Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಅತ್ತೆ- ಅಳಿಯನ ಲವ್ ಕಹಾನಿ: ಮಗಳ ಮದುವೆಗೂ ಮುನ್ನವೇ ಭಾವೀ ಅಳಿಯನೊಂದಿಗೆ ಅತ್ತೆ ಪರಾರಿ!
ದೇಶಪ್ರಮುಖರಿಲೇಷನ್‌ಶಿಪ್

ಅತ್ತೆ- ಅಳಿಯನ ಲವ್ ಕಹಾನಿ: ಮಗಳ ಮದುವೆಗೂ ಮುನ್ನವೇ ಭಾವೀ ಅಳಿಯನೊಂದಿಗೆ ಅತ್ತೆ ಪರಾರಿ!

Share
2 Min Read
SHARE

newsics.com

ಹಿಂದೆಲ್ಲ ಅಳಿಯನನ್ನು ಮಗನಂತೆ ನೋಡ್ತಿದ್ರು. ಆದರೀಗ ಅಳಿಯ ಅತ್ತೆಯ ಫೆವರೆಟ್ ಆಗ್ತಿದ್ದಾನೆ. ಬರೀ ಅಳಿಯ ಫೆವರೆಟ್ ಆಗೋದು ಮಾತ್ರವಲ್ಲ ಅವನನ್ನು ಪ್ರೀತಿಸಿ, ಮಗಳಿಗೆ ಕೈಕೊಟ್ಟು, ಅಳಿಯನ ಜತೆ ಓಡಿ ಹೋಗುವ ಪ್ರಕರಣ ಜಾಸ್ತಿಯಾಗುತ್ತಿದೆ.

ಮಗಳನ್ನು ಮದುವೆ ಆಗೋಕೆ ಬಂದ ಹುಡುಗನ ಜತೆ ಅಮ್ಮ ಓಡಿ ಹೋದ ಮತ್ತೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆ ಅಲಿಗಢದಲ್ಲಿ ಮಹಿಳೆಯೊಬ್ಬಳು ತನ್ನ ಭಾವಿ ಅಳಿಯನ ಜತೆ ಓಡಿ ಹೋಗಿದ್ದಳು. ಈಗ ಬಸ್ತಿ ಜಿಲ್ಲೆಯಲ್ಲಿ ಇಂಥದ್ದೇ ಘಟನೆ ಬೆಳಕಿಗೆ ಬಂದಿದೆ.

ಮಹಿಳೆ ಮತ್ತು ಹುಡುಗನ ಮೇಲೆ ಕುಟುಂಬಸ್ಥರು ದೂರು ನೀಡಿದ್ದಾರೆ. ಪೊಲೀಸರು ಪ್ರೇಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ದುಬೌಲಿಯಾ ಜಿಲ್ಲೆಯ ಹುಡುಗನ ಸಂಬಂಧ ಗೋಡಾ ಜಿಲ್ಲೆಯ ಹುಡುಗಿ ಜತೆ ನಿಶ್ಚಯವಾಗಿತ್ತು. ನಾಲ್ಕು ತಿಂಗಳ ಹಿಂದೆಯೇ ಮದುವೆ ಮಾತುಕತೆಯಾಗಿತ್ತು. ಕುಟುಂಬಸ್ಥರೆಲ್ಲ ಸಂಬಂಧದಿಂದ ಖುಷಿಯಾಗಿದ್ರು. ಹುಡುಗಿ ಮತ್ತೆ ಹುಡುಗನ ಜತೆ ಮಾತುಕತೆ ನಡೀತಿತ್ತು. ನಂತ್ರ ಹುಡುಗನ ಜತೆ ಹುಡುಗಿ ಅಮ್ಮನೂ ಮಾತನಾಡೋಕೆ ಶುರು ಮಾಡಿದ್ಲು. ಆರಂಭದಲ್ಲಿ ಇದನ್ನು ಮನೆಯವರು ಗಂಭೀರವಾಗಿ ಪರಿಗಣಿಸ್ಲಿಲ್ಲ. ದಿನ ಕಳೆದಂತೆ ಅವರ ವರ್ತನೆ, ಕುಟುಂಬಸ್ಥರಿಗೆ ಅನುಮಾನ ತಂದಿತ್ತು. ಸತ್ಯ ಹೊರ ಬರ್ತಿದ್ದಂತೆ ಹುಡುಗಿ ಮನೆಯವರು ಎಚ್ಚೆತ್ತುಕೊಂಡಿದ್ದರು. ಯುವಕನ ಜತೆ ಸಂಬಂಧ ಕಡಿದುಕೊಂಡಿದ್ದಲ್ದೆ ಬೇರೆ ಹುಡುಗನ ಜತೆ ಮದುವೆ ಫಿಕ್ಸ್ ಮಾಡಿದ್ದರು.

