Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Friends swapped wives! ಹೆಂಡತಿಯರನ್ನೇ ಶಾಶ್ವತವಾಗಿ ವಿನಿಮಯ ಮಾಡಿಕೊಂಡ ಒಂದೇ ಹಳ್ಳಿಯ ಇಬ್ಬರು ಸ್ನೇಹಿತರು!
ದೇಶವೈರಲ್

Friends swapped wives! ಹೆಂಡತಿಯರನ್ನೇ ಶಾಶ್ವತವಾಗಿ ವಿನಿಮಯ ಮಾಡಿಕೊಂಡ ಒಂದೇ ಹಳ್ಳಿಯ ಇಬ್ಬರು ಸ್ನೇಹಿತರು!

Share
2 Min Read
SHARE

newsics.com

ಬಾರಾಬಂಕಿ: ಒಂದೇ ಹಳ್ಳಿಯ ಸ್ನೇಹಿತರಿಬ್ಬರು ತಮ್ಮ ಹೆಂಡತಿಯರನ್ನು ಪರಸ್ಪರ ವಿನಿಯಮ ಮಾಡಿಕೊಂಡಿದ್ದಾರೆ. ವಿಚಿತ್ರವೆನಿಸಿದರೂ ನಿಜದ ಘಟನೆ ಇದು. ಯಾವ ಸಿನಿಮಾದಲ್ಲೂ ನೋಡಿರದ ವಿಚಿತ್ರವಾದ ಕತೆ ಇದು.

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಈ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.

ಆಗಾಗ ಗೆಳೆಯನ ಮನೆಗೆ ಹೋಗುತ್ತಿದ್ದ ಯುವಕನಿಗೆ ತನ್ನ ಹೆಂಡತಿಗಿಂತ ಆಕೆಯೇ ತನಗೆ ಒಳ್ಳೆಯ ಜೋಡಿ ಎನಿಸಿತ್ತು. ಹೀಗಾಗಿ, ಆತ ಗೆಳೆಯನ ಹೆಂಡತಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ ಆಕೆಯೊಂದಿಗೆ ವಾಸವಾಗಿದ್ದಾನೆ. ಅದೇ ರೀತಿ ಆತನ ಗೆಳೆಯ ಕೂಡ ಇವನ ಹೆಂಡತಿಯೊಂದಿಗೆ ಸಂಸಾರ ನಡೆಸುತ್ತಿದ್ದಾನೆ!

ಇದೆಂಥಾ ಎಕ್ಸ್ಚೇಂಜ್ ಆಫರ್ ಎಂದು ನಿಮಗೆ ಅಚ್ಚರಿಯಾಗುವುದರಲ್ಲಿ ಅನುಮಾನವೇ ಇಲ್ಲ. ಗೆಳೆಯನ ಹೆಂಡತಿಯನ್ನು ಕೋರ್ಟ್ನಲ್ಲಿ ಮದುವೆಯಾಗಿರುವ ಯುವಕ ಆಕೆಯೊಂದಿಗೆ ಜೀವನ ನಡೆಸುತ್ತಿದ್ದಾನೆ. ಹೀಗಾಗಿ, ಅನಿವಾರ್ಯವಾಗಿ ಗಂಡನಿಗೆ ಬೇಡವಾದ ಹೆಂಡತಿ ಹಾಗೂ ಹೆಂಡತಿಗೆ ಬೇಡವಾದ ಗಂಡ ಇಬ್ಬರೂ ಸೇರಿ ಈಗ ದಾಂಪತ್ಯ ನಡೆಸುತ್ತಿದ್ದಾರೆ!

ಅನೂಪ್ ಎಂಬ ಯುವಕ ಈ ಬಗ್ಗೆ ದೂರು ನೀಡಿದ್ದಾನೆ. ತನ್ನ ಹೆಂಡತಿಯನ್ನು ತನ್ನ ಸ್ನೇಹಿತ ಪಪ್ಪು ಆತನ ಜತೆ ವಾಸಿಸುವಂತೆ ಒತ್ತಾಯಿಸಿ ಕರೆದುಕೊಂಡು ಹೋಗಿದ್ದಾನೆ. ಹೀಗಾಗಿ, ನಾನು ಅನಿವಾರ್ಯವಾಗಿ ಪಪ್ಪುವಿನ ಹೆಂಡತಿಯೊಂದಿಗೆ 4 ತಿಂಗಳಿನಿಂದ ವಾಸಿಸುತ್ತಿದ್ದೇನೆ ಎಂದು ಅನೂಪ್ ಹೇಳಿದ್ದಾನೆ.

