Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಸು ಫ್ರಂ ಸೋ ಸಿನಿಮಾದ ಬಜೆಟ್ ಬಗ್ಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು?
ಪ್ರಮುಖಮನರಂಜನೆ

ಸು ಫ್ರಂ ಸೋ ಸಿನಿಮಾದ ಬಜೆಟ್ ಬಗ್ಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು?

Share
2 Min Read
SHARE

newsics.com

‘ಸು ಫ್ರಂ ಸೋ’ ಕನ್ನಡ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ.
ಈ ನಡುವೆ ಸಿನಿಮಾದ ಬಜೆಟ್ ಬಗ್ಗೆ ಕೆಲವು ಅಂತೆ-ಕಂತೆಗಳು ಹರಿದಾಡುತ್ತಿದ್ದವು, ರಾಜ್ ಬಿ ಶೆಟ್ಟಿ, ಇದೀಗ ಬಜೆಟ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ನಿನ್ನೆಯಷ್ಟೆ ಹೈದರಾಬಾದ್ನಲ್ಲಿ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ರಾಜ್ ಬಿ ಶೆಟ್ಟಿಗೆ ಅಲ್ಲಿಯೂ ಇದೇ ಪ್ರಶ್ನೆ ಎದುರಾಗಿದೆ. ‘ನಿಮ್ಮ ಸಿನಿಮಾದ ಬಜೆಟ್ ಕೇವಲ 1.50 ಕೋಟಿ ರೂಪಾಯಿಗಳಂತಲ್ಲಾ, ಇದು ನಿಜವೇ?’ ಎಂದು ಮಾಧ್ಯಮದವರು ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾಡಿದ ರಾಜ್ ಬಿ ಶೆಟ್ಟಿ, ‘ಸಣ್ಣ ಸಿನಿಮಾಗಳು ದೊಡ್ಡ ಯಶಸ್ಸು ಗಳಿಸಿದಾಗ ಇಂಥಹಾ ಸುದ್ದಿಗಳು ಹುಟ್ಟಿಕೊಳ್ಳುತ್ತವೆ, ಬಹಳ ಕಡಿಮೆ ಬಜೆಟ್ನಲ್ಲಿ ಸಿನಿಮಾ ಮಾಡಲಾಗಿದೆ ಎಂದು ಹೇಳಿ ಸಿನಿಮಾದ ಯಶಸ್ಸನ್ನು ಇನ್ನಷ್ಟು ದೊಡ್ಡದು ಮಾಡುವ ಪ್ರಯತ್ನ ಮಾಡಲಾಗುತ್ತದೆ. ಆದರೆ ನಮ್ಮ ಸಿನಿಮಾದ ಬಜೆಟ್ 1.50 ಕೋಟಿ ಅಲ್ಲ. ನಾನು ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಮಾಡಿದಾಗಲೇ ಆ ಸಿನಿಮಾದ ಬಜೆಟ್ 1.80 ಕೋಟಿ ಆಗಿತ್ತು. ಆಗಿನ ಪರಿಸ್ಥಿತಿಗೂ ಬಹಳ ವ್ಯತ್ಯಾಸವಿದೆ. ಈಗೆಲ್ಲ ಅಷ್ಟು ಕಡಿಮೆ ಬಜೆಟ್ ನಲ್ಲಿ ಚಿತ್ರಮಂದಿರದ ಎಕ್ಸ್ಪೀರಿಯನ್ಸ್ ಕೊಡುವ ಸಿನಿಮಾ ಮಾಡಲು ಆಗದು’ ಎಂದಿದ್ದಾರೆ.
ಮುಂದುವರೆದು ಮಾತನಾಡಿ, ‘ನಮ್ಮಲ್ಲಿ ಕೆಲವು ಒಳ್ಳೆಯ ಮತ್ತು ಬ್ಯುಸಿ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ಸುಮಾರು 30 ಮಂದಿ ರಂಗಭೂಮಿ ಹಿನ್ನೆಲೆಯ, ಅನುಭವಿ ಕಲಾವಿದರನ್ನು ಬಳಸಿ ಸುಮಾರು 50ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಅವರಿಗೆಲ್ಲ ಒಳ್ಳೆಯ ಸಂಭಾವನೆಯನ್ನೇ ಕೊಟ್ಟಿದ್ದೇವೆ. ಇನ್ನು ಸಂಗೀತ, ಪೋಸ್ಟ್ ಪ್ರೊಡಕ್ಷನ್ಗೆಲ್ಲ ಸಾಕಷ್ಟು ಹಣ ಖರ್ಚಾಗಿದೆ. ನಿಖರವಾಗಿ ಹೇಳುವುದಾದರೆ ನಮ್ಮ ನಿರ್ಮಾಣ ವೆಚ್ಚವೇ 4.50 ಕೋಟಿ ಆಗಿದೆ. ಅದರ ಮೇಲೆ ಪ್ರಚಾರಕ್ಕೆ ಸುಮಾರು 1 ಕೋಟಿ ವರೆಗೂ ಖರ್ಚಾಗಿದೆ’ ಎಂದಿದ್ದಾರೆ.
ಅಲ್ಲಿಗೆ, ಸ್ವತಃ ರಾಜ್ ಬಿ ಶೆಟ್ಟಿಯವರೇ ಹೇಳಿರುವಂತೆ ಸಿನಿಮಾಕ್ಕೆ 5.50 ಕೋಟಿ ರೂಪಾಯಿ ಖರ್ಚಾಗಿದೆ. ಆದರೆ ಸಿನಿಮಾ ಬಿಡುಗಡೆ ಆಗಿ 13 ದಿನಗಳಲ್ಲಿ 50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹಾಕಿದ ಬಜೆಟ್ನ 10 ಪಟ್ಟು ಲಾಭವನ್ನು ಈಗಾಗಲೇ ಸಿನಿಮಾ ಗಳಿಸಿದೆ. ಇನ್ನೂ ಇಂದಿನಿಂದ ಆಂಧ್ರ-ತೆಲಂಗಾಣಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದ್ದು, ಮೈತ್ರಿ ಮೂವಿ ಮೇಕರ್ಸ್ನವರು ಸಿನಿಮಾದ ವಿತರಣೆ ಮಾಡಿದ್ದಾರೆ. ಅಲ್ಲಿಯೂ ಸಹ ಉತ್ತಮ ಗಳಿಕೆ ಆಗುವ ನಿರೀಕ್ಷೆ ಇದೆ. ಈ ಸಿನಿಮಾವನ್ನು ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡಿ ಜೆಪಿ ತುಮ್ಮಿನಾಡ್ ನಿರ್ದೇಶನ ಮಾಡಿದ್ದಾರೆ.

ಕೈ ತೆಕ್ಕೆಗೆ ಮತ್ತೆ ಕಲಬುರಗಿ‌ ಪಾಲಿಕೆ: ವರ್ಷಾ ಜಾನೆ ಮೇಯರ್, ತೃಪ್ತಿ ಲಾಕೆ ಉಪಮೇಯರ್

TAGGED:What did Raj B Shetty say about the budget of the movie 'Su from So'?
Share This Article
Facebook Twitter Copy Link Print
Previous Article Today’s prediction ಇಂದಿನ ರಾಶಿ ಭವಿಷ್ಯ, 07-08-2025, ಗುರುವಾರ, ಇಂದು ಹೇಗಿದೆ ನಿಮ್ಮ ಅದೃಷ್ಟ?
Next Article Train delay 7 ಗಂಟೆ ತಡವಾಗಿ ಬಂದ ಬಸವ ಎಕ್ಸ್‌ಪ್ರೆಸ್ ರೈಲು!

Popular Posts

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read

ಪ್ರಿಯ ಮಿತ್ರ ನರೇಂದ್ರ, ಜೈ ಹಿಂದ್; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್

1 Min Read

You Might Also Like

ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read
ಪ್ರಮುಖಮನರಂಜನೆ

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

1 Min Read
ಪ್ರಮುಖಕರ್ನಾಟಕ

9 ವರ್ಷಗಳ ಕಾನೂನು ಹೋರಾಟಕ್ಕೆ ತೆರೆ; ಚೈತ್ರಾ ಕುಂದಾಪುರ ಭಾವುಕ ಪೋಸ್ಟ್

1 Min Read
ಪ್ರಮುಖಮನರಂಜನೆ

Nivedita Gowda: ಗರಿ ಬಿಚ್ಚಿ ಕುಣಿದ ನಿವೇದಿತಾ ಗೌಡ- ಕಿಶನ್! ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?