newsics.com
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಗೆ ಜಾಮೀನಿನ ಟೆನ್ಷನ್ ಹೆಚ್ಚಿದೆ. ಜುಲೈ 24 ರಂದು ಸುಪ್ರೀಂ ಕೋರ್ಟ್ನಲ್ಲಿ ನಟ ದರ್ಶನ್ ಸೇರಿದಂತೆ 7 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಬೇಲ್ ಮಂಜೂರು ಮಾಡಿದ ಕ್ರಮವನ್ನು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದ್ದು, ಹೈಕೋರ್ಟ್ನನ್ನು ತರಾಟೆಗೆ ತೆಗೆದುಕೊಂಡಿತ್ತು. ಇದರ ನಡುವೆಯೇ ವಿದೇಶದಿಂದ ನಟ ದರ್ಶನ್ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ.
ಡೆವಿಲ್ ಸಿನಿಮಾ ಶೂಟಿಂಗ್ಗಾಗಿ ವಿದೇಶಕ್ಕೆ ತೆರಳಿದ್ದ ನಟ ದರ್ಶನ್ ಇದೀಗ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ. ಜುಲೈ 25ರ ರಾತ್ರಿ 11:45ರ ಸುಮಾರಿಗೆ ವಿಮಾನದಲ್ಲಿ ಥೈಲ್ಯಾಂಡ್ನಿಂದ ಹಿಂತಿರುಗಿದ್ದಾರೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ನಿ ವಿಜಯಲಕ್ಷ್ಮಿ ಹಾಗೂ ಆಪ್ತ ಧನ್ವೀರ್ ಜೊತೆ ನಟ ದರ್ಶನ್ ಕಾಣಿಸಿಕೊಂಡ್ರು.
ಕೆಂಪೇಗೌಡ ವಿಮಾನ ನಿಲ್ದಾಣದಿಂದ ಪತ್ನಿ ವಿಜಯಲಕ್ಷ್ಮಿ ಜೊತೆಯಲ್ಲಿ ಕಾರಿನಲ್ಲಿ ನಟ ದರ್ಶನ್ ಮನೆಯತ್ತ ಪ್ರಯಾಣ ಬೆಳೆಸಿದ್ರು. ನಟ ಧನ್ವೀರ್ ಮತ್ತೊಂದು ಕಾರಿನಲ್ಲಿ ತೆರಳಿದ್ದಾರೆ. ವಿದೇಶದಲ್ಲಿ ಸಿನಿಮಾ ಶೂಟಿಂಗ್ ಮುಗಿಸಿ ವಾಪಾಸ್ ಆದ ನಟ ದರ್ಶನ್ ಮುಖದಲ್ಲಿ ಬೇಲ್ ಟೆನ್ಷನ್ ಎದ್ದು ಕಾಣ್ತಿತ್ತು
ಜಾಮೀನಿನ ಬಗ್ಗೆ ನಟ ದರ್ಶನ್ ಚಿಂತಿತರಾದಂತೆ ಕಾಣ್ತಿದ್ದಾರೆ. ಸುಪ್ರೀಂ ಕೋರ್ಟ್ ವಾದ-ಪ್ರತಿವಾದ ಆಲಿಸಿದ್ದು, ತೀರ್ಪು ಕಾಯ್ದಿರಿಸಿದೆ. 10 ದಿನಗಳ ಬಳಿಕ ದರ್ಶನ್ ಜಾಮೀನು ತೀರ್ಪು ಹೊರಬರಲಿದೆ ಎನ್ನಲಾಗಿದೆ.
ಧರ್ಮಸ್ಥಳದಿಂದಲೇ ತನಿಖೆ ಶುರು; SIT ಅಧಿಕಾರಿಗಳಿಗೆ ಫೈಲ್ ಹಸ್ತಾಂತರ,ಅನಾಮಿಕನನ್ನ ವಶಕ್ಕೆ ಪಡೆಯೋ ಸಾಧ್ಯತೆ