ಪಪ್ಪು ಇದಕ್ಕೆ ಪ್ರತಿಕ್ರಿಯಿಸಿದ್ದು, ಅನೂಪ್‌ನ ಹೆಂಡತಿಯನ್ನು ಅವನ ಮನೆಗೆ ಕಳುಹಿಸಿದಾಗಲೆಲ್ಲಾ ಆತ ಆಕೆಗೆ ಹೊಡೆಯುತ್ತಾನೆ. ನನ್ನ ಹೆಂಡತಿ ಸವಿತಾ ಕೂಡ ಇದಕ್ಕೆ ಬೆಂಬಲ ನೀಡುತ್ತಿದ್ದಾಳೆ. ನನ್ನ ಹೆಂಡತಿಯೂ ಅನೂಪ್ ಹೆಂಡತಿಯೊಂದಿಗೆ ನಾನು ಕೋರ್ಟ್‌ನಲ್ಲಿ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಾಳೆ. ಹೀಗಾಗಿ, ನಾನು ಮತ್ತು ಅನೂಪನ ಹೆಂಡತಿ 4 ತಿಂಗಳಿನಿಂದ ಒಟ್ಟಿಗೆ ವಾಸಿಸುತ್ತಿದ್ದೇವೆ ಎಂದಿದ್ದಾರೆ.

ಅನೂಪ್ ಪತ್ನಿ ಲೋನಿ ಕತ್ರಾ ನಿವಾಸಿ. ತಾನು ಅನುಪ್ ಜತೆ ಎರಡು ವರ್ಷಗಳ ಹಿಂದೆ ಮದುವೆಯಾಗಿರುವುದಾಗಿ ಆಕೆ ಹೇಳಿದ್ದಾಳೆ. ಮದುವೆಯಾದ ಕೆಲವು ದಿನಗಳ ನಂತರ ಅನೂಪ್ ನನ್ನನ್ನು ಹೊಡೆಯಲು ಪ್ರಾರಂಭಿಸಿದ. ಜಗಳ ಮತ್ತು ಹಲ್ಲೆಯ ನಂತರ ಅನೂಪ್ ನನ್ನನ್ನು ನನ್ನ ತಾಯಿಯ ಮನೆಯಲ್ಲಿ ಬಿಟ್ಟು ಹೋಗಿದ್ದಾಗಿ ಆಕೆ ಹೇಳಿದ್ದಾಳೆ. ನಂತರ, ನಾನು ಸುಮಾರು ಒಂದೂವರೆ ವರ್ಷ ನನ್ನ ತಾಯಿಯ ಮನೆಯಲ್ಲಿದ್ದೆ. ನಂತರ ನನ್ನ ತಾಯಿಯ ಮನೆಯವರು ನನ್ನ ಮನವೊಲಿಸಿ ಅತ್ತೆಯ ಮನೆಗೆ ಕಳುಹಿಸಿದರು. ನಾನು ನನ್ನ ತಾಯಿಯ ಮನೆಯಿಂದ ಬಂದಾಗಿನಿಂದ, ಅನೂಪ್ ಪಪ್ಪು ಜತೆ ವಾಸಿಸಲು ನನ್ನ ಮೇಲೆ ಒತ್ತಡ ಹೇರುತ್ತಿದ್ದಾನೆ ಎಂದು ಆಕೆ ಹೇಳಿದ್ದಾಳೆ. ನಾನು ಪಪ್ಪು ಜತೆ ಹೋಗಲು ಒಪ್ಪದಿದ್ದರೆ ನನ್ನನ್ನು ಕೊಲ್ಲುವುದಾಗಿ ಗಂಡ ಬೆದರಿಕೆ ಹಾಕುತ್ತಾನೆ. ನೀನು ಪಪ್ಪು ಜತೆ ಗಂಡ ಹೆಂಡತಿಯಂತೆ ಬದುಕಬೇಕು ಎಂದು ಹೆದರಿಸಿದ್ದಾನೆ ಎಂದು ಆಕೆ ಹೇಳಿದ್ದಾಳೆ.

