newsics.com
ಸ್ಯಾಂಡಲ್‌ವುಡ್‌ನ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ನಟಿ ಆಸಿಯಾ ಫಿರ್ದೋಸ್ ರಿಯಲ್ ಲೈಫ್‌ನಲ್ಲಿ ಹೀಗಿದ್ದಾರೆ ನೋಡಿ. ಸೀರಿಯಲ್‌ನಲ್ಲಿ ಸಿಂಪಲ್ ಸಿಂಪಲ್ ಆಗಿಯೇ ಕಾಣಿಸುತ್ತಾರೆ. ಆದರೆ, ರಿಯಲ್ ಲೈಫ್‌ನಲ್ಲಿ ಇಷ್ಟು ಮಾಡ್ರನ್ ಆಗಿದ್ದಾರೆ.
ಆಸಿಯಾ ಫಿರ್ದೋಸ್ ಈ ಹಿಂದೆ ಕನ್ಯಾಕುಮಾರಿ ಸೀರಿಯಲ್ ಮಾಡಿದ್ದಾರೆ. ಇದಲ್ಲದೇ ದ್ವಂದ್ವ ಚಿತ್ರದ ಮೂಲಕವೂ ಬೆಳ್ಳಿ ತೆರೆಗೆ ಕಾಲಿಟ್ಟಿದ್ದಾರೆ. ಇದೀಗ ಮತ್ತೊಮ್ಮೆ ಸೀರಿಯಲ್ ಲೋಕಕ್ಕೂ ಕಾಲಿಟ್ಟಿದ್ದಾರೆ. ಹಾಗೆ ವಾಪಾಸ್ ಬಂದ ಸೀರಿಯಲ್ ಈಗಾಗಲೇ ಹೇಳಿದಂತೆ ಶ್ರಾವಣಿ ಸುಬ್ರಮಣ್ಯನೇ ಆಗಿದೆ.
ಆಸಿಯಾ ಫಿರ್ದೋಸ್ ಸಿಂಪಲ್ ಆಗಿಯೂ ಕಾಣಿಸುತ್ತಾರೆ. ಮಾಡ್ರನ್ ಡ್ರೆಸ್‌ನಲ್ಲೂ ಮಿಂಚುತ್ತಾರೆ. ಟ್ರೆಡಿಷನಲ್ ಅನಿಸೋ ಡ್ರೆಸ್ ತೊಟ್ಟು ಕಾಣಿಸಿಕೊಳ್ಳುವುದು ಇದೆ. ಸೀರೆಯನ್ನ ಉಟ್ಟು ಹೊಳೆಯೋದು ಇದೆ. ಒಟ್ಟಾರೆ, ಆಸಿಯಾ ಫಿರ್ದೋಸ್ ಸ್ಪೆಷಲ್ ಆಗಿಯೇ ಕಾಣಿಸುತ್ತಾರೆ.
ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿದ್ದಾರೆ. ಆಗಾಗ ಹೊಸ ಹೊಸ ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ. ಆದ್ರೆ ಇದೀಗ ನಟಿ ಆಸಿಯಾ ಫಿರ್ದೋಸ್ ಬಾಲಿವುಡ್ ಬ್ಯೂಟಿಯಂತೆ ಕಂಗೊಳಿಸಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ನಟಿ ಆಸಿಯಾ ಫಿರ್ದೋಸ್ ಅಂದಕ್ಕೆ ಫಿದಾ ಆಗಿದ್ದಾರೆ.
https://www.instagram.com/reel/DNabjK8JsMM/?igsh=MTk1aGtiZmZ4bjQydw==