newsics.com
ಚಾಮರಾಜನಗರ: ‘ಪುಷ್ಪ’ ಸಿನಿಮಾ ಶೈಲಿಯಲ್ಲಿ ರಕ್ತಚಂದನ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಬಳಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತಬ್ರೇಜ್ ಖಾನ್, ಸಾದಿಕ್ ಪಾಷಾ ಬಂಧಿತರು.
ಸಿಐಡಿ ಫಾರೆಸ್ಟ್ ಸೆಲ್ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಟಾಟಾ ಸುಮೋ ವಾಹನದ ಹಿಂಬದಿ ಸೀಟ್ ಆಲ್ಟ್ರೇಷನ್ ಮಾಡಿ ಅನುಮಾನ ಬಾರದಂತೆ ರಕ್ತಚಂದನ ತುಂಡನ್ನು ಸಾಗಾಟ ಮಾಡುತ್ತಿದ್ದರು. ಬಂಧಿತರಿಂದ 205 ಕೆಜಿ ತೂಕದ 28 ರಕ್ತಚಂದನ ತುಂಡು, ಒಂದು ಟಾಟಾ ಸುಮೋ ವಾಹನವನ್ನು ವಶಕ್ಕೆ ಪಡೆದಿರುವ ಅರಣ್ಯ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
Gold Rate Today Bangalore: ಗುಡ್ ನ್ಯೂಸ್; ಚಿನ್ನದ ಬೆಲೆ ಇಳಿಕೆ; ಇಂದಿನ ಬಂಗಾರದ ಬೆಲೆ ಎಷ್ಟಿದೆ?
Missing person case ಅನನ್ಯಾ ಭಟ್ ನಿಜವಾಗ್ಲೂ ಸುಜಾತಾ ಭಟ್ ಮಗಳಾ? ಧರ್ಮಸ್ಥಳದ ನಾಪತ್ತೆ ಕೇಸ್ಗೆ ಬಿಗ್ ಟ್ವಿಸ್ಟ್