newsics.com
ತುಮಕೂರು: ಕೊರಟಗೆರೆ ರಸ್ತೆಗಳಲ್ಲಿ ಶವದ ತುಂಡುಗಳು ಪತ್ತೆಯಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅಳಿಯನೇ ಅತ್ತೆಯ ಕೊಲೆ ಮಾಡಿಸಿರುವ ವಿಷಯ ಈಗ ಬಹಿರಂಗವಾಗಿದೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಮತಕ್ಷೇತ್ರ ಕೊರಟಗೆರೆಯಲ್ಲಿ ರಸ್ತೆಯ 3 ಕಿಲೋಮೀಟರ್ ಉದ್ದಕ್ಕೂ ಶವದ ತುಂಡುಗಳು ಪತ್ತೆಯಾಗಿದ್ದವು. ಗೃಹಸಚಿವರ ಕ್ಷೇತ್ರದಲ್ಲೇ ನಡೆದ ಈ ಪ್ರಕರಣ ಸಹಜವಾಗಿಯೇ ಸೆನ್ಸೇಷನ್‌ಗೆ ಕಾರಣವಾಗಿತ್ತು.
ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಶವದ ಜಾಡು ಹಿಡಿದು ಹೊರಟ ಪೊಲೀಸರೇ ಶಾಕ್‌ಗೆ ಒಳಗಾಗಿದ್ದಾರೆ.
ಮಹಿಳೆಯನ್ನು ಕೊಲೆ ಮಾಡಿ ಮೃತ ದೇಹ ತುಂಡರಿಸಿ ರಸ್ತೆಯಲ್ಲಿ ಬಿಸಾಡಿದ್ದ ಈ ಪ್ರಕರಣದ ರೂವಾರಿಯೇ ಕೊಲೆಯಾದ ಮಹಿಳೆಯ ಅಳಿಯ. ಮೃತ ಲಕ್ಷ್ಮೀದೇವಮ್ಮಳ ಅಳಿಯನೇ ಈ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ.
ವೃತ್ತಿಯಲ್ಲಿ ದಂತ ವೈದ್ಯನಾಗಿರುವ ಡಾ. ರಾಮಚಂದ್ರ ತನ್ನ ಸ್ನೇಹಿತ ಸತೀಶ್ ಹಾಗೂ ಕಿರಣನ ಜತೆ ಸೇರಿ ಹತ್ಯೆ ಮಾಡಿದ್ದಾನೆ.
ಕೋಳಾಲದಲ್ಲಿ ಇರುವ ಸ್ನೇಹಿತ ಸತೀಶ್ ಎಂಬಾತನ ಫಾರ್ಮ್ ಹೌಸ್ನಲ್ಲಿ ಕೊಲೆ ಮಾಡಿ ದೇಹದ ಭಾಗಗಳನ್ನು ಪೀಸ್ ಪೀಸ್ ಮಾಡಿ ಎಸೆಯಲಾಗಿತ್ತು. ಬಳಿಕ ಆರೋಪಿಗಳು ಧರ್ಮಸ್ಥಳ ಯಾತ್ರೆಗೆ ಹೋಗಿದ್ದರು. ಅತ್ತೆಯ ಕೊಲೆ ಆದರೂ ಅಳಿಯ ಸ್ಥಳದಲ್ಲಿ ಇಲ್ಲದಿರುವುದರಿಂದ ಅನುಮಾನಗೊಂಡ ಪೊಲೀಸರು ವಿಚಾರಣೆ ಮಾಡಿದ್ದಾರೆ. ಆಗ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಕೊರಟಗೆರೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
Selfie craze ಕಾಡಾನೆ ಜತೆ ಸೆಲ್ಫೀ… ಪ್ರವಾಸಿಗನನ್ನು ಅಟ್ಟಾಡಿಸಿ ತುಳಿದ ಆನೆ! ಭಯಾನಕ ವಿಡಿಯೋ ನೋಡಿ
15 ತಿಂಗಳ ಪುಟ್ಟ ಕಂದಮ್ಮನಿಗೆ ಕಚ್ಚಿ , ಕ್ರೂರವಾಗಿ ಹಲ್ಲೆ ನಡೆಸಿದ ‘ಡೇ ಕೇರ್’ ಸಿಬ್ಬಂದಿ : ವೈರಲ್ ವಿಡಿಯೋ ನೋಡಿ
Coolie Cinema ರಜನಿ ಮೇನಿಯಾ… ಕೂಲಿ ಸಿನಿಮಾ ಪ್ರತಿ ಟಿಕೆಟ್‌ಗೆ 2 ಸಾವಿರ ರೂಪಾಯಿ!