ನಾನು ಮನೆಯಲ್ಲಿ ಇಲ್ಲದಿದ್ದಾಗ ಅನೂಪ್ ಆಗಾಗ ನನ್ನ ಮನೆಗೆ ಬರುತ್ತಿದ್ದ. ಈ ಮಧ್ಯೆ, ನನ್ನ ಹೆಂಡತಿ ಮತ್ತು ಅನೂಪ್ ನಡುವೆ ಆತ್ಮೀಯತೆ ಹೆಚ್ಚಾಯಿತು. ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿದೆ. ಅನೂಪ್ ನನ್ನ ಹೆಂಡತಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಹೋಗುತ್ತಿಲ್ಲ. ಇಬ್ಬರೂ 4 ತಿಂಗಳಿನಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ. ಇಬ್ಬರೂ ಕೋರ್ಟ್ ಮದುವೆಯನ್ನೂ ಮಾಡಿಕೊಂಡಿದ್ದಾರೆ. ನನ್ನ ಹೆಂಡತಿ ನನಗೆ 10 ಸಾವಿರ ರೂಪಾಯಿಗಳನ್ನು ನೀಡಿ, ನಾನು ಕೂಡ ಅನೂಪನ ಪತ್ನಿಯೊಂದಿಗೆ ಕೋರ್ಟ್ ಮದುವೆ ಮಾಡಿಕೊಳ್ಳಬೇಕೆಂದು ಒತ್ತಡ ಹಾಕುತ್ತಿದ್ದಾಳೆ ಎಂದು ಪಪ್ಪು ಆರೋಪಿಸಿದ್ದಾರೆ. ಘಟನೆ ವಿಚಿತ್ರವಾಗಿರುವಂತೆ ಇವರ ಮಾತುಗಳೂ ಅಷ್ಟೇ ವಿಚಿತ್ರವಾಗಿವೆ.

ಪಾರ್ಕ್‌ನಲ್ಲೇ ವಿದ್ಯಾರ್ಥಿ ಜೋಡಿಯ ಪ್ರಣಯ: ವೈರಲ್ ವಿಡಿಯೋ ನೋಡಿ

ನೋರಾ ಫತೇಹಿ ಥರ ನೀನಾಗು… ಸುಂದರ ಮೈಕಟ್ಟಿಗಾಗಿ ಹೆಂಡತಿಗೆ ವ್ಯಾಯಾಮ ಮಾಡಿಸಿದ ಗಂಡ! ದೂರು ನೀಡಿದ ಪತ್ನಿ

ವಿಧಾನಸಭೆಯಲ್ಲಿ ‘RSS’ ಗೀತೆ ಹಾಡಿದ ಡಿ.ಕೆ ಶಿವಕುಮಾರ್ : ವೈರಲ್ ವಿಡಿಯೋ ನೋಡಿ

Viral ಬರಿಗೈಲಿ ಹಾವು ಹಿಡಿದ ಬಾಲಕ – ವೈರಲ್ ವಿಡಿಯೋ ನೋಡಿ

TAGGED:Two friends from the same village swapped wives forever!
Share This Article
Facebook Twitter Copy Link Print
Previous Article Anchor Anushree Marriage: ಆಗಸ್ಟ್ -28ರಂದು ಆ್ಯಂಕರ್ ಅನುಶ್ರೀ ಮದುವೆ; ಯಾವ ರೆಸಾರ್ಟ್?
Next Article Bomb Threat ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಗೆ ಬಾಂಬ್ ಬೆದರಿಕೆ

Popular Posts

Fast Track Court For Exam Paper Leak | ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

1 Min Read

Gokarn Temple New Rules | ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಇನ್ಮುಂದೆ ಸ್ಪರ್ಶ ದರ್ಶನ ಇಲ್ಲ; ಭಕ್ತರಿಗೆ ಹೊಸ ನಿಯಮ

1 Min Read

Daily Horoscope ಇಂದಿನ ದಿನ ಭವಿಷ್ಯ – 23 ಜುಲೈ 2026

2 Min Read

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read

You Might Also Like

ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read
ಕರ್ನಾಟಕದೇಶಪ್ರಮುಖ

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read
ಕರ್ನಾಟಕದೇಶಪ್ರಮುಖ

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read
ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?