newsics.com
ಸಿಲಿಕಾನ್ ಸಿಟಿಯಲ್ಲಿ ಎರಡು ಶ್ವಾನಗಳು ಟೆಕ್ಕಿಯ ಮೇಲೆ ನಡೆಸಿದ್ದು,ಬೀದಿ ನಾಯಿಗಳಿಂದ ಬಚಾವ್ ಆಗೋದಕ್ಕೆ ಹೋಗಿದ್ದ ಟೆಕ್ಕಿಗೆ ಕಳ್ಳನ ಪಟ್ಟ ಸಿಕ್ಕಿದೆ. ಈ ಘಟನೆಯ ಬಗ್ಗೆ ಸಾಫ್ಟ್‌ವೇರ್ ಇಂಜಿನಿಯರ್ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಬೀದಿ ನಾಯಿಗಳ ಅಟ್ಯಾಕ್ನಿಂದ ಬಚಾವ್ ಆಗಲು ಹೋಗಿದ್ದ ಟೆಕ್ಕಿ ನಿವಾಸಿಗಳ ಕೈಗೆ ಲಾಕ್ ಆಗಿದ್ದಾನೆ. ಹೆಚ್ಎಸ್ಆರ್ ಲೇಔಟ್ನಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ರಾತ್ರಿ 11 ಗಂಟೆ ಸುಮಾರಿಗೆ ಕೆಲಸ ಮುಗಿಸಿ ನಡೆದುಕೊಂಡು ಟೆಕ್ಕಿ ಹೋಗುತ್ತಿದ್ದ. ಇದೇ ವೇಳೆ ಬೀದಿ ನಾಯಿಗಳು ಟೆಕ್ಕಿಯನ್ನ ಅಟ್ಟಿಸಿಕೊಂಡು ಬಂದಿವೆ.
ಕೂಡಲೇ ಕೆಲ ದೂರ ಓಡಿದ ಟೆಕ್ಕಿ, ಪಕ್ಕದಲ್ಲೇ ಇದ್ದ ಮನೆಯೊಂದರ ಕಾಂಪೌಂಡ್ ಹಾರಿದ್ದಾನೆ.ಇದೀಗ ಆ ಮನೆಯ ಮಾಲೀಕರು ಇವರನ್ನು ಕಳ್ಳ ಎಂದು ದೂರಿದ್ದಾರೆ. ಬಳಿಕ ಆತನ ಪೋನ್ ಕಿತ್ತುಕೊಂಡು ಪರಿಶೀಲನೆ ಮಾಡಿದ್ದಾರೆ. ನಂತರ ನೆರೆ ಹೊರೆಯವರೆಯಲ್ಲ ಸೇರಿ ಸಿಸಿಟಿವಿ ಪರಿಶೀಲನೆ ಮಾಡಿದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ. ವಿಚಾರ ತಿಳಿದ ಮೇಲೆ ಟೆಕ್ಕಿಯನ್ನ ನಿವಾಸಿಗಳು ಬಿಟ್ಟು ಕಳುಹಿಸಿದ್ದಾರೆ. ಇನ್ನೂ, ಈ ಬಗ್ಗೆ ತನ್ನ ರೆಡ್ ಇಟ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾನೆ.
