ಕೆಲಸ ಒಂದೇ ನನ್ನ ಜಗತಿ ಎನ್ನುವ ಗಂಡಸರ ಮುಂದೆ ಈ ವ್ಯಕ್ತಿ ವಿಭಿನ್ನವಾಗಿ ಕಾಣುತ್ತಾರೆ. ತನ್ನ ಗರ್ಭಿಣಿ ಪತ್ನಿಯನ್ನು ನೋಡಿಕೊಳ್ಳಲು 1.2 ಕೋಟಿ ರೂ. ಸಂಬಳ ಸಿಗುವ ಕೆಲಸವನ್ನು ಬಿಟ್ಟಿದ್ದಾರೆ.
ಈ ಬಗ್ಗೆ ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದು, ನನ್ನ ಗರ್ಭಿಣಿ ಪತ್ನಿಯನ್ನು ನೋಡಿಕೊಳ್ಳಲು 1 ಕೋಟಿಕ್ಕಿಂತ ಹೆಚ್ಚು ಸಂಬಳ ಬರುವ ಕೆಲಸವನ್ನು ತ್ಯಜಿಸಿದೆ. ಅದು ತುಂಬಾ ಆರಾಮ ಹಾಗೂ ಮನೆಯಿಂದಲೇ ಮಾಡುವ ಕೆಲಸ ಆಗಿತ್ತು. ಮೊದಲು ನನ್ನ ಕೆಲಸವನ್ನು ಬಿಡಲು, ಪತ್ನಿ ಒತ್ತಾಯಿಸಿದರು, ಆದರೆ ನಾನೇ ಹೋಗುವೆ ಎಂದು ಹೇಳಿದ್ದೆ.
ಆದರೆ ನನ್ನ ಪತ್ನಿಯ ಜವಾಬ್ದಾರಿ ನನ್ನದು, ನಾನು ಇದನ್ನು ನಿಭಾಯಿಸಲೇಬೇಕು. ಅದಕ್ಕಾಗಿ ನನ್ನ ಸಂಪೂರ್ಣ ಸಮಯವನ್ನು ಅವಳಿಗಾಗಿ ನೀಡಿಬೇಕು. ಅದಕ್ಕಾಗಿ ಈ ಕೆಲಸ ಬಿಟ್ಟಿದ್ದೇನೆ. ಒಂದು ವೇಳೆ ಮತ್ತೆ ಸೇರಿಕೊಳ್ಳಬೇಕು ಎಂದರೆ, ಆ ಅವಕಾಶ ಇದೆ. ಆದರೆ, ನನ್ನ ಕಾಲೇಜು ಮುಗಿದ 7 ವರ್ಷದ ನಂತರ ಈ ಕೆಲಸ ಸಿಕ್ಕಿದೆ. ಅಲ್ಲಿಂದ ಇಲ್ಲಿಯವರೆಗೆ ಸಂಬಳ ಕೂಡ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
