newsics.com
ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರಟ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಘಟನೆ ನಡೆದಿದೆ.
ಬೆಂಗಳೂರು ಕೋಲ್ಕತಾ ಏರ್ ಇಂಡಿಯಾ ವಿಮಾನ ಆಂಧ್ರಪ್ರದೇಶ ಗಡಿಯಲ್ಲಿ ಸಾಗುತ್ತಿದ್ದಂತೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ನಡೆದಿದೆ. ಬಳಿಕ ವಿಮಾನ ತುರ್ತು ಭೂಸ್ಪರ್ಶಗೊಂಡಿದೆ.
ಕೋಲ್ಕತಾಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಬೆಂಗಳೂರು ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಬೋರ್ಡಿಂಗ್ ಮಾಡಿತ್ತು. ನಿಗದಿತ ಸಮಯದಲ್ಲಿ ವಿಮಾನ ಟೇಕ್ ಆಫ್ ಆಗಿತ್ತು. ಬೆಂಗಳೂರಿನಿಂದ ಟೇಕ್ ಆಫ್ ಆದ ವಿಮಾನ ಬೆಂಗಳೂರು ದಾಟಿ ಆಂಧ್ರಪ್ರದೇಶ ಗಡಿ ಪ್ರವೇಶಿಸುತ್ತಿದ್ದಂತೆ ತಾಂತ್ರಿಕ ದೋಷ ಎದುರಾಗಿದೆ. ತಕ್ಷಣವೇ ಪೈಲಟ್ ಹಾಗೂ ಕೋ ಪೈಲಟ್ ಕಾರ್ಯಪ್ರವೃತ್ತರಾಗಿದ್ದಾರೆ. ಏರ್ ಕಂಟ್ರೋಲ್ ರೂಂಗೆ ತುರ್ತು ಮಾಹಿತಿ ರವಾನಿಸಿದ್ದಾರೆ.
ಅರ್ಧ ಗಂಟೆ ಬಳಿಕ ತುರ್ತು ಭೂಸ್ಪರ್ಶ
ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷದ ಮಾಹಿತಿ ಸಿಕ್ಕ ಕಂಟ್ರೋಲ್ ರೂಂ ವಿಮಾನ ತುರ್ತು ಲ್ಯಾಂಡಿಂಗ್ ಮಾಡಲು ವ್ಯವಸ್ಥೆ ಮಾಡಿತ್ತು.
ಏರ್ ಇಂಡಿಯಾ ವಿಮಾನ ಸುಮಾರು ಅರ್ಧ ಗಂಟೆ ಕಾಲ ಆಗಸದಲ್ಲಿ ಸುತ್ತಾಡಿ ಇಂಧನ ಖಾಲಿ ಮಾಡುವ ಪ್ರಯತ್ನ ಮಾಡಿತ್ತು. ಬಳಿಕ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.