newsics.com
ನವದೆಹಲಿ: ಭಾರತದಾದ್ಯಂತ ಫಾಸ್ಟ್‌ಸ್ಟ್ಯಾಗ್ ವಹಿವಾಟಿನಲ್ಲಿ ಕಳೆದ ಮೂರೂವರೆ ವರ್ಷಗಳಲ್ಲಿ ತಮಿಳುನಾಡು ಮುಂಚೂಣಿಯಲ್ಲಿದೆ.
ಲೋಕಸಭೆಯಲ್ಲಿ ಮಂಡಿಸಿದ ಮಾಹಿತಿ ಪ್ರಕಾರ, 2022ರಿಂದ 2025ರ ಜೂನ್ ವರೆಗೆ 1.26 ಬಿಲಿಯನ್ (126 ಕೋಟಿ) ವಹಿವಾಟು ನಡೆಸುವ ಮೂಲಕ ತಮಿಳುನಾಡು ಅಗ್ರಸ್ಥಾನ ಕಾಯ್ದುಕೊಂಡಿದೆ.
ಇದೇ ಅವಧಿಯಲ್ಲಿ ಉತ್ತರ ಪ್ರದೇಶ ಮತ್ತು ಕರ್ನಾಟಕ ಕ್ರಮವಾಗಿ 1.19 ಬಿಲಿಯನ್ (119 ಕೋಟಿ) ಹಾಗೂ ಹಾಗೂ 1.12 ಬಿಲಿಯನ್ (112 ಕೋಟಿ) ವಹಿವಾಟು ದಾಖಲಾಗಿದೆ. ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಕ್ರಮವಾಗಿ 1 ಬಿಲಿಯನ್ (100 ಕೋಟಿ) ಮತ್ತು 919 ಮಿಲಿಯನ್ (91.9 ಕೋಟಿ) ವಹಿವಾಟು ಆಗಿದೆ.
2022ರಿಂದ 2024ರ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಶೇ.30.09ರಷ್ಟು ಬೆಳವಣಿಗೆಯಾಗಿದೆ. ಇದಕ್ಕೆ ವಿರುದ್ಧವಾಗಿ ತಮಿಳುನಾಡಿನಲ್ಲಿ ಎರಡು ವರ್ಷಗಳಲ್ಲಿ ಸುಮಾರು ಶೇ.16.8ರಷ್ಟು ಬೆಳವಣಿಗೆಯಾಗಿದೆ. ಒಟ್ಟಾರೆಯಾಗಿ ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದಿಂದ ಫಾಸ್ಟ್‌ಸ್ಟ್ಯಾಗ್ ಚಟುವಟಿಕೆಗೆ ಗಣನೀಯ ಕೊಡುಗೆ ನೀಡಿದಂತಾಗಿದೆ. 2022ರಿಂದ 2025ರವರೆಗೆ ಐದು ರಾಜ್ಯಗಳು ಸೇರಿ 3.71 ಬಿಲಿಯನ್ ವಹಿವಾಟು ನಡೆಸಿದೆ. ಇದು ರಾಷ್ಟ್ರದ ಒಟ್ಟು 13.69 ಬಿಲಿಯನ್ ವಹಿವಾಟಿನಲ್ಲಿ ಸರಿಸುಮಾರು ಶೇ.27.1ರಷ್ಟಿದೆ.
https://www.newsics.com/2025/08/01/71st-national-film-awards-announced/