಡೆಸಿದ ವಿಚಾರಣೆಯಲ್ಲಿ ಮಾಸ್ಕ್ ಮ್ಯಾನ್ ಬಣ್ಣ ಬಯಲಾಗಿದೆ. ನಿನ್ನ ಇಡೀ ದಿನ ರಾತ್ರಿ ಪೂರ್ತಿ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದು, ಈ ವೇಳೆ ದೂರುದಾರನ ಕರಾಳ ಬಣ್ಣ ಬಯಲಾಗಿದೆ ಎನ್ನಲಾಗಿದೆ.
ದೂರುದಾರ ಮಾಸ್ಕ್ ಮ್ಯಾನ್ ಬಂಧನದ ಬೆನ್ನಲ್ಲೇ ಆತನ ಹೆಸರು ರಿವೀಲ್ ಆಗಿದೆ. ಇದೀಗ ಆತನ ಮೊದಲ ಫೋಟೋ ಕೂಡ ರಿಲೀಸ್ ಆಗಿದೆ.
ಮಾಸ್ಕ್ ಮ್ಯಾನ್ ಹೆಸರು ಸಿ.ಎನ್ ಚಿನ್ನಯ್ಯ ಎಂಬುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಧರ್ಮಸ್ಥಳ ಕೇಸ್ ಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡಿದ ಆರೋಪದಡಿ ಮಾಸ್ಕ್ ಮ್ಯಾನ್ ಸಿ ಎನ್.ಚಿನ್ನಯ್ಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ.