ಮೈಸೂರು: ಮೈಸೂರು ನಗರದ ಪಡುವಾರಳ್ಳಿಯಲ್ಲಿ ರಾಕೇಶ್ ಟಿಫಾನಿಸ್ ಎಂಬ ಹೆಸರಿನ ಹೋಟೆಲ್ ಕೇವಲ 10/- ರೂಪಾಯಿಗಳಲ್ಲಿ ಬೆಳಗಿನ ತಿಂಡಿಯನ್ನು ಜನರಿಗೆ ಕೊಡುತ್ತಿದೆ.
ಕಳೆದ 28 ವರ್ಷಗಳಿಂದ ಇವರ ತಿಂಡಿಯ ಬೆಲೆ ಬಡವರ ಕೈ ಎಟಕುವಂತದ್ದು, ಹೊಟ್ಟೆ ತುಂಬಿಸುವಂತದ್ದು. ಇದರ ಮಾಲೀಕ ಜ್ಞಾನೇಶ್ ಅವರು 28 ವರ್ಷ ದಿಂದ ಈ ಹೋಟಲ್ ಅನ್ನು ನಡೆಸುತ್ತಿದ್ದಾರೆ. ದುಡ್ಡು ಇಲ್ಲದ ಬಡವರಿಗೆ ಈ ಹೋಟೆಲ್ ಮನೆಯಂತೆ ಎಂದು ಹೇಳಬಹುದು.
ಇವರು ಪ್ರಾರಂಭದಲ್ಲಿ ಒಂದು ರೂಪಾಯಿಯಿಂದ ತಿಂಡಿಗಳನ್ನು ನೀಡಲು ಪ್ರಾರಂಭ ಮಾಡುತ್ತಾರೆ. ಅದಕ್ಕೆ ಕಾರಣವೇನೆಂದರೆ ಬರುವ ಗ್ರಾಹಕರ ಬಳಿ ದುಡ್ಡು ಇರಬಹುದು ಅಥವಾ ಇಲ್ಲದೆಯೂ ಇರಬಹುದು ಆದರೆ ಹೊಟ್ಟೆ ಹಸಿದುಕೊಂಡವರಿಗೆ ಹೊಟ್ಟೆ ತುಂಬ ಅನ್ನ ನೀಡಿ ಕಳಿಸಬೇಕು ಎಂಬ ಉದ್ದೇಶದಿಂದ ಈ ಹೋಟೆಲ್ ಅನ್ನು ಪ್ರಾರಂಭ ಮಾಡಲಾಯಿತು. ಇಲ್ಲಿ ಪುಳಿಯೋಗರೆ,ಪೂರಿ ಚಪಾತಿ, ಇಡ್ಲಿ-ವಡಾ ನೀಡಲಾಗುತ್ತದೆ. ಯಾವುದೇ ತಿಂಡಿ ತೆಗೆದುಕೊಂಡರೂ ಕೇವಲ ಹತ್ತು ರೂಪಾಯಿ ಮಾತ್ರ.
ಬೆಳಿಗ್ಗೆಯಿಂದ ಹಿಡಿದು ಮಧ್ಯಾಹ್ನದವರೆಗೆ ಇಲ್ಲಿ ಪ್ರತಿನಿತ್ಯವೂ ತಿಂಡಿ ಸಿಗುತ್ತದೆ. ಮಹಾರಾಣಿ ಕಾಲೇಜು, ಗಂಗೋತ್ರಿ ಕಾಲೇಜು , ಗಾರೆ ಕೆಲಸ ಮಾಡುವವರು. ಈ ಹೋಟೆಲ್ ಗೆ ಪ್ರತಿನಿತ್ಯವೂ ಬರುತ್ತಾರೆ. ರುಚಿಯೂ ಸಹ ಬಹಳ ಚೆನ್ನಾಗಿದೆ ಎಂದು ಹೇಳಬಹುದು. ಜ್ಞಾನೇಶ್ ಅವರಿಗೆ ಈ ವಿಚಾರದ ಬಗ್ಗೆ ಕೇಳಿದಾಗ ಲಕ್ಷಾಂತರ ದುಡಿಯುವ ಉದ್ದೇಶದಿಂದ ಹೋಟೆಲ್ ಉದ್ಯಮಕ್ಕೆ ಬರಲಿಲ್ಲ ಕೆಲ ಸಾವಿರಗಳು ನನ್ನ ಮನೆ ನಡೆಯಲು ಸಾಕು, ಯಾರಾದರೂ ಹಸಿದುಕೊಂಡಿದ್ದರೆ ನೋವಾಗುತ್ತದೆ. ಕಾರಣ ಒಂದು ಕಾಲದಲ್ಲಿ ನಾವೂ ಹಸಿವು ನೋಡಿದ್ದೇವೆ ಎಂಬ ಮಾತನ್ನು ಹೇಳುತ್ತಾರೆ. ದುಡಿಯಬಹುದು.