ಆದ್ರೆ ಹುಡುಗ ಹಾಗೂ ಅವನ ಭಾವಿ ಅತ್ತೆ ಮಧ್ಯೆ ಸಂಬಂಧ ಮುಂದುವರಿದಿತ್ತು. ನಾಲ್ಕು ದಿನಗಳ ಹಿಂದೆ ಇಬ್ಬರೂ ಮನೆ ಬಿಟ್ಟು ಓಡಿ ಹೋಗಿದ್ದಾರೆ.

ಕುಟುಂಬಸ್ಥರು ಇಬ್ಬರ ಹುಡುಕಾಟ ನಡೆಸಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಆಗಿದೆ. ಇಬ್ಬರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

ಇದರಿಂದ ಬೇಸತ್ತ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಇಬ್ಬರ ಮೊಬೈಲ್ ಲೊಕೇಷನ್ ಪತ್ತೆ ಹಚ್ಚುವ ಪ್ರಯತ್ನ ನಡೆದಿದೆ. ಮೊಬೈಲ್ ಸ್ವಿಚ್ ಆಪ್ ಆದ ಕಾರಣ ಪತ್ತೆ ಕಾರ್ಯ ವಿಳಂಬ ಆಗ್ತಿದೆ.

ಕುಟುಂಬಸ್ಥರದಲ್ಲಿ ಆಕ್ರೋಶ ಮನೆ ಮಾಡಿದೆ. ಈ ಅತ್ತೆ – ಅಳಿಯ ಕೂಡ ಇನ್ನೂ ಪೊಲೀಸ್ ಕೈಗೆ ಸಿಕ್ಕಿಲ್ಲ. ಶೀಘ್ರವೇ ಪತ್ತೆ ಹಚ್ಚುವ ಭರವಸೆಯನ್ನು ಪೊಲೀಸರು ನೀಡ್ತಾನೆ ಇದ್ದಾರೆ.

ಕೆಲ ದಿನಗಳ ಹಿಂದೆ ಅಲಿಗಢದಲ್ಲೂ ಇಂಥ ಘಟನೆ ನಡೆದಿತ್ತು. ಭಾವಿ ಅಳಿಯನ ಜತೆ ಅತ್ತೆ ನಾಪತ್ತೆಯಾಗಿದ್ದಳು.

ಕಾರಣ ಏನು?

ಅತ್ತೆಗೆ ತನ್ನ ಪತಿ ಅಥವಾ ಕುಟುಂಬದಿಂದ ಪ್ರೀತಿ, ಗೌರವ ಅಥವಾ ಭಾವನಾತ್ಮಕ ಬೆಂಬಲ ಸಿಗದಿದ್ದಾಗ, ಅಳಿಯನಲ್ಲಿ ಇದು ಸಿಕ್ಕಾಗ ಆಕೆ ಅವನಿಗೆ ಹತ್ತಿರವಾಗ್ತಾಳೆ ಎನ್ನುತ್ತಾರೆ ತಜ್ಞರು. ಹುಡುಗರು ತಮಗಿಂತ ವಯಸ್ಸಿನಲ್ಲಿ ಹಿರಿಯ, ಅನುಭವಿ ಮಹಿಳೆಯರಿಗೆ ಹೆಚ್ಚು ಆಕರ್ಷಿತರಾಗೋದು ಕೂಡ ಇಲ್ಲಿ ಒಂದು ಕಾರಣ. ಇಬ್ಬರ ಮಧ್ಯೆ ವಯಸ್ಸಿನ ಅಂತರ ಬಹಳ ಕಡಿಮೆ ಇದ್ದಾಗ್ಲೂ ಅಳಿಯ ಮತ್ತು ಅತ್ತೆಯ ನಡುವೆ ಸ್ನೇಹ ಅಥವಾ ಆಕರ್ಷಣೆ, ಪ್ರೀತಿಗೆ ತಿರುಗಬಹುದು.

TAGGED:Mother-in-law and son-in-law's love story: Mother-in-law eloped with future son-in-law before daughter's wedding!
Share This Article
Facebook Twitter Copy Link Print
Previous Article ಶಾಲೆಯ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಪಂ ಎದುರು ವಿದ್ಯಾರ್ಥಿನಿ ಏಕಾಂಗಿ ಹೋರಾಟ
Next Article Rich chief ministers ದೇಶದ 30 ಮುಖ್ಯಮಂತ್ರಿಗಳು ಕೋಟ್ಯಧಿಪತಿಗಳು, ಆಂಧ್ರದ ನಾಯ್ಡು ಅತಿ ಶ್ರೀಮಂತ, ಸಿದ್ದರಾಮಯ್ಯಗೆ ಎಷ್ಟನೇ ಸ್ಥಾನ?

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?