newsics.com
ಒಂದು ಹಾವನ್ನು ನೋಡಿದ್ರೆ ಮೈಲಿಗಟ್ಟಲೇ ಓಡಿ ಹೋಗುವ ಜನರಿದ್ದಾರೆ. ಇನ್ನೂ ಕೆಲವರು ಹಾವುಗಳ ಹೆಸರು ಹೇಳಿದ್ರೆ ಸಾಕು, ಯಪ್ಪಾ.. ಅಂತ ಎದೆ ಉಸಿರು ಬಿಡುತ್ತಾರೆ. ಆದರೆ ಇಲೊಬ್ಬ ಬಾಲಕ ಬರಿಗೈಲಿ ಹಾವನ್ನು ಹಿಡಿದ್ದು, ಈ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಕುರಿತ ವಿಡಿಯೋವನ್ನು ಮಂಜು cop_manjumeena ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪುಟ್ಟ ಬಾಲಕ ಹಾವು ಹಿಡಿಯುತ್ತಿರುವ ದೃಶ್ಯವನ್ನು ಕಾಣಬಹುದು. ಆತ ಯಾವುದೇ ಭಯ, ಹಿಂಜರಿಕೆಯಿಲ್ಲದೆ ಬರಿಗೈಲಿ ಸಲೀಸಾಗಿ ಹಾವನ್ನು ಹಿಡಿದಿದ್ದಾನೆ.
ಈತನ ಧೈರ್ಯವನ್ನು ಕಂಡು ನೋಡುಗರು ಬೆರಗಾಗಿದ್ದಾರೆ.ಆಗಸ್ಟ್ 20 ರಂದು ಶೇರ್ ಮಾಡಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.